ಸಮಂತಾ ರುತ್ ಪ್ರಭು ಹೊಸ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೆ, ಸ್ಯಾಮ್ ಮದುವೆಯ ವಿಚಾರವೂ ಸದ್ದು ಮಾಡುತ್ತಿದೆ. ಇದರ ನಡುವೆ ಸದ್ಯ ನಟಿ ನೀಡಿರುವ ಸುದ್ದಿ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಕೊನೆಯದಾಗಿ ರೌಡಿ ಬೇಡಿ ನಟ ವಿಜಯ್ ದೇವರಕೊಂಡ ಜೊತೆ “ಖುಷಿ” ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸ್ಯಾಮ್ ವೆಬ್ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, “ರಕ್ತ ಬ್ರಹ್ಮಂದ್” ಎಂಬ ವೆಬ್ ಸರಣಿಯಲ್ಲಿಯೂ ನಟಿಸುತ್ತಿದ್ದಾರೆ.
ಹೌದು, ಸ್ಯಾಮ್ ಒಡೆತನದ ತ್ರಲಾಲಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶುಭಂ ಚಿತ್ರವೂ ತಯಾರಾಗುತ್ತಿದೆ. ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಇದಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಶುಭಂ ಚಿತ್ರವನ್ನು ಪ್ರವೀಣ್ ಕಂಡ್ರೆಗುಲಾ ನಿರ್ದೇಶಿಸುತ್ತಿದ್ದಾರೆ.
ಇದರ ನಡುವೆ ಸಮಂತಾ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ “ಶುಭಂ” ರಿಲೀಸ್ ಕುರಿತು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಸಿನಿಮಾ ಮೇ 9 ರಂದು ಬಿಡುಗಡೆಯಾಗಲಿದೆ ಎಂದು ಸ್ಯಾಮ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.. ಈ ಮೂಲಕ ಚಿತ್ರದ ಬಗ್ಗೆ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಮತ್ತೊಂದೆಡೆ, ಸಮಂತಾ ಮದುವೆಯ ಬಗ್ಗೆಯೂ ನೆಟ್ಟಿಗರು ವಿವಿಧ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ.. ಸ್ಯಾಮ್ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದು, ಇಬ್ಬರೂ ಶೀಘ್ರದಲ್ಲೇ ಮದುವೆಯಾಗುತ್ತಾರೆ ಅಂತ ಹೇಳಲಾಗುತ್ತಿದೆ. ಆದರೆ, ನಟಿ ಈ ಬಗ್ಗೆ ಇನ್ನೂ ಯಾವುದೇ ಕಾಮೆಂಟ್‌ಗಳನ್ನು ಮಾಡಿಲ್ಲ..