ಮಹಾರಾಣಿ ಗಾಯತ್ರಿ ದೇವಿಯ ಬಯೋಪಿಕ್‌ ಚಿತ್ರ

ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ಬಾಲಿವುಡ್‌ ನಟಿ ಪ್ರಾಚಿ ದೇಸಾಯಿ, ತನ್ನ ಆರಂಭದ `ರಾಕ್‌ ಆನ್‌' ಚಿತ್ರದಿಂದಲೇ ತಾನೆಂಥ ಪ್ರತಿಭಾವಂತೆ ಎಂದು ನಿರೂಪಿಸಿದ್ದಾಳೆ. ಸೌಂದರ್ಯದ ಖನಿ ಎನಿಸಿದ್ದ ಮಹಾರಾಣಿ ಗಾಯತ್ರಿದೇವಿಯ ಬಯೋಪಿಕ್‌ ಚಿತ್ರದಲ್ಲಿ ತಾನು ರಾಣಿಯಾಗಿರಬೇಕೆಂದು ಬಯಸುವ ಈಕೆ, ``ಇತರ ಕ್ಷೇತ್ರಗಳಿಗೆ ಹೋಲಿಸಿದಾಗ ಸಿನಿಮಾ ಜಗತ್ತು ಸೌಂದರ್ಯ, ರೂಪಲಾವಣ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಎಷ್ಟೋ ಕಲಾವಿದರು ಪ್ರತಿಭಾಶಾಲಿಗಳಾಗಿದ್ದರೂ ಈ ಕಾರಣದಿಂದ ಅವಕಾಶ ಕಳೆದುಕೊಳ್ಳುತ್ತಾರೆ. ನಮ್ಮ ಬಾಲಿವುಡ್‌ನಲ್ಲಂತೂ ಈ ಅಂಶಗಳಿಗೆ ಅತಿ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಾರೆ,'' ಎನ್ನುತ್ತಾಳೆ.

ಸುಚಿತ್ರಾ ಸೇನ್‌ರ ಬಯೋಪಿಕ್‌ ಮಾಡುವಾಸೆ

ಮೂನ್‌ಮೂನ್‌ಸೇನ್‌ರ ಮಗಳು ಹಾಗೂ ಸುಚಿತ್ರಾ ಸೇನ್‌ರ ಮೊಮ್ಮಗಳಾದ ರೀಮಾ ಸೇನ್‌ ಹಿಂದಿ ಸಿನಿಮಾಗಳಿಗಿಂತ ಬಂಗಾಳಿ ಚಿತ್ರಗಳಲ್ಲೇ ಹೆಚ್ಚು ಬಿಝಿ. ಇತ್ತೀಚೆಗಷ್ಟೆ `ವಾರಾಣಸಿ 2014' ಚಿತ್ರದಲ್ಲಿ ಕಾಣಿಸಿದ ಈಕೆಯ ಮನದಾಳದ ಬಯಕೆ ಎಂದರೆ ತನ್ನ ಅಜ್ಜಿಯ ನಿಜ ಜೀವನವನ್ನು ಬೆಳ್ಳಿ ಪರದೆ ಮೇಲೆ ತೋರಿಸಬೇಕೆಂಬುದು. ಆ ಪಾತ್ರಕ್ಕೆ ವಿದ್ಯಾಬಾಲನ್‌ ಹೆಚ್ಚು ಸೂಕ್ತ ಎನ್ನುತ್ತಾರೆ ಈಕೆ.

ರಿಚಾ ಈಗ ಮಾಡುತ್ತಿರುವುದೇನು?

ಯಾರಿಗೆ ಯಾರೊಂದಿಗೆ ನಂಟಾಯಿತು, ಯಾರು ಯಾರನ್ನು ಬಿಟ್ಟರು ಎಂಬುದು ಸಿನಿ ಸುದ್ದಿಗಾರರಿಗೆ ಹೇಗ್ಹೇಗೋ ಗೊತ್ತಾಗೇ ಆಗುತ್ತದೆ. ತಾಜಾ ಸುದ್ದಿ `ಫಕ್ರೆ' ಹುಡುಗಿ ರಿಚಾಳದು. ಇತ್ತೀಚೆಗೆ ಆಕೆ ಅಂಗದ್‌ ಬೇಡಿ ಜೊತೆ ಹೆಚ್ಚು ಹೆಚ್ಚು ಬಿಝಿ ಅಂತೆ! ರಿಚಾಳನ್ನು ಹೊಸ ಮನೆಗೆ ಶಿಫ್ಟಿಂಗ್‌ ಮಾಡಿಸುವುದರಿಂದ ಹಿಡಿದು ಆಕೆಯ ಸಣ್ಣಪುಟ್ಟ ಕೆಲಸಗಳಲ್ಲೂ ಅಂಗದ್‌ ಬಹಳ ಬಹಳ ಸಹಾಯ ಮಾಡುತ್ತಾನಂತೆ. ಇಬ್ಬರೂ ಒಟ್ಟೊಟ್ಟಿಗೆ ಫರ್ಹಾನ್‌ ಅಖ್ತರ್‌ರ ಆನ್‌ಲೈನ್‌ ವೆಬ್‌ ಸೀರಿಸ್‌ `ಇನ್‌ಸೈಡ್‌ ಏಜ್‌'ನಲ್ಲಿ ಕೆಲಸ ಮಾಡಿದ್ದರು. ಇದಕ್ಕೆ ಮೊದಲು ಈಕೆ ಒಬ್ಬ ಪರಂಗಿಯವನಿಗೆ ಮಾರುಹೋಗಿ ಅವನನ್ನು ಭೇಟಿಯಾಗಲು ಆಗಾಗ ಫ್ರಾನ್ಸ್ ಗೆ ಹೋಗುತ್ತಿದ್ದಳು. ಅದೇನೂ ಕೈಗೆಟುಕದೆ, ಹುಳಿ ದ್ರಾಕ್ಷಿ ಕಂಡ ನರಿಯಂತೆ ವಾಪಸ್ಸು ಹುಟ್ಟಿದೂರಿಗೆ ಬಂದು, ``ಈ ಮಣ್ಣಿನ ಹೈದನೇ ಸರಿ,” ಎಂದು ಅಂಗದನಿಗೆ ಶರಣಾಗಿದ್ದಾಳೆ. ಮುಂದೆ....? ನಿರೀಕ್ಷಿಸಿ!

ನಶಾಖೋರಿ ಪೂಜಾ

ತಂದೆ ಮಹೇಶ್‌ ಭಟ್‌ರ `ಡ್ಯಾಡಿ' ಚಿತ್ರದಿಂದ ಬಾಲಿವುಡ್‌ಗೆ ಡೆಬ್ಯು ಪಡೆದ ಪೂಜಾ ಭಟ್‌, ತನ್ನ ಸಮಕಾಲೀನ ನಟಿಯರಲ್ಲಿ ಎಲ್ಲರಿಗಿಂತ ಬೋಲ್ಡ್ ಎನಿಸಿದಳು. ಈಕೆ ಯಾವುದೇ ಬಗೆಯ ಬೋಲ್ಡ್ ಸೀನ್‌ ಮಾಡಲಿಕ್ಕೂ ಹಿಂಜರಿದವಳಲ್ಲ. ಸಡಕ್‌, ದಿಲ್‌ ಹೈ ಕಿ ಮಾನ್ತಾ ನಹೀ.... ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಪೂಜಾ ತನ್ನದೇ ಕಂಪನಿ ಫಿಶ್‌ ಐ ನೆಟ್‌ವರ್ಕ್‌ ಆರಂಭಿಸಿದಳು. ಅಭೀಕ್‌ ಬರುವಾರ `ಸಿಟಿ ಆಫ್‌ ಡೆತ್‌' ಪತ್ತೇದಾರಿ ಕಾದಂಬರಿ ಆಧರಿಸಿ ಅದೇ ಹೆಸರಲ್ಲಿ ಹೊಸ ಚಿತ್ರ ಮಾಡುತ್ತಿದ್ದಾಳೆ, ತಾನು ಪ್ರಧಾನ ಪಾತ್ರ ವಹಿಸುತ್ತಿದ್ದಾಳೆ. ಇದರಲ್ಲಿ ಈಕೆ ಒಬ್ಬ ನಶಾಖೋರಿ ಪೊಲೀಸ್‌ ಅಂತೆ. ರುಂಡವಿಲ್ಲದ ಒಬ್ಬ ಹುಡುಗಿಯ ಹೆಣದ ರಹಸ್ಯ ಭೇದಿಸುವುದೇ ಈ ಚಿತ್ರದ ಸಸ್ಪೆನ್ಸ್.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ