ಶರತ್ ಚಂದ್ರ 

ಅರ್ಧ ವರ್ಷ ಮಂಕಾಗಿ ಕಳೆದ ಸ್ಯಾಂಡಲ್ ವುಡ್ ಗೆ ಎಕ್ಕ ಚಿತ್ರದ ಭರ್ಜರಿ ಓಪನಿಂಗ್ ನವ ಚೈತನ್ಯ ಮೂಡಿಸಿದೆ.. ಕಳೆದ ಆರು ತಿಂಗಳು ಮಾದೇವ ಮತ್ತು ಕೆಲವೊಂದು ಬೆರಳೆಣಿಕೆಯ ಚಿತ್ರಗಳು ಯಶಸ್ವಿಯಾಗಿದ್ದು  ಬಿಟ್ಟರೆ, ಬೇರೆ ಚಿತ್ರಗಳು ಪ್ರತಿ ವಾರ ತೆರೆಗೆ ಬಂದು ಹೋಗುತ್ತಿದ್ದವು ಅಷ್ಟೇ.

ಪ್ರತೀ ಶುಕ್ರವಾರ ಬಿಡುಗಡೆಯ ದಿನ ಥಿಯೇಟರ್ ಮುಂದೆ ಲಾಕ್ ಡೌನ್ ದಿನಗಳ ರಸ್ತೆಗಳನ್ನು ನೆನಪಿಸುತ್ತಿತ್ತು.

1000605052

ಇಂತಹ ಒಂದು ನಿರಾಶದಾಯಕ ದಿನಗಳಲ್ಲಿ ಇದೇ ಶುಕ್ರವಾರ ಬಿಡುಗಡೆಯಾದ ಎಕ್ಕ ಮತ್ತು ಜೂನಿಯರ್ ಚಿತ್ರಗಳು ಬಿಡುಗಡೆಯಾದ ಚಿತ್ರಮಂದಿರದ ಮುಂದೆ ಜಮಾಯಿಸಿದ ಪ್ರೇಕ್ಷಕರನ್ನು ನೋಡಿ ಸಿನಿಮಾ ನೋಡಲು ಚಿತ್ರ ಮಂದಿರಕ್ಕೆ ಬರುವ ಪ್ರೇಕ್ಷಕರು ಇನ್ನೂ ಇದ್ದಾರೆ ಎಂಬುದು ಖಾತ್ರಿ ಯಾಗಿದೆ.

1000605060

ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಇದೇ ಶುಕ್ರವಾರ ಬಿಡುಗಡೆಯಾದ ಎಕ್ಕ ಚಿತ್ರವನ್ನು ನೋಡಲು ದೊಡ್ಮನೆ ಕುಟುಂಬದ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ಅಪ್ಪು ಮಗಳು ವಂದಿತಾ, ಯುವರಾಜ್ ಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್ ಚಿತ್ರಮಂದಿರಕ್ಕೆ ಬಂದು ಚಿತ್ರ ತಂಡ ಮತ್ತು ಅಭಿಮಾನಿಗಳ ಜೊತೆ ಚಿತ್ರ ನೋಡಿ ಎಂಜಾಯ್ ಮಾಡಿದ್ದಾರೆ.

1000605113

ಪ್ರತಿಯೊಂದು ಹಾಡು ಮತ್ತು ಕೆಲವೊಂದು ಸನ್ನಿವೇಶ ಗಳು ತೆರೆಯ ಮೇಲೆ ಬಂದಾಗ ಅಭಿಮಾನಿ ಗಳು ಹುಚ್ಚೆದ್ದು ಕುಣಿದ ದ್ರಶ್ಯಗಳು ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿದೆ.ಸಿನಿಮಾದುದಕ್ಕೂ ಅಪ್ಪು ಅಪ್ಪು ಅಂತ ಅಭಿಮಾನಿಗಳು ಥೀಯೇಟರ್ ನಲ್ಲಿ ಹುಚ್ಚೆದ್ದು ಕುಣಿದು ಯುವ ಸಿನಿಮಾನ ಕಣ್ತುಂಬಿ ಕೊಂಡಿದ್ದಾರೆ.

ಫಸ್ಟ್ ಶೋ ಮುಗಿದ ಮೇಲೆ ಯುವ ಅಭಿಮಾನಿಗಳ ಮಧ್ಯೆ ಬಂದು ಸಿನಿಮಾ ನೋಡಲು ಬಂದ ಅಭಿಮಾನಿ ದೇವರುಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಜನರ ಸಂಭ್ರಮ ನೋಡಿದಾಗ ಸ್ಟಾರ್ ನಟರ ಚಿತ್ರಗಳ ಫಸ್ಟ್ ಡೇ ಫಸ್ಟ್ ಶೋ ದಿನಗಳನ್ನು ನೆನಪಿಸುವಂತಿತ್ತು.

1000605139

ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಎಕ್ಕ ಭರ್ಜರಿ ಓಪನಿಂಗ್ ಪಡೆದಿದ್ದು, ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಮೊದಲ ದಿನ ಅತೀ ಹೆಚ್ಚು ಟಿಕೆಟ್ ಮಾರಾಟವಾದ ಚಿತ್ರದ ಸಾಲಿಗೆ ಎಕ್ಕ ಸಿನಿಮಾ ಸೇರಿದೆ.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನ ಯಶಸ್ಸಿನ ಹಬ್ಬ ಈ ಚಿತ್ರದಿಂದ ಆರಂಭವಾಗಿದೆ.ಚಿತ್ರದ ಬಗ್ಗೆ ಒಳ್ಳೆ ಪ್ರತಿಕ್ರಿಯೆ ಬಂದಿದ್ದು, ಒಂದಷ್ಟು ದಿನ ಎಕ್ಕ ಚಿತ್ರದ ಕ್ರೇಜ್ ಮುಂದುವರಿಯುವುದು ಪಕ್ಕ ಅಂತ ಹೇಳಲಾಗುತ್ತಿದೆ.

 

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ