`ಛತ್ರಿವಾಲಿ' ಚಿತ್ರ ಅಟ್ಟರ್‌ ಫ್ಲಾಪ್‌ ಆದ ನಂತರ, ರಕುಲ್ ‌ಬಾಲಿವುಡ್‌ ನಿಂದ ತನ್ನ ಹಾಸಿಗೆ ಸುತ್ತಿಕೊಂಡು, ದಕ್ಷಿಣದ ರೈಲು ಹತ್ತಿ ಹೊರಟೇಬಿಟ್ಟಳು. ಸದ್ಯಕ್ಕಂತೂ ಬಾಲಿವುಡ್‌ ನಲ್ಲಿ ಈಕೆಗೆ ಮಣೆ ಹಾಕುವವರಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ `ಅಯ್ಲಾನ್‌' ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಹೇಗೂ ಬಾಲಿವುಡ್‌ ನ ಹಡಗು ಮುಳುಗುತ್ತಿದೆ, ಇನ್ನು ಇಲ್ಲಿದ್ದು ಏನು ಲಾಭ? ಇಲ್ಲಿನ ನಿರ್ಮಾಪಕರು ದಕ್ಷಿಣದವರಿಗೆ ಮೊರೆ ಹೋಗುತ್ತಿರುವಾಗ, ಡೈರೆಕ್ಟ್ ಆಗಿ ತಾನು ಅಲ್ಲೇ ನಟಿಸುವುದು ಒಳ್ಳೆಯದಲ್ಲವೇ ಎಂದು ನಿರ್ಧರಿಸಿದಂತಿದೆ. ಗಾಳಿ ಬಂದಾಗ ತೂರಿಕೋ, ಎನ್ನುವುದು ಇದನ್ನೇ ಅಲ್ಲವೇ?

Wajan_Ko_Lekar_Trolls_Ke_Nishane_Par_Huma

ದೇಹ ತೂಕದ ಟ್ರೋಲ್ ಗೆ ಗುರಿಯಾದ ಹುಮಾ

`ಡಬಲ್ ಸ್ಟಾಂಡರ್ಡ್' ಚಿತ್ರದ ನಂತರ ಹುಮಾ ಕುರೇಶಿ ಹೆಚ್ಚುತ್ತಿರುವ ತನ್ನ ದೇಹದ ಕುರಿತಾಗಿ ತುಸು ನಿರ್ಲಕ್ಷ್ಯಳಾಗಿದ್ದಾಳೆ ಎಂದರೆ ಉತ್ಪ್ರೇಕ್ಷೆಯಲ್ಲ. ಆದರೆ ಹಾಗೇಂತ ಅವಳನ್ನು ಬಾಡಿ ಶೇಮಿಂಗ್‌ ಗೆ ಮತ್ತೆ ಮತ್ತೆ ಗುರಿ ಮಾಡುವುದೇ? ಇತ್ತೀಚೆಗೆ FB‌ಇತ್ಯಾದಿಗಳಲ್ಲಿ ತಲೆಕೆಟ್ಟ ಟ್ರೋಲಿಗರು ಈಕೆಯನ್ನು ಕೀಳುವ ಪೋಸ್ಟಿಂಗ್‌ ನಿಂದ ಕೆಣಕಿದ್ದಾರೆ. ಹೀಗೆ ಮಾಡುವುದು ಖಂಡಿತಾ ತಪ್ಪು. ಈ ಕುರಿತಾಗಿ ಎಲ್ಲಾ ತಾಯಂದಿರೂ ಜಾಗೃತಿ ವಹಿಸಲೇಬೇಕು. ಯಾವ ಮಕ್ಕಳೂ ಇಂಥ ಕೀಳು ಕಮೆಂಟ್‌ ಮಾಡದಂತೆ ಅವರು ತರಬೇತಿ ನೀಡಬೇಕು. ಸೋಶಿಯಲ್ ಮೀಡಿಯಾದಲ್ಲಿನ ಸ್ವೈರತೆ ಹಾಗೂ ಉತ್ತಮ ಸಂಸ್ಕಾರಗಳಿಂದ ದೂರ ಉಳಿಯುತ್ತಿರುವ ಇಂದಿನ ಯುವಜನತೆ, ಸರಿತಪ್ಪುಗಳ ವ್ಯತ್ಯಾಸ ತಿಳಿಯದೆ ಮತಿಗೆಟ್ಟಿದೆ. ಮಕ್ಕಳು ಉತ್ತಮ ಸಂಸ್ಕಾರ ಪಡೆದಾಗ ಮಾತ್ರ ಇಂಥ ಅನಗತ್ಯ ಕೀಟಲೆಗಳಿಂದ ದೂರ ಉಳಿಯಲು ಸಾಧ್ಯ.

Kajol_Ka_OTT_Trial

OTT ಟ್ರಯಲ್ ಗೆ ಹೊರಟ ಕಾಜೋಲ್

‌ಕಾಜೋಲ್ ದೇವಗನ್‌ ಇತ್ತೀಚೆಗೆ `ದಿ ಟ್ರಯಲ್' ವೆಬ್‌ ಸೀರೀಸ್‌ ನಲ್ಲಿ ನಟಿಸುತ್ತಿದ್ದಾಳೆ. ಇದರ ಟ್ರೇಲರ್‌ ಕಂಡ ಇವಳ ಫ್ಯಾನ್ಸ್, ಇದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಹಾಗೆ ನೋಡಿದರೆ ಕೋರ್ಟ್‌ ರೂಂ ಡ್ರಾಮಾ ಎಲ್ಲರಿಗೂ ಇಷ್ಟ. ಈ ಟ್ರೇಲರ್‌ ಕಂಡು ಹೊಳೆಯುವ ಒಂದು ವಿಶಿಷ್ಟ ವಿಚಾರವೆಂದರೆ, ಯಾವ ರೀತಿ ಒಬ್ಬ ಗೃಹಿಣಿ, ಅಗತ್ಯ ಬಿದ್ದಾಗ ತನ್ನ ಪತಿಗೆ ಸಾಥ್‌ ನೀಡಲು ಕಾನೂನಿನ ವಿರುದ್ಧ ಹೋರಾಡಬಲ್ಲಳು ಎಂಬುದು. ಹಾಗೆಯೇ ತನ್ನ ಪರಿವಾರ ಉಳಿಸಿಕೊಳ್ಳುವುದೂ ಅವಳಿಗೆ ಮುಖ್ಯ. ನಮ್ಮ ಸಮಾಜದಲ್ಲಿ ಗೃಹಿಣಿ ಎಂದರೆ ಇಂದಿಗೂ, ಕೇವಲ ಮಕ್ಕಳನ್ನು ಹೆರುವ, ಅಡುಗೆ ಮನೆಗಷ್ಟೇ ಸೀಮಿತ ಎಂದು ಕೀಳಾಗಿ ನೋಡುವ ದೃಷ್ಟಿಕೋನ ಬದಲಾಗಿಲ್ಲ.

Rassi_Jal_Gai_Lekin_Bal_Nahi_Gaya_1

Rassi_Jal_Gai_Lekin_Bal_Nahi_Gaya_2

ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ!

ಈ ಗಾದೆ ಮಾತು ಬಾಲಿವುಡ್‌ ನಿರ್ಮಾಪಕರಿಗೆ ಅಕ್ಷರಶಃ ಅನ್ವಯಿಸುತ್ತದೆ. ಈಗಿನದು ಎಂಥ ಸೂಕ್ಷ್ಮ ಕಾಲ ಎಂದರೆ, ಬಿಸಿ ಹಾಲಿರಲಿ, ಅದರ ಮಜ್ಜಿಗೆಯನ್ನೂ ಜನ ಉಫ್‌ ಎಂದು ಊದಿ ಕುಡಿಯುವಂಥದ್ದು. ಹಾಗಿರುವಾಗ ಈ ಮಂದಿ ಮಾತ್ರ ಕುದಿವ ಹಾಲನ್ನು ಹಾಗೇ ಹೀರುತ್ತಿದ್ದಾರೆ. ಅರ್ಥಾತ್‌..... ಮುಂದಿನ ತಿಂಗಳಲ್ಲಿ ಅಕ್ಷಯ್‌ ನ `ಸನಿಯ `ಗದ್ದರ್‌,' ರಣಬೀರ್‌ ಕಪೂರ್‌ ನ `ಅನಿಮಲ್' ಚಿತ್ರಗಳು ಒಟ್ಟೊಟ್ಟಿಗೆ ತೆರೆ ಕಾಣಲಿವೆ. 3 ಚಿತ್ರಗಳೂ ಮಹಾನ್‌ ಸ್ಟಾರ್‌ ಕಾಸ್ಟ್ ಹಾಗೂ ಹೈ ಬಜೆಟ್‌ ಚಿತ್ರಗಳೇ ಆಗಿವೆ. ಹಾಗಿರುವಾಗ ಈ 3 ಚಿತ್ರಗಳೂ ಥಿಯೇಟರ್‌ ಹಾಗೂ ಸ್ಕ್ರೀನ್ಸ್ ವಿಷಯಗಳಲ್ಲಿ ಹಂಚಿ ಹೋಗುವುದಿಲ್ಲವೇ? ಕೆಲವು ಕಾಲದ ಗ್ಯಾಪ್‌ ಇಟ್ಟುಕೊಂಡು ಇವನ್ನು ರಿಲೀಸ್‌ ಮಾಡಬಾರದಿತ್ತೇ? ಒಂದು ಪಕ್ಷ.... (ಅಲ್ಲ ಹೇಳಿದ್ದು....) 3 ಚಿತ್ರಗಳೂ ಸಕ್ಸೆಸ್‌ ಆದವು ಅಂತಿಟ್ಟುಕೊಂಡರೆ.... ಜನ ಹುಚ್ಚರಂತೆ ಈ ಮೂವರನ್ನೂ ಕ್ರಮವಾಗಿ ಒಂದಾದ ಮೇಲೊಂದರಂತೆ ನೋಡುತ್ತಾರೇನು? ಆಗ ನಷ್ಟ ಆಗುವುದು ವೀಕ್ಷಕರಿಗಲ್ಲ, ನಿರ್ಮಾಪಕರಿಗೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ