ಎಂಟು ತಲೆಮಾರುಗಳ ಸಂಗೀತ ಪರಂಪರೆಯ ವಾರಸುದಾರ, ಸಾರಂಗಿಯ ನಾದದಲ್ಲಿ ಮಾನವೀಯತೆಯ ಸಂದೇಶ ಸಾರುತ್ತಿರುವ ಅಪರೂಪದ ಕಲಾವಿದ

ಹೆಸರಿನಲ್ಲಿ ಧರ್ಮವಿರಬಹುದು. ಆದರೆ ಸಂಗೀತಕ್ಕೆ ಧರ್ಮದ ಹಂಗಿಲ್ಲ. ಮುಸ್ಲಿಂ ಕುಟುಂಬದಲ್ಲಿ ಜನಿಸಿದರೂ ತಮ್ಮ ಸಂಗೀತದ ಮೂಲಕ ಧರ್ಮಕ್ಕಿಂತ ಮಾನವೀಯತೆ ಮತ್ತು ಕಲೆಯೇ ದೊಡ್ಡದು ಎಂಬ ಸಂದೇಶ ಸಾರುತ್ತಾ, ಬಸವಣ್ಣನವರ ವಚನಗಳು, ಅಕ್ಕಮಹಾದೇವಿಯವರ ಭಕ್ತಿಗೀತೆಗಳು, ಪುರಂದರದಾಸರು ಮತ್ತು ಕನಕದಾಸರ ದಾಸರ ಪದಗಳನ್ನು ಹಿಂದೂಸ್ತಾನಿ ಸಂಗೀತದ ರಾಗಗಳಲ್ಲಿ ಸುಶ್ರಾವ್ಯವಾಗಿ ಹಾಡಿ ಕನ್ನಡಿಗರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ. ಸಾರಂಗಿಯ ತಂತಿಗಳಲ್ಲಿ ಮಾನವ ಧ್ವನಿಯ ಭಾವನೆಗಳನ್ನು ಮೂಡಿಸುವ ಈ ಕಲಾವಿದ. ಉಸ್ತಾದ್ ಫೈಯಾಜ್ ಖಾನ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ustad1

 ಎಂಟು ತಲೆಮಾರುಗಳ ಸಂಗೀತ ಪರಂಪರೆ

1968ರ ಫೆಬ್ರವರಿ 17ರಂದು ಧಾರವಾಡದಲ್ಲಿ ಜನಿಸಿದ ಫೈಯಾಜ್ ಖಾನ್ ಅವರ ಕುಟುಂಬದ ಸಂಗೀತ ಪರಂಪರೆ ಎಂಟು ತಲೆಮಾರುಗಳಷ್ಟು ಹಳೆಯದು. ಅವರ ಕುಟುಂಬದ ಬೇರುಗಳು ಗ್ವಾಲಿಯರ್‌ನಲ್ಲಿದ್ದು, ಪೂರ್ವಜರು ಮೈಸೂರು ಮಹಾರಾಜರು ಮತ್ತು ಹೈದರಾಬಾದ್ ನವಾಬರ ಆಸ್ಥಾನಗಳಲ್ಲಿ ಸಂಗೀತ ಸೇವೆ ಸಲ್ಲಿಸಿದ್ದರು. ಅವರ ಅಜ್ಜ ಅಬ್ದುಲ್ ಕರೀಂ ಖಾನ್ ಪ್ರಸಿದ್ಧ ಸಾರಂಗಿ ವಾದಕರಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಂಗೀತ ಪ್ರತಿಭೆಗೆ ಮಾರುಹೋಗಿ ಮೈಸೂರಿನಲ್ಲಿಯೇ ಉಳಿಸಿಕೊಳ್ಳಲು ಬಯಸಿದ್ದರು. ಶಿವಮೊಗ್ಗದ ಭಾಗದಲ್ಲಿ ಇನಾಂ ರೂಪದಲ್ಲಿ ಭೂಮಿಯನ್ನೂ ನೀಡಿದ್ದರೆಂದು ಫೈಯಾಜ್ ಖಾನ್ ಕುಟುಂಬದ ಹಿರಿಯರಿಂದ ಕೇಳಿದ್ದಾರೆ.

ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ರೈಲು ಅಪಘಾತದಲ್ಲಿ ಅಜ್ಜ ಮೃತಪಟ್ಟರು. ಆಗ ಅವರ ತಂದೆ ಅಬ್ದುಲ್ ಖಾದರ್ ಖಾನ್ ಅವರಿಗೆ ಕೇವಲ 13 ವರ್ಷ. ತಂದೆಯೊಂದಿಗೆ ಇದ್ದ ಅವರು ಮತ್ತು ಅವರ ಸಹೋದರಿ ಬದುಕುಳಿದರು. ನಂತರ ಶಿವಮೊಗ್ಗದಲ್ಲಿ ನೆಲೆಸಿದ ಅಬ್ದುಲ್ ಖಾದರ್ ಖಾನ್ ಗುಬ್ಬಿ ರಂಗಭೂಮಿಯಲ್ಲಿ ಕೆಲಸ ಮಾಡಿದರು. 1950ರ ದಶಕದಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಸಾರಂಗಿ ಕಲಾವಿದರಾಗಿ ಉದ್ಯೋಗ ಪಡೆದರು. ಆಗ ಅವರ ಮಾಸಿಕ ಸಂಬಳ ಕೇವಲ 8ರಿಂದ 10 ರೂಪಾಯಿಗಳಷ್ಟಿತ್ತು. ಆ ಅಲ್ಪ ಆದಾಯದಲ್ಲಿಯೇ ಆರು ಮಕ್ಕಳ ಕುಟುಂಬವನ್ನು ಸಾಕಿ, ಸ್ವಲ್ಪ ಹಣವನ್ನೂ ಉಳಿಸುತ್ತಿದ್ದ ತಂದೆಯ ಶ್ರಮವನ್ನು ಫೈಯಾಜ್ ಖಾನ್ ಸ್ಮರಿಸುತ್ತಾರೆ.

ಬಾಲ್ಯದಿಂದಲೇ ಸಂಗೀತದ ಸಾಧನೆ

ನಾಲ್ಕನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಫೈಯಾಜ್ ಖಾನ್, ಬಾಲ್ಯದಲ್ಲೇ ಸಂಗೀತದತ್ತ ಆಕರ್ಷಿತರಾದರು. ಆರು ವರ್ಷದ ವಯಸ್ಸಿನಲ್ಲಿ ಪಂಡಿತ್ ಬಸವರಾಜ ಬೆಂಡಿಗೇರಿ ಅವರ ಮಾರ್ಗದರ್ಶನದಲ್ಲಿ ತಬಲಾ ಅಭ್ಯಾಸ ಆರಂಭಿಸಿದರು. ನಂತರ ಉಸ್ತಾದ್ ನಿಜಾಮುದ್ದೀನ್ ಖಾನ್ ಮತ್ತು ಉಸ್ತಾದ್ ಮಾಮುಲಾಲ್ ಸಂಗೋಂಕರ್ ಅವರಿಂದಲೂ ಕಲಿತರು. ಹನ್ನೊಂದನೇ ವಯಸ್ಸಿನಿಂದ ಉಸ್ತಾದ್ ಬೇಲ್ ಖಾನ್, ಅಬ್ದುಲ್ ಕರೀಂ ಖಾನ್ ಮತ್ತು ಪಂಡಿತ್ ಬಸವರಾಜ ರಾಜಗುರು ಅವರಂತಹ ಹಿರಿಯ ಕಲಾವಿದರೊಂದಿಗೆ ತೆರಳಿ ಸಂಗೀತ ಕೇಳಿ ಕಲಿಯುವ ಅವಕಾಶ ಪಡೆದರು.

16–17ನೇ ವಯಸ್ಸಿನಲ್ಲಿ ತಂದೆಯನ್ನೂ ಕಳೆದುಕೊಂಡರು. ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಪರೀಕ್ಷೆಯ ಹಾಲ್‌ಟಿಕೆಟ್‌ಗೆ ಬೇಕಾದ 15 ರೂಪಾಯಿಗಳನ್ನೂ ಹೊಂದಿಸಲಾಗದೆ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಆದರೆ ಸಂಗೀತಾಭ್ಯಾಸ ನಿಲ್ಲಲಿಲ್ಲ. ಅಭ್ಯಾಸಕ್ಕೆ ಮನೆಯಲ್ಲಿಯೇ ಜಾಗವಿಲ್ಲದಾಗ ನೆರೆಹೊರೆಯವರ ಸಲಹೆಯಂತೆ ಸ್ಮಶಾನಕ್ಕೆ ತೆರಳಿ ರಾತ್ರಿ 2 ಗಂಟೆಯವರೆಗೂ ಸಾರಂಗಿ ಮತ್ತು ಗಾಯನ ಅಭ್ಯಾಸ ಮಾಡುತ್ತಿದ್ದರು. ನಂತರ ಹನುಮಂತರಾಯರ ಗುಡಿ ಮತ್ತು ಕಾಳಮ್ಮನ ದೇವಸ್ಥಾನಗಳಲ್ಲಿಯೂ ಅಭ್ಯಾಸ ನಡೆಸಿದರು. ದಿನಕ್ಕೆ 12 ಗಂಟೆಗಳಂತೆ ಸತತ 41 ದಿನಗಳ ಕಾಲ ಅಭ್ಯಾಸ ಮಾಡುವ ಎರಡು ಚಿಲ್ಲಾ ಸಾಧನೆಗಳನ್ನು ಪೂರ್ಣಗೊಳಿಸಿದರು. ದೇವಸ್ಥಾನದ ಅರ್ಚಕರೂ ಅವರಿಗೆ ಸಂಪೂರ್ಣ ಸಹಕಾರ ನೀಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ