ಪರಿವಾ ಪ್ರಣತಿ ಬ್ಯೂಟಿಫುಲ್ ವಿನಮ್ರ ನಟಿ ಮಾತ್ರವಲ್ಲದೆ ಅತ್ಯಂತ ಗುಣಸಂಪನ್ನೆ ಎನಿಸಿದ್ದಾಳೆ. ಆಕೆ ಬಾಲಿವುಡ್‌ ಚಿತ್ರಗಳ ಜೊತೆಗೆ ಅನೇಕ ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದ್ದಾಳೆ. `ತುಜ್‌ ಕೋ ಹೈ ಸಲಾಂ ಝಿಂದಗಿ, ಹಮಾರಿ ಬೇಟಿಯೋಂಕಾ ವಿವಾಹ್‌, ಅರ್ಮಾನೋಂ ಕಾ ಬಲಿದಾನ್‌, ಹಲ್ಲಾ ಬೋಲ್, ಹಮಾರಿ ಸಿಸ್ಟರ್‌ ದೀದೀ, ಬಡೀ ದೂರ್‌ ಸೇ ಆಯೇ ಹೈ' ಇತ್ಯಾದಿ ಧಾರಾವಾಹಿಗಳಿಂದ ಆಕೆ ಎಲ್ಲರ ಮನೆ ಮಾತಾಗಿದ್ದಾಳೆ.

ಬಿಹಾರ್‌ ರಾಜ್ಯದ ಪಾಟ್ನಾ ಈಕೆಯ ತವರೂರು. ಈಕೆಯ ತಂದೆ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿ, ತಾಯಿ ಅಪ್ಪಟ ಗೃಹಿಣಿ. ತಂದೆಯ ವರ್ಗಾವಣೆಯ ನೌಕರಿಯಿಂದ ಪರಿವಾ ಇಡೀ ಭಾರತದ ಎಲ್ಲಾ ಪ್ರಮುಖ ನಗರಗಳನ್ನೂ ಸುತ್ತಿಬಂದಿದ್ದಾಳೆ. ದೆಹಲಿಯಲ್ಲಿ ಅವಳ ಉನ್ನತ ವ್ಯಾಸಂಗ ಪೂರ್ಣಗೊಂಡಿತು.

ಹೀಗೆ ಧಾರಾವಾಹಿಗಳಲ್ಲಿ ನಟಿಸುವಾಗ ಈಕೆ, ವೈಲ್ಡ್ ಲೈಫ್‌ ಫೋಟೋಗ್ರಾಫರ್‌ ಪುನೀತ್‌ ಸಚ್‌ ದೇವ್ ಜೊತೆ ಪ್ರೇಮದಿಂದ ಒಂದಾಗಿ, ಮದುವೆಯಾದಳು. ಇವರ ಮಗ ರುಶಾಂಕ್‌ ನಿಗೆ ಈಗ 6 ವರ್ಷ. ಈಕೆ ತನ್ನ ಬಿಡುವಿನ ವೇಳೆಯನ್ನು ಪೇಂಟಿಂಗ್‌, ರೈಟಿಂಗ್‌, ಸೂಫಿ ಸಂಗೀತಾಭ್ಯಾಸಕ್ಕಾಗಿ ಮೀಸಲಿಡುತ್ತಾಳೆ. ಪ್ರಾಣಿಪ್ರಿಯೆಯಾದ ಪರಿವಾ ಅನೇಕ ನಾಯಿ, ಬೆಕ್ಕುಗಳನ್ನು ಸಾಕುತ್ತಿದ್ದಾಳೆ. ಇತ್ತೀಚೆಗೆ ಈಕೆಯ `ವಾಗ್ಲೇ ಕೀ ದುನಿಯಾ' ಸೀರಿಯಲ್ ಸೋನಿ ಸಬ್‌ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದ್ದು, ಈಕೆಯ ವಂದನಾ ವಾಗ್ಲೆ ಪಾತ್ರ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ತನ್ನ ಕೆಲಸ ಕಾರ್ಯಗಳ ಜೊತೆ ಪರಿವಾ ಹೇಗೆ ಯಶಸ್ವಿ ಗೃಹಿಣಿ ಎನಿಸುತ್ತಾಳೆ? ಬನ್ನಿ, ಅವಳಿಂದಲೇ ತಿಳಿಯೋಣ :

PARIVA

ತಾಯಿಯ ಡ್ಯೂಟಿ ಅನುಪಮ

`ವಾಗ್ಲೆ ಕೀ ದುನಿಯಾ'ದಲ್ಲಿ ತಾಯಿ ಪಾತ್ರ ನಿರ್ವಹಿಸುತ್ತಿರುವ ಪರಿವಾ, ರಿಯಲ್ ಲೈಫ್‌ ನಲ್ಲೂ ತಾಯಿ ಆಗಿರುವುದರಿಂದ, ಲೀಲಾಜಾಲವಾಗಿ ಆ ಪಾತ್ರದಲ್ಲಿ ಯಶಸ್ವಿ ಎನಿಸಿದ್ದಾಳೆ. ವಂದನಾ ಆಗಿ ಆ ಧಾರಾವಾಹಿಯಲ್ಲಿ ನಟಿಸುವುದು ನನಗೆ ಬಲು ಸಲೀಸು, ಸಹಜ ಎನಿಸಿತು. ಇದರಲ್ಲಿ ನಾನು ಸಖೀ, ಅಪೂರ್ವಾರ ತಾಯಿ. ಇದರಲ್ಲಿ ನನ್ನ ಮಗಳು ಸಖೀ ಬಲು ಜಾಣೆ, ಮಗ ಅಪೂರ್ವ ಮಹಾ ತರಲೆ! ರಿಯಲ್ ಲೈಫ್‌ ನಲ್ಲೂ ಹೆಣ್ಣುಮಕ್ಕಳು ಗಂಡು ಮಕ್ಕಳಿಗಿಂತ ಬಲು ಗಂಭೀರ, ಮೆಚ್ಯೂರ್ಡ್‌ ಆಗಿರುತ್ತಾರೆ. ಈ ಧಾರಾವಾಹಿಯಲ್ಲೂ ಹಾಗೇ ಇರುವುದರಿಂದ ಅದು ನನಗೆ ಬಹಳ ಸಹಜವಾಗಿ ಒಗ್ಗಿ ಹೋಗಿದೆ. ನಿಜ ಜೀವನದಲ್ಲೂ 6 ವರ್ಷದ ನನ್ನ ಮಗ ಬಲು ತುಂಟ, ಮಹಾ ತರಲೆ! ಅಸಲಿಗೆ ನಾನು ತಾಯಿಯಾದಾಗ, ಈಗಾಗಲೇ ಅಂಥ ಪಾತ್ರಗಳನ್ನು ರೀಲಿನಲ್ಲಿ ಮಾಡಿದ್ದರಿಂದ, ರಿಯಲ್ ನಲ್ಲೂ ನೈಜವಾಗಿ ಇರಲು ಸಹಕಾರಿ ಆಯಿತು. ಮಾತೃಪ್ರೇಮ, ಪ್ರೀತಿವಾತ್ಸಲ್ಯ, ಮಮಕಾರಗಳ ಸಾಕಾರ ಮೂರ್ತಿಯಾಗಿ ರೀಲ್ ‌ನಲ್ಲಿ ಇದೀಗ ಸುಲಭವಾಗಿ ಮಿಂಚುತ್ತಿದ್ದೇನೆ! ನಾನು ಮೊದ ಮೊದಲು ಮುಂಬೈಗೆ ಶೂಟಿಂಗ್ ಗೆಂದು ಬಂದಾಗ, ಇಡೀ ದಿನ ತಾಯಿಯಿಂದ ದೂರ ಇರುತ್ತಿದ್ದೆ. ನಾನು ತಡರಾತ್ರಿ ಎಷ್ಟು ಹೊತ್ತಿಗೇ ಬಂದರೂ, ಅಮ್ಮ ನನ್ನೊಂದಿಗೆ ಅರ್ಧ ಗಂಟೆ ಹರಟಿ, ನಂತರವೇ ಮಲಗುತ್ತಿದ್ದಳು. ಮಾತೃವಾತ್ಸಲ್ಯದ ಬೆಲೆಯನ್ನು ಆಗ ನಾನು ಗುರುತಿಸಿದೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ