- ರಾಘವೇಂದ್ರ ಅಡಿಗ ಎಚ್ಚೆನ್.

ಕಳೆದ ತಿಂಗಳು ತೆರೆಕಂಡ, ಯಶ್‌ ಅವರ ತಾಯಿ ಪುಷ್ಪ ಅರುಣ್‌ ಕುಮಾರ್‌ ಚೊಚ್ಚಲ ನಿರ್ಮಾಣದ ʼಕೊತ್ತಲವಾಡಿʼ ಕನ್ನಡ ಚಿತ್ರದ (Kothalavadi Movie) ಬಗ್ಗೆ ವಿವಾದ ಭುಗಿಲೆದ್ದಿದೆ. ಭಾರಿ ನಿರೀಕ್ಷೆಯೊಂದಗೆ ತೆರೆಕಂಡ ಪೃಥ್ವಿ ಅಂಬಾರ್‌ ನಟನೆಯ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುವಲ್ಲಿ ವಿಫಲವಾಗಿತ್ತು. ಇದೀಗ ಒಟಿಟಿಗೂ ಕಾಲಿಟ್ಟಿದೆ. ಈ ಮಧ್ಯೆ ಚಿತ್ರದಲ್ಲಿ ನಟಿಸಿರುವ ಕಲಾವಿದರಿಗೆ ಸಂಭಾವನೆಯನ್ನೇ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಪೋಷಕ ಪಾತ್ರಗಳಲ್ಲಿ ನಟಿಸಿರುವ ಮಹೇಶ್ ಗುರು ಮತ್ತು ಸ್ವರ್ಣ ಈ ಬಗ್ಗೆ ದೂರಿದ್ದಾರೆ.

problem 1

ʼಕೊತ್ತಲವಾಡಿʼ ಸಿನಿಮಾದಲ್ಲಿ ನಟಿಸಿದ್ದಕ್ಕೆ ತಮಗೆ ಸಂಭಾವನೆಯನ್ನೇ ಕೊಟ್ಟಿಲ್ಲ ಎಂದು ಹೇಳಿ ಮಹೇಶ್ ಗುರು ವಿಡಿಯೊ ಮಾಡಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಸಹ ನಟಿ ಸ್ವರ್ಣ ಅವರ ತಾಯಿ ಕೂಡ ಈ ಬಗ್ಗೆ ದೂರಿದ್ದಾರೆ. ಮಗಳ ಸಂಭಾವನೆ‌ಗಾಗಿ ನಿರ್ದೇಶಕ ಶ್ರೀರಾಜ್ ಬಳಿ ನಟಿ ಸ್ವರ್ಣ ಅವರ ತಾಯಿ ಗೋಳಾಡಿದ್ದಾರೆ. ʼʼಕೆಲಸ ಮಾಡಿದಕ್ಕೆ ನಿಮಗೆ ಪೇಮೆಂಟ್ ಕೋಡೊದಕ್ಕೆ ಆಗಲ್ವಾ? ನನ್ನ‌ಮಗಳು ನಿಮ್ಮನ್ನ ನಂಬಿಕೊಂಡು 3 ತಿಂಗಳು ಕೆಲಸ ಮಾಡಿದ್ದಾಳೆ. ನನಗೆ ಗಂಡ ಇಲ್ಲ. ನಾನೇ ಅವಳನ್ನು ನೋಡಿಕೊಳ್ಳಬೇಕು. ನಾನು ಅವಳನ್ನು ನಂಬಿ‌ಕೊಂಡು ಇದ್ದೀನಿʼʼ ಎಂದು ನೋವು ತೋಡಿಕೊಂಡಿದ್ದಾರೆ.

problem

ʼʼಬಡವರ ಮಕ್ಕಳ ಹಣ ಕೊಡದೆ ಉದ್ದಾರ ಆಗ್ತೀರಾ? ನನ್ನ ಮಗಳು ಬೆಳಗ್ಗೆಯಿಂದ ಸ್ನಾನ ಮಾಡಿ ಏನು ತಿನ್ನದೆ ಮಲಗಿ ಅಳುತ್ತಿದ್ದಾಳೆʼʼ ಎಂದು ನಿರ್ದೇಶಕ ಶ್ರೀರಾಜ್ ಜತೆ ಜತೆ ಹೇಳಿಕೊಂಡಿದ್ದಾರೆ. ಅವರ ಜತೆ ನಿರ್ದೇಶಕ ಶ್ರೀರಾಜ್ ಏರು ಧ್ವನಿಯಲ್ಲೇ ಮಾತನಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಚಾರ ಭಾರಿ ಸದ್ದು ಮಾಡುತ್ತಿದೆ.
ಇನ್ನು ಈ ಸಂಬಂಧ ಮಾತನಾಡಿರುವ ಸಹ ನಟ ಮಹೇಶ್ ಗುರು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ವೈರಲ್ ಆದ ನಂತರ ಮಾಧ್ಯಮಗಳು ಸುದ್ದಿ ಮಾಡಿದ್ದವು. ನಂತರ ಅವರು ತಮ್ಮ ಫೇಸ್ ಬುಕ್ ಖಾತೆಯಿಂದ ಅದನ್ನು ತೆಗೆದುಹಾಕಿದ್ದಾರೆ. ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ವೈರಲ್ ಆದ ನಂತರ ಮಾಧ್ಯಮಗಳು ಸುದ್ದಿ ಮಾಡಿದ್ದವು. ನಂತರ ಅವರು ತಮ್ಮ ಫೇಸ್ ಬುಕ್ ಖಾತೆಯಿಂದ ಅದನ್ನು ತೆಗೆದುಹಾಕಿದ್ದಾರೆ.
ಖಳನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ಮಹೇಶ್ ಗುರು, ನಿರ್ದೇಶಕರ ಕಡೆಯಿಂದ ನಮಗೆ ಚಾನ್ಸ್ ಸಿಕ್ತು. ಅವಾಗ ಒಂದು ಪ್ಯಾಕೇಜ್ ಮಾತಾಡಿದ್ರು. ಅಡ್ವಾನ್ಸ್ ದುಡ್ಡು ಕೊಡ್ತೀವಿ ಅಂದ್ರು. ಓಕೆ ಅಂತ ಒಪ್ಪಿಕೊಂಡೆ. ಅದಾದ ನಂತರ ಮುಹೂರ್ತ ಅಯ್ತು ದುಡ್ಡು ಕೊಡ್ಲಿಲ್ಲ, ಮೂರು ತಿಂಗಳು ಕೆಲಸ ಮಾಡಿದ್ವಿ, ಶೂಟಿಂಗ್ ಮುಗಿದ ಮೇಲೂ ಪೇಮೆಂಟ್ ಕೊಡ್ಲಿಲ್ಲ. ಡಬ್ಬಿಂಗ್ ಮಾಡಿ ಬಂದು ಮುಗಿದ್ಮೇಲೆ ಪೇಮೆಂಟ್ ಕೊಡ್ತೀನಿ ಅಂದ್ರು. ಅದು ಮಾಡಿದ್ವಿ ಪೇಮೆಂಟ್ ಕೊಡ್ಲಿಲ್ಲ ಎಂದು ದೂರಿದ್ದಾರೆ.
ಸಿನಿಮಾ ಪ್ರಮೋಷನ್ ಜೋರಾಗಿ ಮಾಡಿದ್ರು. ನಮ್ಮನ್ನ ಎಲ್ಲಿಗೂ ಕರೀಲಿಲ್ಲ, ದುಡ್ಡು ಕೊಡ್ಲಿಲ್ಲ. ಈಗ ಓಟಿಟಿಗೆ ಬಂದಿದೆ. ಆದ್ರೂ ದುಡ್ಡು ಕೊಟ್ಟಿಲ್ಲ. ಪ್ರೊಡ್ಯೂಸರ್‌ಗೆ ಗೊತ್ತೋ, ಗೊತ್ತಿಲ್ವ ಗೊತ್ತಿಲ್ಲ. ಪ್ರೊಡ್ಯೂಸರ್ ಪುಷ್ಪ ಅವರಿಗೆ ಹೇಳೋಣ ಅಂದ್ರೆ ಯಾರೂ ನಂಬರ್ ಕೂಡ ಕೊಡ್ತಿಲ್ಲ. ನಮಗೆ ಆಗಿರುವ ಮೋಸನ ನಿರ್ಮಾಪಕಿಗೆ ತಿಳಿಸಿಬೇಕಿದೆ. ನ್ಯಾಯ ಸಿಗ್ಬೇಕು ಅನ್ನೋದೇ ನಾನು ಈ ವೀಡಿಯೋದ ಉದ್ದೇಶ ಅಷ್ಟೆ ಎಂದು ಗುರು ತಿಳಿಸಿದ್ದಾರೆ.
ಆಗಸ್ಟ್ 1 ರಂದು ಕೊತ್ತಲವಾಡಿ ಸಿನಿಮಾ ಬಿಡುಗಡೆ ಆಗಿತ್ತು. ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರ ಪಿಎ ಪ್ರೊಡಕ್ಷನ್‌ನಲ್ಲಿ ಸಿನಿಮಾ ಮೂಡಿ ಬಂದಿತ್ತು. ಶ್ರೀರಾಜ್ ನಿರ್ದೇಶನದ ಸಿನಿಮಾ ಇದಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ