– ರಾಘವೇಂದ್ರ ಅಡಿಗ ಎಚ್ಚೆನ್
ಸಂಚಾರಿ ಕುರುಗಾಯಿಗಳ ಕಥೆ ಆಧಾರಿತ “ಅನಂತ ಪಯಣ” ಚಿತ್ರದ ಟ್ರೇಲರ್ ಟ್ರೈಲರ್ ಬಿಡುಗಡೆಯಾಗಿದೆ. ವಿಶೇಷ ಎನ್ನುವಂತೆ ಸಂಚಾರಿ ಕುರಿಗಾಯಿಗಳು ಟ್ರೈಲರ್ ಬಿಡುಗಡೆ ಮಾಡಿದ್ದು ವಿಶೇಷ
ಈ ವೇಳೆ ವಿಧಾನಪರಿಷತ್ ಸದಸ್ಯ ಸಿಟಿ ರವಿ, ಖಾತರಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ ರೇವಣ್ಣ ಸೇರಿದಂತೆ ಹಲವು ಈ ಕ್ಷಣದಲ್ಲಿ ಭಾಗಿಯಾಗಿ ತಂಡಕ್ಕೆ ಶುಭ ಕೋರಿ ಕುರಿಗಾಯಿಗಳ ಬದುಕು ಬವಣೆ ಆಧಾರಿತ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು

ಶ್ರೀಕಾಕಾ ನಾಯಕ ಕಮ್ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಚಿತ್ರ ನವಂಬರ್ 27ಕ್ಕೆ ರಾಜ್ಯಾದ್ಯಂತೆ ತೆರೆಗೆ ಬರಲಿದೆ
ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ನೃತ್ಯಗಾರರಾಗಿ ಬಂದ ಶ್ರೀಕಾಕಾ ಮಾತನಾಡಿ ಸಿನಿಮಾ ಜರ್ನಿಗೆ ನಂಗೆ ಸಾಥ್ ನೀಡಿದರು ಇಬ್ಬರು ನಿರ್ಮಾಪಕರು ಹಾಗೂ ಗೆಳೆಯರು. ಬೆಂಗಳೂರು ಉತ್ತರ ಕರ್ನಾಟಕ ಮಹಾರಾಷ್ಟ್ರ ಶೂಟ್ ಮಾಡಲಾಗಿದೆ.. ರಿಯಲ್ ಆಗಿ ಚಿತ್ರೀಕರಣ ಮಾಡುವ ಪ್ರಯತ್ನ ಮಾಡಲಾಗಿದೆ. ಸಂಚಾರಿ ಕುರಿಗಾರರ ಬದುಕು ಬವಣೆ ಆಧರಿಸಿದೆ ಎಂದರು

ನಾಯಕಿ ನಿವಿಷ್ಕಾ ಪಾಟೀಲ್ ಮಾತನಾಡಿ ಚಿತ್ರದಲ್ಲಿ ಗೌರಿ ಎನ್ನುವ ಪಾತ್ರ ಮಾಡಿದ್ದೇನೆ. ಈ ತಂಡದ ಜೊತೆ ಕೆಲಸ ಮಾಡಿದ್ದು ಖುಷಿ ಇದೆ. ಇಂದಿನ ಕಾಲದಲ್ಲಿ ಮನುಷ್ಯ ಕುರಿಗಾಗಿ ಏನೆಲ್ಲಾ ಹೋರಾಟ ಮಾಡುತ್ತಾರೆ ಎಂಬುದು ಕೇಳಿ ಸಿನಿಮಾ ಮಾಡಲು ಒಪ್ಪಿಕೊಂಡೆ ಎಂದರು.

ಸಹ ನಿರ್ಮಾಪಕ ಸಂತೋಷ ಹೆಗಡೆ ಮಾತನಾಡಿ 2-3 ವರ್ಷದಿಂದ ಸಿನಿಮಾದ ಕಾರ್ಯಗಳು ನಡೆತಾ ಇತ್ತು.ಟ್ರೇಲರ್ ಬಿಡುಗಡೆ ಆಗಿದೆ. ತಂಡದ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ.ಸಂಚಾರಿ ಕುರಿಗಾಯಿಗಳ ಬದುಕನ್ನು ತೆರೆಯ ಮೇಲೆ ತರಬೇಕು ಎನ್ನುವ ಕನಸು ನಸಾಗಿದೆ ಎಂದರು

ಮತ್ತಿಬ್ಬ ಸಹ ನಿರ್ಮಾಪಕ ಸಾಗರ ಬಿ , ನಟ ಸಂದೀಪ್ ನೀನಾಸಂ , ರಮೇಶ್ ಪವಾರ್ ,ವಿನಾಯಕ ,ಸಚ್ಚಿನ್ ಸೇರಿದಂತೆ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.ಆಕಾಶ್ ಪರ್ವ ಸಂಗೀತ ಚಿತ್ರಕ್ಕಿದೆ





