ಊರ್ವಶಿಗೆ ಆತ ಇನ್ನೂ ಬಚ್ಚಾ!

ಬಾಲಿವುಡ್‌ನ ಸೆಕ್ಸ್ ಬಾಂಬ್‌ ಊರ್ವಶಿಯ ಹಿಂದಿನ ಚಿತ್ರ `ಗ್ರೇಟ್‌ ಗ್ರಾಂಡ್‌ ಮಸ್ತಿ' ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸುದ್ದಿಯನ್ನೇನೂ ಮಾಡಲಿಲ್ಲ. ಈಗ ಮತ್ತೊಂದು ಹೊಸ ಗುಸುಗುಸು ಹುಟ್ಟಿಕೊಂಡಿದೆ. ಸನಿ ಡಿಯೋಲ್‌ ತನ್ನ ಮಗ ಕರಣ್‌ನ ಚೊಚ್ಚಲ `ಪಲ್ ಪಲ್ ದಿಲ್ ಕೇ ಪಾಸ್‌' ಚಿತ್ರಕ್ಕಾಗಿ ಊರ್ವಶಿಯನ್ನು ಬುಕ್‌ ಮಾಡಲಿದ್ದಾನೆ ಎಂಬುದು. ಆದರೆ ಊರ್ವಶಿ ಮಾತ್ರ, ತಂದೆಗೆ ನಾಯಕಿಯಾದಳು ಆತನ ಮಗನಿಗೂ ಆಗುವುದೇ? ಎಂದು ಸಾರಾಸಗಟಾಗಿ ಅದನ್ನು ತಳ್ಳಿಹಾಕಿದಳಂತೆ. ಈಕೆ ಸನ್ನಿ ಡಿಯೋಲ್‌ನ `ಸಿಂಗ್‌ ಸಾಹೇಬ್‌ ದಿ ಗ್ರೇಟ್‌' ಚಿತ್ರದಲ್ಲಿ ಮೊದಲ ಬಾರಿ ಅಭಿನಯಿಸಿದ್ದಳು.

ನವಾಜ್‌ನ ಡ್ಯಾನ್ಸ್ ನಿಂದ ಕಂಗೆಟ್ಟ ಟೈಗರ್‌

ತನ್ನ ಆ್ಯಕ್ಷನ್ಸ್, ಡ್ಯಾನ್ಸ್, ರೊಮಾನ್ಸ್ ನಿಂದ ಜನಪ್ರಿಯತೆ ಗಳಿಸಿರುವ ಟೈಗರ್‌ ಶ್ರಾಫ್‌ಗೆ ಇತ್ತೀಚೆಗೆ ಹೆಚ್ಚು ಯುವ ಮನ್ನಣೆ ಗಳಿಸುತ್ತಿರುವ ನವಾಜುದ್ದೀನ್‌ ಡ್ಯಾನ್ಸ್ ಕಂಡು ಕಂಗೆಟ್ಟಿದ್ದಾನಂತೆ. ಆತನ ಡ್ಯಾನ್ಸಿಂಗ್‌ ಸ್ಟೈಲ್‌ ಎದುರು ಪ್ರೇಕ್ಷಕರು ತನ್ನನ್ನು ಸಪ್ಪೆ ಎಂದು ಭಾವಿಸಬಾರದೆನ್ನುವ ಭಯ ಕಾಡುತ್ತಿದೆ. ಇವರಿಬ್ಬರೂ ಈಗ `ಮುನ್ನಾ ಮೈಕೆಲ್‌' ಚಿತ್ರಕ್ಕಾಗಿ ಒಟ್ಟಿಗೆ ನಟಿಸುತ್ತಿದ್ದಾರೆ. ಇಬ್ಬರೂ ಪರಸ್ಪರರಿಂದ ತುಂಬ ಕಲಿತಿರುವುದಾಗಿ ಹೇಳುತ್ತಾರೆ. ``ಮೊದಲೆಲ್ಲ ನನಗೆ ಡ್ಯಾನ್ಸ್ ಎಂದರೆ ಅಲರ್ಜಿ ಇತ್ತು. ಆದರೆ ಈಗ ಅದರ ರುಚಿ ಹತ್ತಿದೆ. ಇದನ್ನು ಕಲಿಯಲು ಟೈಗರ್‌ ನನಗೆ ಭಾರೀ ಪ್ರೋತ್ಸಾಹ ನೀಡಿದ,'' ಎಂದು ಆತನನ್ನು ಮೆಚ್ಚಿಕೊಳ್ಳುತ್ತಾನೆ. ಅದೇ ತರಹ ಟೈಗರ್‌ ಕೂಡ, ``ನವಾಜ್‌ನ ಅದ್ಭುತ ಆ್ಯಕ್ಟಿಂಗ್‌ ಮತ್ತೀಗ ಡ್ಯಾನ್ಸ್ ನನಗೆ ಬೆವರಿಳಿಸಿದೆ. ಅಂತೂ ಒಳ್ಳೆ ಪೈಪೋಟಿಗೆ ಇದು ಕಾರಣವಾಗಿದೆ. ಪ್ರೇಕ್ಷಕರು ಇದರ ಲಾಭ ಪಡೆಯಲಿ,'' ಎನ್ನುತ್ತಾನೆ.

ಸನೀ ವಿರುದ್ಧ ವಂಚನೆಯ ಕೇಸ್

ಬಾಲಿವುಡ್‌ನ ಲವ್ಲಿ ಡಾಲ್‌ ಎನಿಸಿರುವ ಸನೀ ಲಿಯೋನ್‌ ಹಾಗೂ ಆಕೆಯ ಪತಿ ಡೇನಿಯಲ್ ರ ವಿರುದ್ಧ ನಿರ್ಮಾಪಕ ದಿನೇಶ್‌ ತ್ರಿವೇದಿ ದ್ರೋಹ ವಂಚನೆಯ ಕೇಸ್‌ ದಾಖಲಿಸಿದ್ದಾರೆ. ದಿನೇಶ್‌ರ ಆರೋಪ ಎಂದರೆ, ``ಇವರಿಬ್ಬರೂ ನನ್ನ `ಡೇಂಜರಸ್‌ ಹುಸ್ನ್' ಚಿತ್ರದಿಂದ ಅರ್ಧದಲ್ಲೇ ಪರಾರಿಯಾಗಿದ್ದಾರೆ. ಇದರಿಂದ ನನಗೆ ಅಪಾರ ನಷ್ಟವಾಗಿದೆ, ಚಿತ್ರರಂಗದಲ್ಲಿ ಪ್ರತಿಷ್ಠೆಗೆ ಚ್ಯುತಿ ಬಂದಿದೆ. ಇದಕ್ಕೆ ಇವರು ನಷ್ಟ ಪರಿಹಾರ ಕೊಡಲೇಬೇಕು....'' ಆದರೆ ಡೇನಿಯಲ್ ಹೇಳುವುದೇ ಬೇರೆ, ``ಸನೀ ಯಾವತ್ತೂ ಈ ಚಿತ್ರ ಒಪ್ಪಿಕೊಂಡೇ ಇರಲಿಲ್ಲ. ಶೂಟಿಂಗ್‌ ಶುರು ಮಾಡಲೇ ಇಲ್ಲ..... ಇನ್ನೂ ಮಧ್ಯದಲ್ಲೇನು ಬಿಡುವುದು?'' ಸನೀ ಈಗ ಅಂತಾರಾಷ್ಟ್ರಿಯ ಖ್ಯಾತಿವೆತ್ತ ಸಂಸ್ಥೆಯ ಹೆಮ್ಮೆಯ ಸದಸ್ಯೆ. ಈಕೆ ಇತ್ತೀಚೆಗೆ ಶೂಟ್‌ ಮಾಡಿದ ಜಾಹೀರಾತಿನ ಅವತಾರ ನೋಡಿ!

ನನ್ನನ್ನು ಇತರರಿಗೆ ಹೋಲಿಸಲೇಬೇಡಿ!

ತನ್ನ ಮೊದಲ `ಖಾಮೋಶಿಯಾ' ಚಿತ್ರದಿಂದೀ ಸೆಕ್ಸ್ ಬಾಂಬ್‌ ಎನಿಸಿ, ಎಲ್ಲರನ್ನೂ ಖಾಮೋಶ್‌ಗೊಳಿಸಿದ ಸಪ್ನಾ ಪಬ್ಬಿ ಸ್ವತಂತ್ರ ಮನೋಭಾವದ ಬಿಂದಾಸ್‌ ಹುಡುಗಿ. ಬಾಲಿವುಡ್‌ಗೆ ಬರಬೇಕೆಂದೇ ತನ್ನ ಲಂಡನ್‌ ಪರಿವಾರವನ್ನು ತೊರೆದು ಬಂದಿರುವ ಈಕೆ, ಬೋಲ್ಡ್ ನೆಸ್‌ ತೋರಲು ಸಂಕೋಚವೇಕೆ ಎನ್ನುತ್ತಾಳೆ. `ಘರ್‌ ಆಜಾ ಪರ್‌ದೇಶೀ' ಧಾರಾವಾಹಿಯಿಂದ ನಟನೆ ಶುರು ಮಾಡಿದ ಈಕೆ `24' ಟಿ.ವಿ. ಶೋನಿಂದ ಸ್ಟಾರ್‌ ಆದಳು. ಅದರಲ್ಲಿ ಈಕೆ ಅನಿಲ್‌ ಕಪೂರ್‌ರ ಮಗಳಾಗಿದ್ದಳು. ಈಕೆಯ ಬೋಲ್ಡ್ ನೆಸ್‌ ಕಂಡು ಬಾಲಿವುಡ್‌ ಇವಳಿಗೆ ಜೂ. ಮಲ್ಲಿಕಾ ಶೆರಾವತ್‌ ಎಂದೇ ಹೆಸರಿಟ್ಟಿತು. ಆದರೆ ಸ್ವಪ್ನಾ ಹೇಳುವುದೆಂದರೆ, ನನ್ನನ್ನು ಇತರರಿಗೆ ಹೋಲಿಸಲೇಬೇಡಿ, ನನ್ನನ್ನು ಸ್ವಪ್ನಾ ಆಗಿಯೇ ಗುರುತಿಸಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ