ಅನುಪ್ರಿಯಾ ಗೋಯೆಂಕಾ

ಬಾಲಿವುಡ್‌ ನ ನವತಾರೆ ಅನುಪ್ರಿಯಾ ಗೊಯೆಂಕಾ ಮೂಲತಃ ಉ. ಪ್ರದೇಶ ರಾಜ್ಯದ ಕಾನ್ಪುರದವಳು. ಬಾಲ್ಯದಿಂದಲೇ ನಟನೆಯ ವ್ಯಾಮೋಹ ಬೆಳೆಸಿಕೊಂಡಿದ್ದ ಈಕೆಗೆ ಹೆತ್ತವರು ಬಹಳ ಸಪೋರ್ಟ್‌ ಮಾಡಿದರು. ಆ ರಾಜ್ಯ ಮಟ್ಟದ ಮಾಡೆಲ್ ಆಗಿ ಮಿಂಚಿ ನಂತರ ಸಣ್ಣಪುಟ್ಟ  ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಅನುಪ್ರಿಯಾ, ಮುಂದೆ ಬಾಲಿವುಡ್‌ ಚಿತ್ರಗಳಲ್ಲಿ ಎಂಟ್ರಿ ಗಿಟ್ಟಿಸಿದಳು.

`ಟೈಗರ್‌ ಝಿಂದಾ ಹೈ, ಪದ್ಮಾವತ್‌, ವಾರ್‌' ಚಿತ್ರಗಳಲ್ಲಿನ ಈಕೆಯ ನಟನೆ ಮೆಚ್ಚುಗೆ ಪಡೆಯಿತು. ಆದರೆ ಇವಳ ಪರಿಶ್ರಮಕ್ಕೆ ತಕ್ಕಂತೆ ಈ ಯಾವ ಚಿತ್ರಗಳಲ್ಲೂ ಈಕೆಗೆ ಉತ್ತಮ ಐಡೆಂಟಿಟಿ ಸಿಗಲಿಲ್ಲ. ಹಿರಿತೆರೆ ಚಿತ್ರಗಳು ಮಾತ್ರವಲ್ಲದೆ, ಹಲವಾರು OTT ವೆಬ್‌ ಸೀರೀಸ್‌ ನಲ್ಲೂ ಕೆಲಸ ಮಾಡಿದ್ದಾಳೆ. ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ ನಲ್ಲಿ ಈಕೆಯ ಇತ್ತೀಚಿನ ವೆಬ್‌ ಸೀರೀಸ್‌`ಸುಲ್ತಾನ್‌ ಆಫ್ ದಿಲ್ಲಿ' ಭಾರಿ ಚರ್ಚೆಯಲ್ಲಿದೆ. ಈಕೆ ತನ್ನ ಸಿನಿ ಜರ್ನಿ ಹಾಗೂ ಕನಸಿನ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾಳೆ. ಆ ವಿವರಗಳನ್ನು ತಿಳಿಯೋಣವೇ?:

ಹೊಸ ಪಾತ್ರಗಳತ್ತ ಫೋಕಸ್

ಎಷ್ಟೋ ವರ್ಷಗಳವರೆಗೂ ಇದೇ ಇಂಡಸ್ಟ್ರಿಯಲ್ಲಿದ್ದೂ ಅನುಪ್ರಿಯಾಳಿಗೆ ಹೇಳಿಕೊಳ್ಳುವಂಥ ದೊಡ್ಡ ಮಟ್ಟದ ಐಡೆಂಟಿಟಿ ಸಿಕ್ಕಿಲ್ಲ. ಈ ಕುರಿತಾಗಿ ವಿವರಿಸುತ್ತಾ, ``ನಾನು ಸದಾ ಉತ್ತಮ ಗುಣಮಟ್ಟದ ಪಾತ್ರಗಳು, ಅಂಥ ಚಿತ್ರಗಳನ್ನು ಮಾತ್ರ ಆರಿಸಿಕೊಳ್ಳುತ್ತೇನೆ. ಪಾತ್ರ ಚಿಕ್ಕದೋ ದೊಡ್ಡದೋ ಮುಖ್ಯವಲ್ಲ, ಆ ಚಿತ್ರಕ್ಕೆ ಅದು ಎಷ್ಟು ಮುಖ್ಯ ಎಂಬುದನ್ನು ಮಾತ್ರ ಗಮನಿಸುತ್ತೇನೆ. ಆ ಪಾತ್ರ ಎಷ್ಟು ಗಟ್ಟಿಯಾದುದು, ನಾನು ಯಾವ ತಂಡದಲ್ಲಿ, ಎಂಥವರ ಜೊತೆ ನಟಿಸುತ್ತಿದ್ದೇನೆ ಎಂಬುದು ನನಗೆ ಬಹಳ ಮುಖ್ಯ. ಆ ತಂಡದಿಂದ ನಾನು ಕಲಿಯುವಂತಿರಬೇಕು, ಆ ಪಾತ್ರ ನನಗೆ ಎಷ್ಟು ಸೂಕ್ತ ಇತ್ಯಾದಿಗಳನ್ನು ವಿಶ್ಲೇಷಿಸಿಯೇ ನಿರ್ಧಾರ ತಳೆಯುತ್ತೇನೆ. ನಾನು ರೊಮ್ಯಾಂಟಿಕ್‌, ಕಾಮಿಡಿ, ಗ್ರಾಮೀಣ ಪಾತ್ರಗಳನ್ನು ನಿಭಾಯಿಸಲು ಬಯಸುವೆ. ಇಷ್ಟು ಮಾತ್ರವಲ್ಲದೆ, ನನಗೆ ಪೀರಿಯಡ್‌ ಫಿಲ್ಮಂ (ಹೊಸ ಅಲೆ ಚಿತ್ರ) ಅಂದ್ರೆ ತುಂಬಾ ಇಷ್ಟ. ಅಂದಿನ ಆರ್ಟ್‌ ಮೂವಿ ಟ್ರೆಂಡ್‌ ಮತ್ತೆ ಮೂಡಿ ಬರಲಿ ಎಂದು ಬಯಸುತ್ತೇನೆ. ವಿಭಿನ್ನ ವಿಷಯ, ಉತ್ತಮ ಕೆಲಸಗಾರಿಕೆ, ಗಟ್ಟಿ ಪಾತ್ರಗಳನ್ನಷ್ಟೇ ಒಪ್ಪುತ್ತೇನೆ. ನನ್ನ ಬಳಿ ಬರುವ ಸ್ಕ್ರಿಪ್ಟ್ ನೋಡಿ, ಸಂಪೂರ್ಣ ಓದಿ, ಆ ಪಾತ್ರ ನನಗೆ 100% ಪೂರಕವಾಗಿದ್ದರೆ ಮಾತ್ರ ಚಿತ್ರ ಒಪ್ಪಿಕೊಳ್ತೀನಿ. ಹೀಗಾಗಿ ನಾನು ನಿರ್ಮಾಪಕ, ನಿರ್ದೇಶಕರಿಗೆ ವಿಧೇಯಳಾಗಿರುತ್ತೇನೆಯೇ ವಿನಾ ಗುಲಾಮಳಲ್ಲ! ಈ ಕಾರಣದಿಂದ ನಾನು ಹೆಚ್ಚು ಐಡೆಂಟಿಟಿ ಪಡೆಯಲಿಲ್ಲವೇನೋ.... ಗೊತ್ತಿಲ್ಲ!''

Anu-1

ಪಾತ್ರಕ್ಕೆ ತಕ್ಕಂತೆ ಬದಲಾವಣೆ

ಯಾವುದೇ ಹೊಸ ಪಾತ್ರವಿರಲಿ, ಅವನು ಅದಕ್ಕಾಗಿ ಬಹಳ ಕಷ್ಟಪಡುತ್ತಾಳೆ. ``ಪ್ರತಿ ಚಿತ್ರಕ್ಕೂ ತನ್ನದೇ ಆದ ವೈಶಿಷ್ಟ್ಯ ಇರುತ್ತದೆ. `ವಾರ್‌' ಚಿತ್ರಕ್ಕಾಗಿ ದೈಹಿಕವಾಗಿ ಫಿಟ್‌ ಆಗಿರುವ ಹುಡುಗಿಯೇ ಬೇಕಾಗಿತ್ತು. ಅದಕ್ಕಾಗಿ ನಾನು ಬೇಕಾದಷ್ಟು ವ್ಯಾಯಾಮ, ವರ್ಕ್‌ ಔಟ್‌ ಮಾಡಿ ದೇಹ ದಂಡಿಸಿ, ಹುರುಪುಗೊಳಿಸಿದೆ. ಅದೇ ತರಹ `ಪದ್ಮಾವತ್‌' ಚಿತ್ರದ ರಾಣಿ ನಾಗಮತಿ ಪಾತ್ರಕ್ಕಾಗಿ, ಆ ಐತಿಹಾಸಿಕ ಪಾತ್ರದ ಬಗ್ಗೆ ಬಹಳ ಓದಿ ತಿಳಿದುಕೊಂಡೆ. ನಾನು ಮೂಲತಃ ಹುಟ್ಟಿ ಬೆಳೆದದ್ದು ರಾಜಸ್ಥಾನ ರಾಜ್ಯದಲ್ಲಿ, ನಂತರ ನನ್ನ ತಂದೆಗೆ ವರ್ಗವಾಗಲು ಕಾನ್ಪುರದಲ್ಲಿ ಪದವಿ ಶಿಕ್ಷಣಕ್ಕಾಗಿ ಕಾಲೇಜು ಸೇರಿದೆ. ಹೀಗಾಗಿ ರಾಜಸ್ಥಾನಿ ಸಂಪ್ರದಾಯದ ಬಗ್ಗೆ ನನಗೆ ಎಲ್ಲಾ ಚೆನ್ನಾಗಿ ಗೊತ್ತಿತ್ತು. ಆದರೂ ನಾನು ಆ ಪಾತ್ರಕ್ಕಾಗಿ, ಸಂಭಾಷಣೆ ಒಪ್ಪಿಸುವ ಶೈಲಿಯನ್ನು ಮತ್ತೆ ಮತ್ತೆ ಪ್ರಾಕ್ಟೀಸ್‌ ಮಾಡಿದೆ. ಈ ತರಹ ನಾನು ಆಯಾ ಪಾತ್ರಕ್ಕೆ ತಕ್ಕಂತೆ ಪರಕಾಯ ಪ್ರವೇಶ ಮಾಡುತ್ತೇನೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ