ಶರತ್ ಚಂದ್ರ 

ಆಗಸ್ಟ್ 14ರಂದು ಬಹುನಿರೀಕ್ಷಿತ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯಿಸಿದ ಕೂಲಿ ತಮಿಳು ಚಿತ್ರ ತೆರೆಗೆ ಅಪ್ಪಳಿಸಿದ್ದು, ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದ್ದರೂ ಕೂಡ ಕಲೆಕ್ಷನ್ ನಲ್ಲಿ ಮಾತ್ರ ಸಿನಿಮಾ ಸಾಕಷ್ಟು ಹಣವನ್ನು ಗಳಿಸಿದೆ

1000647871

ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಹೊರತು ಪಡಿಸಿ  ನಾಗಾರ್ಜುನ, ಉಪೇಂದ್ರ, ಸತ್ಯ ರಾಜ್ ರಂತಹ ಘಟಾನುಘಟಿಗಳು ಅಭಿನಯಿಸಿದ್ದು ಚಿತ್ರದ ಯಶಸ್ಸಿಗೆ ಇನ್ನಷ್ಟು ಬಲ ಕೊಟ್ಟಿದ್ದೆ.

ಎಲ್ಲಕ್ಕಿಂತ ಹೆಚ್ಚಾಗಿ ಮಲಯಾಳಂ ಚಿತ್ರರಂಗದ ನಟ ಸೌಬಿನ್ ಸಾಹಿರ್ ನಟನೆ ಮತ್ತು  ಮೋನಿಕಾ ಮೋನಿಕಾ ಡಾನ್ಸ್ ಗೆ ಫಿದಾ ಜನ ಆಗಿದ್ದಾರೆ.

1000647866

ರಚಿತರಾಮ್ ಅವರ ಪಾತ್ರನಿರ್ವಹಣೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.ಕೂಲಿ ಚಿತ್ರೀ ಕರಣವಾಗುತ್ತಿರುವ ಸಂದರ್ಭದಲ್ಲಿ ರಚಿತರಾಮ್ ಅವರು ಒಂದು ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿರುವ ಬಗ್ಗೆ ಸುದ್ದಿ ಹರಿದಾಡಿತ್ತು.

1000647864

ಆದರೆ ರಚಿತರಾಮ್ ಕೂಲಿ ಚಿತ್ರದಲ್ಲಿ ನಟಿಸುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಯಾವಾಗ ಟ್ರೈಲರ್ ಬಿಡುಗಡೆ ಆಯಿತೊ ಆಕೆ ನಟಿಸಿರುವ ಬಗ್ಗೆ ಪ್ರೇಕ್ಷಕರಿಗೆ ಗೊತ್ತಾಗಿದೆ. ರಚಿತಾಗೆ ಲೋಕೇಶ್ ಕನಗರಾಜ್     ಒಳ್ಳೆ ರೋಲ್ ಕೊಟ್ಟಿರೋ ಬಗ್ಗೆ ಖಾತ್ರಿಯಾಗಿತ್ತು.

1000647868

ಅಲ್ಲಿಗೆ ರಚಿತರಾಮ್ ಅವರ ಕಾಲಿವುಡ್ ಎಂಟ್ರಿ ಗೆ ಭರ್ಜರಿ ರೆಸ್ಪೋನ್ಸ್ ಸಿಕ್ಕಿದೆ.

ಕೆಲವೇ ನಿಮಿಷದಲ್ಲಿ ಬಂದು ಹೋಗುವ ಪಾತ್ರವಾದರೂ ಕೂಡ ರಚಿತಾ ಅವರ ಸರ್ಪ್ರೈಸ್ ರೋಲ್ ಜನಕ್ಕೆ ಇಷ್ಟವಾಗಿದೆ. ಉಪೇಂದ್ರ ಅವರ ಪಾತ್ರಕ್ಕಿಂತಲೂ ರಚಿತಾ ಅವರ ಪಾತ್ರ ನೋಡುಗರಿಗೆ ಇಷ್ಟವಾಗಿದೆ.

ರಚಿತಾ ಬಗ್ಗೆ ಗೊತ್ತಿಲ್ಲದ ತಮಿಳು ಪ್ರೇಕ್ಷಕರು ಆಕೆಯ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡುತ್ತಿದ್ದಾರೆ.

ಚಿತ್ರರಂಗ ಪ್ರವೇಶಿಸಿ ದಶಕಗಳ ನಂತರ ಕೂಡ ಕನ್ನಡ ಚಿತ್ರರಂಗದಲ್ಲಿ  ಇನ್ನೂ ನಾಯಕಿಯಾಗಿ ಬೇಡಿಕೆ ಉಳಿಸಿ ಕೊಂಡಿರುವ ರಚಿತಾಗೆ ಮುಂಬರುವ ದಿನಗಳಲ್ಲಿ ತಮಿಳಿನಲ್ಲಿ ಇನ್ನಷ್ಟು ಅವಕಾಶಗಳು ಲಭಿಸುವ ಸಾಧ್ಯತೆ ಇದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ