ಸ್ವೀಟಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ದಿನದಂದು ರಾಧಿಕಾ ಕುಮಾರಸ್ವಾಮಿಗೆ ಹಾಕಲಾಗಿದ್ದ ಪ್ರಶ್ನೆ. ನೀವು ಬೇರೆ ಬ್ಯಾನರಿನಲ್ಲಿ ನಟಿಸೋದಿಲ್ಲಾ? ನಿಮ್ಮ ಸಿನಿಮಾವನ್ನು ನೀವೇ ನಿರ್ಮಿಸಿಕೊಳ್ತೀರಾ? ಅಂದು ರಾಧಿಕಾ ಉತ್ತರ ಕೊಡುವುದಕ್ಕೆ ಸಿದ್ಧಳಿರಲಿಲ್ಲ. ಏಕೆಂದರೆ ಆಗಷ್ಟೇ `ಸ್ವೀಟಿ' ಮೂಲಕ ಕನ್ನಡ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಳು. ಕಾಲ ಬಂದಾಗ ಉತ್ತರ ಕೊಡುವೆ ಎಂದಷ್ಟೇ ಹೇಳಿದ್ದಳು.

ಇತ್ತೀಚೆಗೆ ಅಂಥವೊಂದು ಸಮಯ ಬಂದೇಬಿಟ್ಟಿತು. ರಾಧಿಕಾ ಕುಮಾರಸ್ವಾಮಿ ನಟ ಚಿರಂಜೀವಿ ಸರ್ಜಾ ಜೋಡಿಯಾಗಿ `ರುದ್ರ ತಾಂಡವ' ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಷ್ಟೇ ಅಲ್ಲ, ಈ ಚಿತ್ರ ಬೇರೆ ಬ್ಯಾನರಿನಡಿ ತಯಾರಾಗುತ್ತಿರುವುದು ವಿಶೇಷವಾಗಿತ್ತು.

``ನಾನು ಬೇರೆ ನಿರ್ಮಾಪಕರ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಳ್ಳಲು ಕಾರಣ ನೀವುಗಳೇ (ಮಾಧ್ಯಮದರು)! ಏಕೆಂದರೆ ನನ್ನ ಬಳಿ ಸಾಕಷ್ಟು ದುಡ್ಡಿದೆ, ನನ್ನ ಚಿತ್ರವನ್ನು ನಾನೇ ನಿರ್ಮಿಸಿಕೊಳ್ಳುತ್ತೇನೆ ಎಂದೇ ಅನೇಕರು ಭಾವಿಸಿದ್ದರು. ಅಂದು ನೀವುಗಳು ನನಗೊಂದು ಪ್ರಶ್ನೆ ಕೇಳಿದಿರಿ, ಈಗ ಅದಕ್ಕೆ ಉತ್ತರ ಈ ಚಿತ್ರ. ನಾನಿದನ್ನು ನಿರ್ಮಿಸುತ್ತಿಲ್ಲ, ಬರೀ ನಟಿಸುತ್ತಿದ್ದೀನಿ,'' ಎಂದು ಹೇಳಿ ನಕ್ಕಿದ್ದಳು.

`ರಾಜಾ ಹುಲಿ' ಚಿತ್ರದ ಯಶಸ್ಸಿನ ನಂತರ ಗುರುದೇಶ್‌ ಪಾಂಡೆ ಕೈಗೆತ್ತಿಕೊಂಡಿರುವ ಚಿತ್ರವೇ `ರುದ್ರತಾಂಡವ.' ಇದು ತಮಿಳಿನ ರೀಮೇಕಾಗಿದ್ದರೂ ಕನ್ನಡತನಕ್ಕೆ ಹೊಂದಿಕೊಳ್ಳುವಂತೆ ದೇಶಪಾಂಡೆ ನವೀಕರಿಸಿದ್ದಾರೆ.

RT-(1)

'ರಾಜಾ ಹುಲಿ' ನಂತರ ತುಂಬಾನೆ ನಿರೀಕ್ಷೆ ಇತ್ತು. ನಾನು ಒಪ್ಪಿಕೊಳ್ಳುವ ಚಿತ್ರ ಮತ್ತೊಂದು ಯಶಸ್ಸನ್ನು ತಂದುಕೊಡುವಂತಿರಬೇಕು, ಹಾಗಾಗಿ `ರುದ್ರತಾಂಡವ' ಚಿತ್ರವನ್ನು ನಿರ್ದೇಶಿಸಲು ತಯಾರಾದೆವು. ಮೂಲ ಚಿತ್ರಕ್ಕಿಂತ ಚೆನ್ನಾಗಿ ಮೂಡಿಬರಬೇಕೆಂದು ಸಾಕಷ್ಟು ಹೋವಂರ್ಕ್‌ ಮಾಡಲಾಗಿದೆ ಎಂದು ದೇಶಪಾಂಡೆ ಹೇಳುತ್ತಾರೆ.

ರಾಧಿಕಾ ಕುಮಾರಸ್ವಾಮಿ ಚಿರಂಜೀವಿ ಸರ್ಜಾ ಜೋಡಿಯ ಫೋಟೋ ಶೂಟ್‌ ಮಾಡಿದಾಗ ನಿಜಕ್ಕೂ ಒಂದೊಳ್ಳೆ ಪೇರ್‌ ಆಗುತ್ತೆ ಅಂತ ಎಲ್ಲರಿಗೂ ಅನಿಸಿದ್ದು ಸಹಜ. `ಸ್ವೀಟಿ' ಚಿತ್ರದಲ್ಲಿದ್ದಕ್ಕಿಂತ ಹೆಚ್ಚು ತೆಳ್ಳಗಾಗಿ, ಇನ್ನಷ್ಟು ಸುಂದರವಾಗಿ ಕಾಣುವ ರಾಧಿಕಾ ಈ ಚಿತ್ರದಲ್ಲಿ ಟೀಚರ್‌ ಪಾತ್ರ ವಹಿಸುತ್ತಿದ್ದಾಳೆ.

`ಸ್ವೀಟಿ'ಯಲ್ಲಿ ಮಾಡರ್ನ್‌ ಉಡುಗೆಯಲ್ಲಿ ಕಂಗೊಳಿಸಿದರೆ `ರುದ್ರತಾಂಡವ' ಚಿತ್ರದಲ್ಲಿ ಸೀರೆಯಲ್ಲಿ ರಾಧಿಕಾ ಮಿಂಚಲಿದ್ದಾಳೆ.

``ನನಗೆ ಈ ಚಿತ್ರದ ಕಥೆ, ಪಾತ್ರ ಎಲ್ಲವೂ ಹಿಡಿಸಿತು. ತಮಿಳಿನ ಚಿತ್ರ ನೋಡಿದ್ದರಿಂದ ನಾನು ಇನ್ನೂ ಚೆನ್ನಾಗಿ ನಟಿಸಬೇಕೆಂಬ ಉತ್ಸಾಹ ಹುಟ್ಟಿಕೊಂಡಿತು. ಹಾಗಾಗಿ ಈ ಪಾತ್ರದ ಬಗ್ಗೆ ತುಂಬಾನೆ ಆಸಕ್ತಿ ವಹಿಸಿದ್ದೀನಿ. ಚಿರು ಚಿತ್ರಗಳನ್ನು ನೋಡಿದ್ದೇನೆ. ಒಳ್ಳೆ ನಟರು, ಅವರ ಜೊತೆ ನಟಿಸುತ್ತಿರುವುದು ಹೊಸ ಕಾಂಬಿನೇಶನ್‌. ತೆರೆ ಮೇಲೆ ಮೂಡಿಬರುವ ಹಾಗಾಗಿದೆ. ``ಗುರು ದೇಶಪಾಂಡೆಯರು ಈ ಚಿತ್ರದ ಬಗ್ಗೆ ನಿರೂಪಿಸಿದಾಗ ಅವರು ಹೇಳಿದ ರೀತಿಯೇ ನನಗೆ ತುಂಬಾ ಇಷ್ಟವಾಯ್ತು. ಈಗಾಗಲೇ `ರಾಜಾ ಹುಲಿ'ಯಂಥ ಯಶಸ್ವಿ ಚಿತ್ರ ನೀಡಿದ್ದಾರೆ. `ರುದ್ರ ತಾಂಡವ' ಇನ್ನೂ ಚೆನ್ನಾಗಿ ಮೂಡಿಬರಬೇಕೆಂಬ ಆಸೆ ನಮ್ಮ ಇಡೀ ತಂಡಕ್ಕಿದೆ,'' ಎಂದಳು ರಾಧಿಕಾ.

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಗಿರೀಶ್‌ ಕಾರ್ನಾಡ್‌ ಕಾಣಿಸಿಕೊಳ್ಳಲಿದ್ದಾರೆ. ತಂಡ ಹೊಸದಾದರೂ ನಿರ್ದೇಶಕರ ಕೆಲಸದ ವೈಖರಿ ಬಗ್ಗೆ ತುಂಬಾನೆ ನಂಬಿಕೆ ಇದೆ ಎಂದರು. ರೀಮೇಕ್‌ ಚಿತ್ರಗಳನ್ನು ಒಪ್ಪಿಕೊಳ್ಳುವಾಗ ತಾವು ಮೂಲ ಚಿತ್ರವನ್ನು ನೋಡುವುದಿಲ್ಲ ಎಂದು ಹೇಳಿದರು. ರಾಧಿಕಾ ಜೊತೆಯಲ್ಲಿ `ಸ್ವೀಟಿ' ಚಿತ್ರದಲ್ಲಿ ನಟಿಸಿದ್ದೆ. ಈಗ ಮತ್ತೆ ಆಕೆ ಜೊತೆಯಲ್ಲಿ ನಟಿಸುತ್ತಿರುವುದು ಸಂತೋಷ ಎನ್ನುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ