14.8 ಕೆಜಿ ಅಂದ್ರೆ ನಾವೇನೋ ಗ್ಯಾಸ್ ಸಿಲಿಂಡರ್ ಬಗ್ಗೆ ಹೇಳ್ತಿದ್ದೀವಿ ಅಂದುಕೊಂಡ್ರಾ..? ಖಂಡಿತ ಅಲ್ಲ.. ಇದು ಚೆಂದುಳ್ಳಿ ಚೆಲುವೆ ರನ್ಯಾ ರಾವ್ ಬಳಿ ಸಿಕ್ಕ ಚಿನ್ನದ ತೂಕ. ರನ್ಯಾ ರಾವ್ ಚಿನ್ನದ ಕಳ್ಳ ಸಾಗಣೆ ಪ್ರಕರಣದಲ್ಲಿ ಸಿಕ್ಕಿ ಹಾಕ್ಕೊಂಡ ಕಥೆಯೇ ರಣರೋಚಕ. ಇಂತಾ ಬಂಗಾರದ ಬೊಂಬೆ ಇದುವರೆಗೆ 45 ದೇಶಗಳಿಗೆ ಪ್ರಯಾಣ ಮಾಡಿದ್ದಾಳೆ ಅಂತಾ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಮೆರಿಕ, ಯುರೋಪ್, ಮಧ್ಯಪ್ರಾಚ್ಯ ದೇಶಗಳನ್ನ ಸುತ್ತಿದ್ದಾಳಂತೆ ರನ್ಯಾ ರಾವ್. ಅದ್ರಲ್ಲೂ ಕಳೆದೊಂದು ವರ್ಷದಲ್ಲಿ ದುಬೈಗೆ 27 ಬಾರಿ ಹೋಗಿದ್ಲಂತೆ. ಕಳೆದ 15 ದಿನಗಳಲ್ಲಿ 4 ಬಾರಿ ದುಬೈಗೆ ಹೋಗಿದ್ಲು ಅಂತಾ ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

Ranya

ರನ್ಯಾ ರಾವ್‌ಳನ್ನ ಶುಕ್ರವಾರ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಡಿಆರ್‌ಐ ಅಧಿಕಾರಿಗಳು, ಮಾರ್ಚ್ 9ರವರೆಗೆ ತಮ್ಮ ವಶಕ್ಕೆ ನೀಡಲು ಮನವಿ ಮಾಡಿದ್ರು. ನ್ಯಾಯಾಧೀಶ ವಿಶ್ವನಾಥ ಸಿ ಗೌಡರ್ ಪೀಠದ ಎದುರು ರನ್ಯಾಳನ್ನ ಹಾಜರುಪಡಿಸಲಾಗಿತ್ತು. ಈ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್, ಒಂದೇ ಬಾರಿಗೆ ಸುಮಾರು 14.8 ಕೆಜಿ ಚಿನ್ನ ಒಬ್ಬ ವ್ಯಕ್ತಿ ಬಳಿ ಸಿಕ್ಕಿದೆ. ಈಕೆ ಹದಿನೈದೇ ದಿನದಲ್ಲಿ ಸುಮಾರು 4 ಬಾರಿ ದುಬೈಗೆ ಹೋಗಿ ಬಂದಿದ್ದಾಳೆ. ಹೀಗಾಗಿ ರನ್ಯಾಳ ಹಿಂದೆ ಕಳ್ಳ ಸಾಗಣೆ ಮಾಫಿಯಾ ಇದ್ಯಾ..? ಈಕೆಗೆ ಸಹಾಯ ಮಾಡ್ತಿರೋದ್ಯಾರು..? ರಾಜ್ಯದಲ್ಲಿ ಚಿನ್ನ ಕಳ್ಳ ಸಾಗಣೆ ಮಾಡೋ ದೊಡ್ಡ ಜಾಲವಿದ್ಯಾ..? ದೇಶದ ಭದ್ರತೆಗೆ ಕಂಟಕ ತರೋ ವಿಚಾರ ಇದಾಗಿದೆ. ಹೀಗಾಗಿ ರನ್ಯಾ ರಾವ್‌‌ಳನ್ನ ಹೆಚ್ಚಿನ ವಿಚಾರಣೆ ಮಾಡಬೇಕಿದೆ. ಹೀಗಾಗಿ ಡಿಆರ್‌ಐ ಅಧಿಕಾರಿಗಳ ವಶಕ್ಕೆ ನೀಡುವಂತೆ ಮನವಿ ಮಾಡಿದ್ರು. ಮನವಿ ಪುರಸ್ಕರಿಸಿದ ನ್ಯಾಯಾಧೀಶ ವಿಶ್ವನಾಥ ಸಿ ಗೌಡರ್ ಮಾರ್ಚ್ 9ರವರೆಗೆ ರನ್ಯಾಳನ್ನ ಡಿಆರ್‌ಐ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

ಗೋಲ್ಡ್ಸ್ಮಗ್ಲಿಂಗ್ ಹಿಂದೆ ದೊಡ್ಡವರು..!? :

ಕೆಐಎಎಲ್‌‌ನಲ್ಲಿ ರನ್ಯಾ ರಾವ್ ಜೊತೆಗೆ ಪೊಲೀಸ್ ಸಿಬ್ಬಂದಿ ಒಬ್ಬರನ್ನ ಸಹ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ರು. ಆದ್ರೆ, ತನಗೆ ಚಿನ್ನ ಕಳ್ಳ ಸಾಗಣೆ ಮಾಡೋ ವಿಚಾರ ಗೊತ್ತಿರಲಿಲ್ಲ. ಮೇಲಧಿಕಾರಿಗಳ ಸೂಚನೆಯಂತೆ ಆಕೆಯನ್ನ ವಿಐಪಿ ಮಾರ್ಗದಲ್ಲಿ ಕರೆ ತರುತ್ತಿದ್ದೆ ಅಂತಾ ಸಿಬ್ಬಂದಿ ಹೇಳಿದ ಬಳಿಕ, ಅವರ ವಿಚಾರಣೆ ನಡೆಸಿ ಬಿಟ್ಟು ಕಳಿಸಲಾಗಿದೆ. ಇದರ ನಡುವೆ ರನ್ಯಾ ರಾವ್ ಜೊತೆಗೆ ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರಿಗೆ ನಂಟಿದೆ ಅಂತಾ ಹೇಳಲಾಗ್ತಿದೆ. ಅಲ್ದೆ, ಬೆಂಗಳೂರಿನ ಪ್ರಖ್ಯಾತ ಆಭರಣ ಮಳಿಗೆಗಳ ಜೊತೆಗೆ ಲಿಂಕ್ ಇರೋ ಕುರಿತು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ರನ್ಯಾ ರಾವ್ ವಿಚಾರಣೆಯಲ್ಲಿ ಯಾರ ಯಾರ ಹೆಸರು ಬಾಯಿಬಿಡ್ತಾಳೆ ಅನ್ನೋ ಕುತೂಹಲ ಸಹ ಇದೆ. ಅಲ್ದೆ ಆ ರಾಜಕಾರಣಿ ಯಾರು..? ಆಭರಣ ಮಳಿಗೆಗಳು ಯಾವುವು ಅನ್ನೋದು ಕೂಡ ಕ್ಯೂರಿಯಾಸಿಟಿ ಹುಟ್ಟಿಸಿದೆ.

Ranya-1

ತಂದೆ IPS ಅಧಿಕಾರಿಗೆ ಗೊತ್ತಿರ್ಲಿಲ್ವಾ..? :

ರನ್ಯಾ ರಾವ್‌‌ಳನ್ನ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೀತಿದ್ದಂತೆ, ಆಕೆಗೂ ನನಗೂ ಯಾವುದೇ ಸಂಬಂಧ ಇಲ್ಲ ಅಂತಾ ಆಕೆಯ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಹೇಳಿದ್ರು. ಇದನ್ನ ಹೇಗೆ ನಂಬೋದು ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ, ಆಕೆ ಬೆಂಗಳೂರಿಗೆ ಬಂದು ಇಳೀತಿದ್ದಂತೆ ಪೊಲೀಸ್ ಸಿಬ್ಬಂದಿ ಆಕೆಗೆ ಎಸ್ಕಾರ್ಟ್ ಕೊಟ್ಟಿದ್ದಾರೆ. ಹಾಗಿದ್ರೆ, ಯಾರ ಆಣತಿಯ ಮೇರೆಗೆ ಆಕೆಗೆ ಎಸ್ಕಾರ್ಟ್ ಒದಗಿಸಿ, ವಿಐಪಿ ಗೇಟ್‌‌ನಲ್ಲಿ ಎಕ್ಸಿಟ್ ಕೊಡಿಸೋಕೆ ಮುಂದಾಗಿದ್ರು ಅನ್ನೋ ಪ್ರಶ್ನೆ ಕೂಡ ಎದ್ದಿದೆ. ರನ್ಯಾ ರಾವ್ ಡಿಆರ್‌ಐ ಅಧಿಕಾರಿಗಳಿಗೆ ತಗಲಾಕಿಕೊಂಡ ಬಳಿಕ ಡ್ರಾಮಾ ಮಾಡಲು ಶುರು ಮಾಡಿದ್ದಾಳೆ. ತನಗೇನು ಗೊತ್ತಿಲ್ಲ. ಬಲವಂತ ಮಾಡಿ ನನ್ನಿಂದ ಚಿನ್ನದ ಕಳ್ಳ ಸಾಗಣೆ ಮಾಡಿಸಿದ್ದಾರೆ ಅಂತಾ ಹೇಳಿದ್ದಾಳೆ. ಹಾಗಿದ್ರೆ, ಹೀಗೆ ಬಲವಂತ ಮಾಡಿದೋರು ಯಾರು..? ಹಿರಿಯ ಪೊಲೀಸ್ ಅಧಿಕಾರಿ ಮಗಳಾಗಿ ಬಲವಂತ ಮಾಡಿದೋರ ಕುರಿತು ದೂರು ನೀಡದೇ ಅವರಿಗೆ ಸಹಕರಿಸಿದ್ಯಾಕೆ ಅನ್ನೋ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

Ranya-3

ರನ್ಯಾ ರಾವ್ ವಿಮಾನ ನಿಲ್ದಾಣದ ವಿಐಪಿ ಗೇಟ್ ಬಳಸಿ ಚಿನ್ನ ಕಳ್ಳ ಸಾಗಣೆ ಮಾಡಿದ್ದಾಳೆ. ಇದ್ರಿಂದಾಗಿ ಕೆಐಎಎಲ್ ಭದ್ರತೆ ಕುರಿತು ಪ್ರಶ್ನೆಗಳು ಎದ್ದಿದ್ವು. ರನ್ಯಾ ರಾವ್ ಪ್ರಕರಣದಿಂದ ಎಚ್ಚೆತ್ತಿರೋ ಸರ್ಕಾರ, ಬೆಂಗಳೂರು ಪೊಲೀಸರು ಭದ್ರತಾ ಶಿಷ್ಟಾಚಾರವನ್ನ ಬದಲಿಸಿದ್ದಾರೆ. ಕೇವಲ ಅಧಿಕಾರಿಗಳಿಗೆ ಮಾತ್ರ ಶಿಷ್ಟಾಚಾರ ಮತ್ತು ವಿಐಪಿ ಸೌಲಭ್ಯ ನೀಡಬೇಕು. ಅಧಿಕಾರಿಗಳ ಕುಟುಂಬಸ್ಥರಿಗೆ ಶಿಷ್ಟಾಚಾರ, ವಿಐಪಿ ಸೌಲಭ್ಯ ಒದಗಿಸದಂತೆ ಆದೇಶಿಸಲಾಗಿದ್ದು, ಶುಕ್ರವಾರದಿಂದ ಹೊಸ ನಿಯಮ ಜಾರಿಗೆ ಬಂದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ