ಕಿರಣ್‌ ಹೆಗಡೆ ನಿರ್ದೇಶನದ `ಮನರೂಪ' ಚಿತ್ರದ ಪೋಸ್ಟರ್‌ ಈಗಾಗಲೇ ಎಲ್ಲರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ದಟ್ಟ ಕಾಡಿನಲ್ಲಿ ನಡೆಯುವ ಭಯಾನಕ ಘಟನೆಯ ಸುತ್ತ ಹೆಣೆಯಲಾದ ಕಥಾನಕ. ಈ ಚಿತ್ರದಲ್ಲಿ ನಿಶಾ ಎಂಬ ಕಲಾವಿದೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹುತೇಕ ಹೊಸಬರೇ ನಟಿಸಿರುವ ಈ ಚಿತ್ರದಲ್ಲಿ ನಿಶಾ ಬಿ.ಆರ್‌  ಅವರನ್ನು ಮಾತನಾಡಿಸಿದಾಗ ಈಕೆಯೊಬ್ಬ ರಂಗಭೂಮಿ ಕಲಾವಿದೆಯಾಗಿ ಸಿನಿಮಾಗಳಲ್ಲೂ ನಟಿಸುತ್ತಿರುವುದು ಸ್ಪಷ್ಟವಾಯಿತು.

ಸಿನಿಮಾಗಳಲ್ಲಿ ನಿಮ್ಮ ಬೆಳವಣಿಗೆ ಬಗ್ಗೆ ತಿಳಿಸಿ.

ಹೌದು, ನಾನೀಗಾಗಲೇ ಮೂರು ಚಿತ್ರಗಳಲ್ಲಿ ನಟಿಸಿದ್ದೇನೆ. ನಿಗೂಢ, ಸೀಕ್ರೇಟ್‌ ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಮೂಲತಃ ರಂಗಭೂಮಿ ಕಲಾವಿದೆ. ಚಿಕ್ಕ ವಯಸ್ಸಿನಿಂದಲೇ ನಾಟಕಗಳಲ್ಲಿ ನಟಿಸುತ್ತಿದ್ದೆ. ಸುಮಾರು ಹತ್ತು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದೇನೆ. ಕಳೆದೆರಡು ವರ್ಷಗಳಿಂದ ಸೀರಿಯಸ್ಸಾಗಿ ಸಿನಿಮಾದಲ್ಲಿ ನಟಿಸಬೇಕೆಂದು ಡಿಸೈಡ್‌ ಮಾಡಿದೆ. ಈಗಲೂ ಸುಮಾರು ನಾಟಕಗಳಲ್ಲಿ ಅಭಿನಯಿಸುತ್ತಲೇ ಇದ್ದೀನಿ.

`ಮನರೂಪ' ಚಿತ್ರದಲ್ಲಿ ನಿಮ್ಮ ಪಾತ್ರ?

ಇದೊಂದು ಸೈಕಲಾಜಿಕಲ್ ಥ್ರಿಲ್ಲರ್‌ ಸ್ಟೋರಿ. ಒಟ್ಟು ಐದು ಕ್ಯಾರೆಕ್ಟರ್ಸ್. ಮೂರು ಹುಡುಗರು, ಇಬ್ಬರು ಹುಡುಗಿಯರು. ಈ ಇಬ್ಬರಲ್ಲಿ ನಾನೂ ಒಬ್ಬಳು. ಕಥೆ ತುಂಬಾ ಇಂಟ್ರೆಸ್ಟಿಂಗ್‌ ಆಗಿದೆ. ಕಾಡಿನಲ್ಲೇ ನಡೆಯುತ್ತದೆ. ನನ್ನದು ವಿಭಿನ್ನವಾದ ಕ್ಯಾರಕ್ಟೆರ್‌ ಇರುವಂಥ ಹುಡುಗಿ ಪಾತ್ರ. ಕೈ ತುಂಬಾ ಹಣ ಬರುವಂಥ ಕೆಲಸವಿರುತ್ತದೆ. ಅವಳೇ ಪ್ರೀತಿಸಿದ ಹುಡುಗನನ್ನು ಮದುವೆಯಾಗಿರುತ್ತಾಳೆ. ವೈವಾಹಿಕ ಬದುಕು ಅಷ್ಟಕ್ಕಷ್ಟೇ.... ಆ ಫ್ರಸ್ಟ್ರೇಷನ್‌ನಲ್ಲೇ ಇರುವಂಥ ಹುಡುಗಿಯಾಗಿದ್ದರೂ ಉತ್ಸಾಹ ಜಾಸ್ತಿ. ಸಾಹಿತ್ಯ ಓದಿಕೊಂಡಿರುತ್ತಾಳೆ. ಮಾಡರ್ನ್‌ ಹುಡುಗಿ. ತುಂಬಾನೇ ಡೈಮೆನ್ಶನ್‌ ಇರುವಂಥ ಪಾತ್ರ. ಒಟ್ಟಿನಲ್ಲಿ ವಿಚಿತ್ರ ಸ್ವಭಾವದ ಹುಡುಗಿ.

ಹೇಗಿತ್ತು ವರ್ಕಿಂಗ್‌ ಎಕ್ಸ್ ಪೀರಿಯೆನ್ಸ್.....?

ಕಿರಣ್‌ ಹೆಗಡೆ ನಮ್ಮ ನಿರ್ದೇಶಕರು, ನೋಡುವುದಕ್ಕೆ ಸಾಧುವಿನಂತೆ ಕಂಡರೂ ಸಾಹಿತ್ಯವನ್ನು ಅರೆದು ಕುಡಿದಿದ್ದಾರೆ. ಇಂಥ ಮನುಷ್ಯ ಸಿನಿಮಾ ಮಾಡ್ತಾರಾ ಅಂತ ಅನುಮಾನ ಬರೋದು ಸಹಜ. ಆದರೆ ಶೂಟಿಂಗ್‌ ಟೈಮ್ ನಲ್ಲಿ ಅವರನ್ನು ನೋಡಬೇಕು. ದೈತ್ಯರಂತೆ ಕೆಲಸ ಮಾಡುತ್ತಾರೆ. ಸಿನಿಮಾ ಬಗ್ಗೆ ಅವರಿಗಿರುವ ಜ್ಞಾನ, ಆಸಕ್ತಿ ಎಂಥವರಿಗಾದರೂ ಆಶ್ಚರ್ಯ ಹುಟ್ಟಿಸುತ್ತದೆ. ಕಿರಣ್‌ ತುಂಬಾ ನೀಟಾಗಿ ಪ್ಲಾನ್‌ ಮಾಡಿದ್ದರು. ಸ್ಕ್ರಿಪ್ಟ್ ಮೊದಲೇ ಕೊಟ್ಟು ರಿಹರ್ಸಲ್ ಮಾಡಿಸಿದರು. ಸಾಮಾನ್ಯವಾಗಿ ಹೊಸಬರ ಟೀಮ್ ನಲ್ಲಿ ಇಂಥ ವಾತಾವರಣ ಕಾಣಿಸುವುದು ಅಪರೂಪ. ಸ್ಪಾಟ್‌ನಲ್ಲೇ ಡೈಲಾಗ್‌ ಕೊಟ್ಟುಬಿಡುತ್ತಾರೆ. ಕಿರಣ್‌ ತುಂಬಾನೇ ಹೋಂವರ್ಕ್‌ ಮಾಡುತ್ತಿರುತ್ತಾರೆ. ತುಂಬಾನೇ ಕ್ರಿಯೇಟಿವ್‌ ಆಗಿರುತ್ತಾರೆ, ಪ್ರೊಫೆಷನಲ್ಲಾಗಿ ಹ್ಯಾಂಡಲ್ ಮಾಡುತ್ತಾರೆ. ಕೆಲವು ಸಲ ನಮಗೇ ಟೇಕ್‌ ಓ.ಕೆ. ಅನಿಸಲಿಲ್ಲವೆಂದು ಹೇಳಿದಾಗ, ಮತ್ತೆ ಶಾಟ್‌ ಕೊಡಲು ಅವಕಾಶ ಕೊಡುತ್ತಿದ್ದರು. ಅಷ್ಟರ ಮಟ್ಟಿಗೆ  ನಮಗೆಲ್ಲರಿಗೂ ಫ್ರೀಡಂ ಕೊಟ್ಟಿದ್ದಾರೆ.

ರಂಗಭೂಮಿ ಹಿನ್ನೆಲೆ ಏನಾದರೂ ಇದ್ಯಾ..... ಅಂದರೆ ನಿಮ್ಮ ಕುಟುಂಬದಲ್ಲಿ ಯಾರಾದರೂ ನಟಿಸಿದ್ದುಂಟಾ?

ನಮ್ಮ ಮನೆಯಲ್ಲಿ ನನಗೊಬ್ಬಳಿಗೇ ಮೊದಲಿನಿಂದಲೂ ಈ ಹವ್ಯಾಸ..... ಚಿಕ್ಕವಳಾಗಿದ್ದಾಗ ಸ್ಕೂಲ್‌ನಲ್ಲಿ ನಾಟ್ಯ ಮಾಡ್ತಿದ್ದೆ. ಕಾಲೇಜಿಗೆ ಹೋದ ಮೇಲೂ ಸಹ ಅದನ್ನೇ ಮುಂದುವರಿಸಿದೆ. ಪ್ರೊಫೆಷನಲ್ಲಾಗಿ ಅಭಿನಯವನ್ನೇ ಆರಿಸಿಕೊಳ್ತೀನಿ ಅಂದಾಗ ಅಪ್ಪ ಅಮ್ಮನಿಗೆ ನಿರಾಶೆ ಆಯ್ತು. ಆದರೂ ಎಲ್ಲೋ ನನ್ನ ಬಗ್ಗೆ ನಂಬಿಕೆ ಇತ್ತು. ಪರ್ಮಿಶನ್‌ ಕೊಟ್ಟರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ