ಜಾಗೀರ್ದಾರ್*

ಕೋಲಾರ ಮೂಲದ ಎ.ವಿ.ರವಿ, ಜಿಮ್ ರವಿ ಎಂದೇ ಖ್ಯಾತಿ ಪಡೆದವರು. ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟುವಾಗಿ ದೇಶ ಹಾಗೂ ವಿದೇಶಗಳಲ್ಲೂ ಪ್ರಸಿದ್ದರಾಗಿರುವ ಜಿಮ್ ರವಿ, ಮಿಸ್ಟರ್ ಇಂಡಿಯಾ ಹಾಗೂ ಕರ್ನಾಟಕದ ಏಕಲವ್ಯ ಪ್ರಶಸ್ತಿ ವಿಜೇತರು ಕೂಡ. ಇತ್ತೀಚೆಗೆ "ಪುರುಷೋತ್ತಮ" ಎಂಬ ಚಿತ್ರದಲ್ಲಿ ನಾಯಕನಾಗೂ ರವಿ ನಟಿಸಿದ್ದರು. ಇದೆಲ್ಲಾ ಒಂದು ಕಡೆಯಾದರೆ, ರವಿ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಹೆಸರುವಾಸಿ. ಆದರೆ ಒಂದು ದಿನ ಆದರೆ ತಾವು ಮಾಡುವ ಸಾಮಾಜಿಕ ಕೆಲಸದ ಬಗ್ಗೆ ಒಂದು ದಿನವೂ ಪ್ರಚಾರ ಬಯಸಿದವರಲ್ಲಾ.‌

ಆದರೆ ಎ.ವಿ ರವಿ ಅವರು ಈಗ ಅನೇಕ ಜನರಿಗೆ ಆದರ್ಶವಾಗುವಂತಹ ಮಹತ್ತರ ಕಾರ್ಯ ಮಾಡಿದ್ದಾರೆ. ರವಿ ಅವರ ತಂದೆಗೆ ಕಾಶಿಯಾತ್ರೆ ಮಾಡುವ ಆಸೆ ಇತ್ತಂತೆ. ಆದರೆ ಕಾರಾಣಾಂತರದಿಂದ ಅದು ಸಾಧ್ಯವಾಗಿರಲಿಲ್ಲ. ತಂದೆಗೆ ಕಾಶಿಯಾತ್ರೆ ಮಾಡಿಸಲಿಲ್ಲ. ಎಂಬ ಕೊರಗು ರವಿ ಅವರನ್ನು ಸದಾ ಕಾಡುತ್ತಿತ್ತಂತೆ. ಹಾಗಾಗಿ ರವಿ ಅವರು ಹದಿನಾಲ್ಕು ವರ್ಷಗಳ ಹಿಂದೆಯೇ ಒಂದು ಸಂಕಲ್ಪ ಮಾಡಿದರಂತೆ. ನಮ್ಮ ಅಪ್ಪನ ಹೆಸರಿನಲ್ಲಿ ಕೈಲಾದಷ್ಟು ಜನ ಅಶಕ್ತರಿಗೆ ಕಾಶಿಯಾತ್ರೆ ಮಾಡಿಸುತ್ತೇನೆ ಅಂತ. ಅಂದುಕೊಂಡ ಹಾಗೆ ಎ.ವಿ.ರವಿ ಮಾಡಿದ್ದಾರೆ. ಐದಲ್ಲ, ಹತ್ತಲ್ಲ.. ಬರೋಬರಿ 101 ಜನರಿಗೆ ವಿಮಾನದ ಮೂಲಕ ಕಾಶಿಯಾತ್ರೆ ಮಾಡಿಸಿಕೊಂಡು ಬಂದಿದ್ದಾರೆ.

ravi1

ಕರ್ನಾಟಕ ಸೇರಿದಂತೆ ಆಂದ್ರ ಹಾಗೂ ತಮಿಳುನಾಡಿನಿಂದ ಸುಮಾರು 101 ಜನ ಈವರೆಗೂ ಕಾಶಿಯಾತ್ರೆ ಮಾಡದ ಅಶಕ್ತರನ್ನು ಆಯ್ಕೆ ಮಾಡಿ ಯಾವುದೇ ತೊಂದರೆ ಬಾರದ ಹಾಗೆ ಕಾಶಿಯಾತ್ರೆಯನ್ನು ಅದ್ದೂರಿಯಾಗಿ ಮಾಡಿಸಿದ್ದಾರೆ. ಅವರವರ ಊರುಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲು ವಾಹನದ ವ್ಯವಸ್ಥೆ ಮಾಡಿ, ವಿಮಾನ ನಿಲ್ದಾಣದಲ್ಲಿ ಉಪಹಾರ ಮುಗಿಸಿ ನೇರವಾಗಿ ಅಯೋಧ್ಯೆಗೆ ತೆರಳಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಎಲ್ಲರಿಗೂ ಲಘು ಉಪಾಹಾರ ಹಾಗೂ ನೀರಿನ ಬಾಟಲ್ ನೀಡಲಾಯಿತು ಹಾಗೂ ದೇವರ ದರ್ಶನಕ್ಕಾಗಿ ಮಹಿಳೆಯರಿಗೆ ಎರಡು ಹೊಸ ಸೀರೆ, ಪುರುಷರಿಗೆ ಎರಡು ಹೊಸ ಪಂಚೆ ಉಡುಗೊರೆಯಾಗಿ ಕೊಡಲಾಯಿತು. ಅಯೋಧ್ಯೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡದವರಾದ ಚೆನ್ನಪ್ಪ ಅವರು ಇಷ್ಟು ಜನರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಿಸಿದ್ದರು. ಪೊಲೀಸ್ ಸಿಬ್ಬಂದಿಗಳು ಸಹ ಇವರೆಲ್ಲರು ಸುಲಭವಾಗಿ ದೇವರ ದರ್ಶನ ಮಾಡಲು ಸಹಕಾರ ನೀಡಿದ್ದಾರೆ. ಅಲ್ಲಿಂದ ವಿಶೇಷ ಬಸ್ ಮೂಲಕ ಕಾಶಿಗೆ ಬಂದ 101 ಜನರ ತಂಡಕ್ಕೆ ಪ್ರಸಿದ್ದ ಜಂಗಮವಾಡಿ ಮಠದಲ್ಲಿ 45 AC room ಗಳನ್ನು ವಾಸ್ತವ್ಯಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲೇ ಉಪಹಾರ ಹಾಗೂ ಭೋಜನದ ವ್ಯವಸ್ಥೆ ಕೂಡ ಆಯೋಜಿಸಲಾಗಿತ್ತು. ಕಾಶಿ ವಿಶ್ವನಾಥನ ಮಂದಿರದ ಹತ್ತಿರವಿರುವ ಕರ್ನಾಟಕದ ಈ ಮಠ, ಶಿಸ್ತು, ಸಂಯಮಕ್ಕೆ ಹೆಸರುವಾಸಿ. ಅಲ್ಲಿನ ಆತಿಥ್ಯ ಬಹು ಚೆಂದ.‌ ಮಠದಲ್ಲಿ ಉಳಿದುಕೊಂಡ ಯಾತ್ರಾರ್ಥಿಗಳ ತಂಡವನ್ನು ಕಾಶಿಯಲ್ಲೂ ಸಹ ಚೆನ್ನಪ್ಪ ಅವರ ಸಹಕಾರದಿಂದ ವಿಶೇಷ ದರ್ಶನ ಮಾಡಿಸಲಾಯಿತು. ಸಂಜೆ ನಡೆಯುವ ಗಂಗಾರತಿಯಲ್ಲೂ ಭಾಗವಹಿಸಲಾಯಿತು. ಕಾಶಿಯಲ್ಲಿರುವ ಅನ್ನಪೂರ್ಣ ಮಂದಿರ ಸೇರಿದಂತೆ ವಿವಿಧ ಮಂದಿಗಳಿಗೆ ಭೇಟಿ ನೀಡಲಾಯಿತು. ಗಂಗೆಯ ತಟದಲ್ಲೇ ಯಾತ್ರಾರ್ಥಿಗಳಿಂದ ತೀರ್ಥವಿಧಿ(ಪಿಂಡಪ್ರದಾನ) ಸಹ ಮಾಡಿಸಲಾಯಿತು. ಮಾರನೇ ದಿವಸ ವಿಶ್ರಾಂತಿಯ ದಿವಸವಾಗಿದ್ದು, ಅಂದು ರವಿ ಮತ್ತು ತಂಡದವರು ಯಾತ್ರಾರ್ಥಿಗಳನ್ನು ಶುಶ್ರೂಷೆ ಮಾಡಿದರು. ಆನಂತರ ಶಾಪಿಂಗ್ ಗೆ ಕರೆದುಕೊಂಡು ಹೋಗಲಾಯಿತು. ಶಾಪಿಂಗ್ ಖರ್ಚಿಗೂ ಸ್ವಲ್ಪ ಹಣವನ್ನು ರವಿ ಅವರೆ ನೀಡಿದ್ದರು. ಈ ಸುಸ್ಸಜಿತ ವ್ಯವಸ್ಥೆಯನ್ನು ಕಂಡು ಭಾವುಕರಾದ ಯಾತ್ರಾರ್ಥಿಗಳು ಆನಂದಭಾಷ್ಪ ಸುರಿಸಿದರು. ರವಿ ಹಾಗೂ ಕಟುಂಬದವರಿಗೆ ತುಂಬು ಹೃದಯದಿಂದ ಆಶೀರ್ವಾದ ಮಾಡಿದರು. ರವಿ ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದರು. ಯಾತ್ರಾರ್ಥಿಗಳು ಎಲ್ಲಾ ಕಡೆ ಓಡಾಡಲು ಎಸಿ ವಾಹನದ ವ್ಯವಸ್ಥೆಯನ್ನೇ ಮಾಡಲಾಗಿತ್ತು. ಪುನಃ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮೇಲೂ ಅವರವರ ಊರುಗಳಿಗೆ ತೆರಳಲು ಅನುಕೂಲವಿರುವ ವಾಹನ ವ್ಯವಸ್ಥೆ ಮಾಡಲಾಗಿತ್ತು. ದೇವರ ದಯೆಯಿಂದ ಇಷ್ಟು ದೊಡ್ಡ ತಂಡದ ಪ್ರಯಾಣದಲ್ಲಿ ಯಾರೊಬ್ಬರಿಗೂ ಆರೋಗ್ಯ ಸೇರಿದಂತೆ ಯಾವುದೇ ತೊಂದರೆ ಆಗಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ