ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಅನ್ನದಾನ ಏರ್ಪಡಿಸಿದ ಐಶ್
ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ತನ್ನ 44ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳಬೇಕೆಂದು, ಆ ದಿನ ಮಾತ್ರವಲ್ಲ ವರ್ಷವಿಡೀ 1000ಕ್ಕೂ ಹೆಚ್ಚು ಅನಾಥಮಕ್ಕಳಿಗೆ 2 ಹೊತ್ತೂ ಅನ್ನದಾನದ ಏರ್ಪಾಡು ಮಾಡಿದ್ದಾಳೆ! `ಫನ್ನೆ ಖಾನ್' ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡ ಐಶ್ ಬೇಬಿ ಹೀಗೊಂದು ಅನುಕರಣೀಯ ಬರ್ತ್‌ಡೇ ಆಚರಿಸಿಕೊಂಡು ಬಾಲಿವುಡ್‌ನಲ್ಲಿ ಎಲ್ಲೆಲ್ಲೂ ಶಭಾಷ್‌ಗಿರಿ ಗಿಟ್ಟಿಸಿದ್ದಾಳೆ.
ಬಟ್ಟೆ ಕಳಚಲು ಸಂಕೋಚವೇಕೆ?
`ರಾಗಿಣಿ ರಿಟರ್ನ್ಸ್' ಚಿತ್ರದಲ್ಲಿನ ತನ್ನ ಹಾಟ್ ಹಾಟ್ ದೃಶ್ಯಗಳಿಂದ ಪಡ್ಡೆ ಹುಡುಗರ ಎದೆಗೆ ಲಗ್ಗೆ ಇಟ್ಟು, ಬೆಳ್ಳಿ ಪರದೆಗೆ ಬೆಂಕಿ ಹಚ್ಚಲು ಬರುತ್ತಿರುವ ಕರಿಶ್ಮಾ ಶರ್ಮಾಳಿಗೆ ಟಾಪ್‌ಲೆಸ್ ಆಗುವುದರಲ್ಲಿ ಒಂದಿಷ್ಟೂ ಸಂಕೋಚವಿಲ್ಲವಂತೆ. ಒಂದು ಕಡೆ ಮೀಡಿಯಾ ಎದುರಿಸುತ್ತಾ ಅವಳು ಹೇಳುತ್ತಾಳೆ, ``ನನ್ನ ದೇಹವಂತೂ ಬಹು ಸುಂದರ! ಇಂಥ ಗ್ಲಾಮರಸ್ ಬಾಡಿ, ಹೊಳೆಯುವ ಸ್ಕಿನ್ ತೋರಿಸಿಕೊಳ್ಳುವುದರಲ್ಲಿ ಸಂಕೋಚವೇಕೆ? ಮುಂದಿನ ಚಿತ್ರಗಳಲ್ಲಿ ಕಥೆಗೆ ತೀರಾ ಅನಿವಾರ್ಯವಾದರೆ ಸಂಪೂರ್ಣ ಬಟ್ಟೆ ಕಳಚಲಿಕ್ಕೂ ನಾನು ರೆಡಿ! ಏನಂದ್ರಿ....? ನಮ್ಮ ಮನೆಯವರು ಏನೆಂದುಕೊಳ್ಳುತ್ತಾರೋ ಅಂದಿರಾ? ಖಂಡಿತಾ ಅವರು ತಪ್ಪು ತಿಳಿಯುವುದಿಲ್ಲ. ನಾನೇನೇ ಮಾಡಿದರೂ ಸರಿಯಾಗಿಯೇ ನಿರ್ಧಾರ ತೆಗೆದುಕೊಂಡಿರುತ್ತೇನೆ ಎಂಬ ಆತ್ಮವಿಶ್ವಾಸ ಅವರಿಗಿದೆ.''
ಶಾರೂಖ್ ಆಗಲಿದ್ದಾನೆ ಕುಳ್ಳ
ಇತ್ತೀಚೆಗೆ ಬಿಡುಗಡೆಯಾದ ಶಾರೂಖ್‌ನ ಚಿತ್ರಗಳೆಲ್ಲ ತೋಪೆದ್ದುಹೋದವು. ಆದರೆ ಈತನ ಇನ್ನೂ ಹೆಸರಿಡದ ಮುಂದಿನ ಚಿತ್ರ ಆನಂದ್ ರಾಯ್‌ರ ನಿರ್ದೇಶನದಲ್ಲಿ ಮೂಡಿಬರಲಿದ್ದು, ಬಹಳ ಭರವಸೆ ಇಟ್ಟುಕೊಂಡಿದ್ದಾನೆ. ಈ ಚಿತ್ರದಲ್ಲಿ ಈತ ಬಿಲ್‌ಕುಲ್ ಕುಳ್ಳನಾಗಿ ಕಾಣಿಸಲಿದ್ದಾನೆ. ಈತ ಇಲ್ಲಿ ಸಾಮಾನ್ಯ ಕುಳ್ಳನಲ್ಲ, ಕತ್ರೀನಾ-ಅನುಷ್ಕಾ ಇಬ್ಬಿಬ್ಬರು ನಾಯಕಿಯರೊಂದಿಗೆ ರೊಮಾನ್ಸ್ ನಡೆಸುತ್ತಾನೆ. ಶಾರೂಖ್‌ನನ್ನು ಅತ್ಯಾಧುನಿಕ ಟೆಕ್ನಿಕ್ ನೆರವಿನಿಂದ ಹೀಗೆ ಕುಳ್ಳನನ್ನಾಗಿ ಮಾಡಲಾಗಿದೆಯಂತೆ. 1989ರಲ್ಲಿ ತೆರೆಗೆ ಬಂದು ತಮಿಳು, ಹಿಂದಿಯಲ್ಲೂ ಯಶಸ್ವಿ ಎನಿಸಿದ `ಅಪೂರ್ವ ಸಹೋದರ್‌ಗಳ್' ಚಿತ್ರದಲ್ಲಿ ಕಮಲ್ ಹಾಸನ್ ಸಹ ಇದೇ ರೀತಿ ಕುಳ್ಳನಾಗಿ ಕಾಣಿಸಿದ್ದರು, ಇಡೀ ಸಿನಿಮಾದ ಶೂಟಿಂಗ್‌ಗಾಗಿ ಅವರು ನೆಲದಲ್ಲಿ ಅರ್ಧ ದೇಹ ಹೂತಿರಿಸಿದ್ದರು, ಮಂಡಿ ಮಡಿಚಿ ಶೂ ಧರಿಸಿದ್ದರು. ಇಡೀ ಚಿತ್ರ ಹಾಗೆ ಎದುರಿಸುವುದು ಖಂಡಿತಾ ಸಾಧಾರಣ ವಿಷಯವಲ್ಲ. ಆ ಕಾಲದಲ್ಲಿ ಅನಿಮೇಶನ್ ಟೆಕ್ನಿಕ್ಸ್ ಇಂದಿನಂತೆ ಇರಲಿಲ್ಲ ಎಂಬುದೇ ಇದಕ್ಕೆ ಕಾರಣ. ಕಮಲ್ ಮುಂದೆ ಶಾರೂಖ್ ಕುಳ್ಳನಾಗಿ ಯಶಸ್ವಿಯಾಗುವನೇ? ಕಾಲವೇ ಹೇಳಬೇಕು.
ಆತ್ಮಹತ್ಯೆಗೂ ಯತ್ನಿಸಿದ್ದೆ
ಸಾಮಾನ್ಯ ಜನರಿಗಿಂತ ಮಾನಸಿಕ ಒತ್ತಡದ ಸಮಸ್ಯೆ ಸೆಲೆಬ್ರಿಟಿಗಳನ್ನು ಕಾಡುವುದೇ ಹೆಚ್ಚು. ತಮ್ಮನ್ನು ತಾವು ಅತಿ ಆಕರ್ಷಕವಾಗಿ ತೋರ್ಪಡಿಸಿಕೊಳ್ಳುವ ಉತ್ಸಾಹದಲ್ಲಿ ಹಾಗೂ ಸ್ಟಾರ್‌ಡಮ್ ನ ಕುರುಡು ಓಟದಲ್ಲಿ ಎಷ್ಟೋ ತಾರೆಯರು ಡಿಪ್ರೆಶನ್‌ಗೆ ಜಾರುತ್ತಾರೆ. ದೀಪಿಕಾ ನಂತರ ಇಲಿಯಾನಾ ಸಹ ಈ ಬಗ್ಗೆ ಬಾಯಿ ತೆರೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಿಕೊಂಡಿದ್ದಾಳೆ. ತನ್ನ ಸ್ಟ್ರಗಲ್, ಡಿಪ್ರೆಶನ್‌ಗಳ ಬಗ್ಗೆ ಹೇಳುತ್ತಾಳೆ, ``ನಾನು ಬಹಳ ಸಂಕೋಚ ಸ್ವಭಾವದವಳು. ನನ್ನದು ಗ್ಲಾಮರಸ್ ಬಾಡಿ ಆದ್ದರಿಂದ ಸಿನಿಮಾಗಳಿಗೆ ಬಂದೆ. ನಾನು ಎಷ್ಟೋ ಸಲ ಬೇಸರದಲ್ಲೇ ಇದ್ದುಬಿಡುತ್ತಿದ್ದೆ. ಆದರೆ ನಾನು ಡಿಪ್ರೆಶನ್‌ಗೆ ಒಳಗಾಗಿದ್ದೇನೆಂದು ಗೊತ್ತಿರಲಿಲ್ಲ. ಜನ ನನ್ನನ್ನು ನಾನಿರುವ ಹಾಗೆಯೇ ಸ್ವೀಕರಿಸಲಿ ಎಂದು ಕಾಯುತ್ತಿದ್ದೆ. ಒಂದು ಸಲ ಆತ್ಮಹತ್ಯೆ ಮಾಡಿಕೊಂಡು ಎಲ್ಲಾ ಮುಗಿಸಿಬಿಡೋಣ ಎಂಬ ನಿರ್ಧಾರಕ್ಕೂ ಬಂದಿದ್ದೆ.''