ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು, ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಅಭಿನಯದ ವಿಷ್ಣುಪ್ರಿಯಾ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರವೂ ಭರ್ಜರಿಯಾಗೇ ನಡೆಯುತ್ತಿದೆ.
ಮೂಲ ಕಥೆಗಾರ್ತಿ ಸಿಂಧುಶ್ರೀ
ಪರಿಚಯಿಸಿದ ಕೆ.ಮಂಜು
ನಿರ್ಮಾಪಕ ಕೆ.ಮಂಜು ಅವರು ಈವರೆಗೆ ಉತ್ತರ ಕರ್ನಾಟಕದ ಲೇಖಕಿಯೊಬ್ಬರು ಕಳಿಸಿದ ಕಥೆಯೇ ನಮ್ಮ ಚಿತ್ರಕ್ಕೆ ಮೂಲ, ಅವರನ್ನು ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಪರಿಚಯಿಸುವುದಾಗಿಯೂ ಹೇಳ್ತಿದ್ದರು. ಅದರಂತೆ ಸೋಮವಾರ ಆ ಲೇಖಕಿಯನ್ನು ಕರೆಸಿ ಮಾಧ್ಯಮಗಳಿಗೆ ಇಂಟ್ರಡ್ಯೂಸ್ ಮಾಡಿಸಿದರು.
ಈ ಸಂದರ್ಭದಲ್ಲಿ ಕೆ.ಮಂಜು ಮಾತನಾಡುತ್ತ ನನ್ನ ಮಗನ ಮೂರನೇ ಚಿತ್ರವನ್ನು ಕಾದಂಬರಿ ಆಧರಿಸಿ ಮಾಡಬೇಕೆಂದು ಒಳ್ಳೆ ಸ್ಟೋರಿ ಹುಡುಕುತ್ತಿದ್ದೆ. ಈ ಬಗ್ಗೆ ಪ್ರಕಟಣೆ ಕೊಟ್ಟು, ಆಹ್ವಾನಿಸಿದಾಗ 55 ಕ್ಕು ಹೆಚ್ಚು ಕಥೆಗಳು ಬಂದವು. ಅದರಲ್ಲಿ ಸಿಂಧುಶ್ರೀ ಬರೆದ ಈ ಕಥೆ ತುಂಬಾ ಇಷ್ಟವಾಯ್ತು. ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಸಿಂಧುಶ್ರೀ, 7೦೦ ಕಿಲೋಮೀಟರ್ ದೂರದ ಅಥಣಿಯಿಂದ ಬದುಕು ಕಟ್ಟಿಕೊಳ್ಳಬೇಕೆಂದು ಬಂದ ನಾನು ಒಬ್ಬ ರೈತನ ಮಗಳು. ಹೃದಯಕ್ಕೆ ತಟ್ಟುವಂಥ ಕಥೆಗಳನ್ನು ಬರೆಯಬೇಕೆಂಬುದು ನನ್ನ ಕನಸು. ಈ ಕಥೆ ಕಳಿಸಿ, ಅನುಭವಿ ಕಥೆಗಾರರ ನಡುವೆ ನನ್ನಕಥೆ ಆಗಲ್ಲ ಅಂತ ಸುಮ್ಮನಾಗಿದ್ದೆ. ಒಮ್ಮೆ ನಿರ್ಮಾಪಕ ಮಂಜು ಸರ್ ಕಾಲ್ ಮಾಡಿ ನಿನ್ನ ಕಥೆ ಸೆಲೆಕ್ಟ್ ಆಗಿದೆ ಎಂದಾಗ ನನಗೆ ನಂಬಲಾಗಲಿಲ್ಲ. ನನ್ನ ತಾತ ಹೇಳ್ತಿದ್ದ ತಮ್ಮಕುಟುಂಬದ ಮರ್ಯಾದೆ ಉಳಿಸಿಕೊಳ್ಳಲು ಮಾಡುತ್ತಿದ್ದ ಹತ್ಯೆ ಘಟನೆಗಳೇ ನಾನೀ ಕಥೆ ಬರೆಯಲು ಸ್ಪೂರ್ತಿ. ನಂತರ ಸಿನಿಮಾಗೆ ಏನು ಬೇಕೋ ಆರೀತಿ ಒಂದಷ್ಟು ಚೇಂಜ್ ಮಾಡಿಕೊಂಡಿದ್ದಾರೆ ಎಂದು ಹೇಳಿದರು
ತೊಂಬತ್ತರ ಫೀಲ್ ಕಟ್ಟಿ ಕೊಡಲು ಟ್ರೈ ಮಾಡಿದ್ದೇನೆ
ನಾಯಕ ಶ್ರೇಯಸ್ ಮಾತನಾಡುತ್ತ ಚಿತ್ರದಲ್ಲಿ 90ರ ದಶಕದ ಫೀಲ್ ಕಟ್ಟಿಕೊಡಲು ತುಂಬಾ ಟ್ರೈ ಮಾಡಿದ್ದೇವೆ. ಶೂಟಿಂಗ್ ಸಮಯದಲ್ಲಿ ನನಗೆ ಯಾವುದೂ ಕಷ್ಟ ಎನಿಸಲಿಲ್ಲ. ಇಷ್ಟು ರಿಸ್ಕ್ ಯಾಕೆ ಎಂದಾಗ ನನ್ನ ತಂದೆ ಸಿನಿಮಾನ ಪ್ಯಾಷನ್ ಗೋಸ್ಕರ ಮಾಡ್ತಿದ್ದೇನೆ ಅಂತ ಹೇಳ್ತಿದ್ದರು ಎಂದು ಹೇಳಿದರು.
ನಿರ್ದೇಶಕ ಪ್ರಕಾಶ್ ಈ ಚಿತ್ರದ ಶೂಟೊಂಗ್ ಒಂದು ಬ್ಯೂಟಿಫುಲ್ ಎಕ್ಸ್ ಪೀರಿಯನ್ಸ್. ನಾಯಕ ಶ್ರೇಯಸ್ ನಾಯಕಿ ಪ್ರಿಯಾ ವಾರಿಯರ್ ಇಬ್ಬರ ಕೆಮಿಸ್ಟ್ರಿ ಚಿತ್ರ ಇಷ್ಟು ಚೆನ್ನಾಗಿ ಮೂಡಿ ಬರಲು ಸಹಕಾರಿಯಾಗಿದೆ. ಒಂದು ಸಿನಿಮಾನ ಹೇಗೆಲ್ಲ ಪ್ರೊಮೋಷನ್ ಮಾಡಬೇಕೆನ್ನುವುದು ಮಂಜು ಅವರಿಗೆ ತುಂಬಾ ಚೆನ್ನಾಗಿ ಗೊತ್ತು ಎಂದರು.
ಕನ್ನಡದಲ್ಲಿ ಕಣ್ಸನ್ನೆ ಹುಡುಗಿಯ ಮೊದಲ ಚಿತ್ರ
ನಾಯಕಿ ಪ್ರಿಯಾ ವಾರಿಯರ್ ಈ ಚಿತ್ರದಲ್ಲಿ ತಾನೇ ಹಾಡಿದ ಹಾಡನ್ನು ಹಾಡಿ ಮಾತನಾಡುತ್ತ ನನ್ನ ಮೊದಲ ಕನ್ನಡ ಚಿತ್ರವಿದು. ಎಲ್ಲರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
ನಿರ್ಮಾಪಕ ಕೆ ಮಂಜು ಅವರ 50 ನೇ ಚಿತ್ರ
ತೊಂಭತ್ತರ ದಶಕದಲ್ಲಿ ನಡೆದಂಥ ಇಂಟನ್ಸ್ ಲವ್ ಸ್ಟೋರಿ ಈ ಚಿತ್ರದಲ್ಲಿದೆ. ಬಿಂದ್ಯಾ ಮೂವೀಸ್ ಕೆ. ಮಂಜು ಸಿನಿಮಾಸ್ ಮೂಲಕ ಈ ಚಿತ್ರವನ್ನು ಡಾ. ಕೆ.ಮಂಜು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಇದು ಮಂಜು ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ 50 ನೇ ಚಿತ್ರ ಎನ್ನುವುದು ವಿಶೇಷ.(ಬೇರೆ ಭಾಷೆಯ 2 ಚಿತ್ರ ಸೇರಿ). ಫೆ 21 ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕ ವಿ.ಕೆ.ಪ್ರಕಾಶ್ ಕಥೆ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವರಿಗೆ ವಿಷ್ಣುಪ್ರಿಯಾ ಎರಡನೇ ಚಿತ್ರ. ನಾಯಕನ ಹೆಸರು ವಿಷ್ಣು, ನಾಯಕಿಯ ಹೆಸರು ಪ್ರಿಯಾ. ಅವರಿಬ್ಬರ ಹೆಸರೇ ಚಿತ್ರದ ಶೀರ್ಷಿಕೆಯಾಗಿದೆ. ಜೀವನದಲ್ಲಿ ಪ್ರೀತಿ ಅನ್ನೋದು ಎಷ್ಟು ಮುಖ್ಯ ಅಂತ ಈ ಚಿತ್ರದಲ್ಲಿ ತೋರಿಸಲಾಗಿದೆ.