ಸ್ಯಾಂಡಲ್​ವುಡ್​​​ ಬಾದ್​ಶಾ.. ಕರುನಾಡ ಚಕ್ರವರ್ತಿ.. ಹ್ಯಾಟ್ರಿಕ್ ಹೀರೋ ನಟ ಶಿವರಾಜ್​ಕುಮಾರ್​ ಈಗ ಫುಲ್ ಜಾಲಿ ಮೂಡ್​ನಲ್ಲಿದ್ದಾರೆ. ಅಮೆರಿಕದಲ್ಲಿ ಮೂತ್ರಕೋಶ ಕ್ಯಾನ್ಸರ್​​ಗೆ ಸಕ್ಸಸ್​ ಆಪರೇಷನ್​ ನಂತರ ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಅಮೆರಿಕದ ಕಡಲ ಕಿನಾರೆಯಲ್ಲಿ ಪತ್ನಿ ಗೀತಾ ಮತ್ತು ಕೆಲ ಆಪ್ತರ ಜೊತೆ ವಾಯುವಿಹಾರ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ನನ್ನ ಸಮುದ್ರ ನೀವು ಅಂತಾ ಸಮುದ್ರದ ಬ್ಯಾಕ್​ಗ್ರೌಂಡ್​ ಇರುವ ಫೋಟೋ ಜೊತೆಗೆ ಪೋಸ್ಟ್ ಹಾಕಿದ್ದ ಶಿವಣ್ಣ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟಿದ್ದರು.

ಇದೀಗ ತಾವು ಫಿಟ್ & ಫೈನ್​ ಅಂತಾ ಕೆಲ ಫೋಟೋಸ್ ಹಾಕಿ ತಾನು ಆರೋಗ್ಯವಾಗಿದ್ದೇನೆ.. ಏನೂ ವರಿ ಬೇಡ ಅಂತಾ ಅಭಿಮಾನಿಗಳಿಗೆ ಚಿಂತೆ ಮಾಡದಿರುವಂತೆ ಜೋಗಯ್ಯ ಮೆಸೇಜ್ ಕೊಟ್ಟಿದ್ದಾರೆ. ಸದ್ಯ ಸರ್ಜರಿಯಿಂದ ಆರೋಗ್ಯವಾಗಿರುವ ಶಿವಣ್ಣ ಇನ್ನೂ ಕೆಲ ದಿನಗಳ ಕಾಲ ಅಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಯಾಕಂದ್ರೆ, ಸ್ವದೇಶಕ್ಕೆ ಮರಳಿದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಭೇಟಿಯಾಗಲೇಬೇಕು. ಆಗ ಇನ್​ಫೆಕ್ಷನ್ ಆಗಿ ಆರೋಗ್ಯ ಮೇಲೆ ಪರಿಣಾಮ ಬೀರಬಹುದು ಎಂಬ ವೈದ್ಯರ ಸಲಹೆ ಮೇರೆಗೆ ಇನ್ನೂ ಕೆಲ ದಿನಗಳ ಕಾಲ ಪತ್ನಿ ಗೀತಾ ಜೊತೆ ಅಲ್ಲೇ ಇರಲಿದ್ದಾರೆ.

Shivanna-2

ಅಸಲಿಗೆ ಆರಂಭದಲ್ಲಿ ಮೂತ್ರಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಶಿವಣ್ಣ ಅಭಿಮಾನಿಗಳು ಬೇಸರಗೊಳ್ತಾರೆ ಎಂಬ ಕಾರಣಕ್ಕೆ ಅದನ್ನು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಭಾವುಕವಾಗಿ ಮಾತುಗಳನ್ನಾಡಿ ವಿದೇಶದ ಚಿಕಿತ್ಸೆಗೆ ತೆರಳಿದ್ದರು. ಕಳೆದ ವಾರವಷ್ಟೇ ಅಲ್ಲಿನ ವೈದ್ಯರು ಯಶಸ್ವಿ ಆಪರೇಷನ್ ನಡೆಸಿದ್ರು. ಕ್ಯಾನ್ಸರ್ ತಗುಲಿರುವ ಮೂತ್ರಕೋಶವನ್ನು ತೆಗೆದುಹಾಕಿರುವ ವೈದ್ಯರು ಕರುಳನ್ನು ಬಳಸಿ ಕೃತಕ ಮೂತ್ರಕೋಶವನ್ನು ಅಳವಡಿಸಿದ್ದಾರೆ.

SHIVANNA

ಇದು ಸಕ್ಸಸ್ ಆದ ಬಳಿಕ ವಿಡಿಯೋದಲ್ಲಿ ಶಿವಣ್ಣ ಹಾಗೂ ಪತ್ನಿ ಗೀತಾ ಅವರು ಅಭಿಮಾನಿಗಳ ಆಶೀರ್ವಾದದಿಂದ ಆಪರೇಷನ್​ ಯಶಸ್ವಿಯಾಗಿದೆ.. ತಾವು ಕ್ಯಾನ್ಸರ್ ಗೆದ್ದಿರೋದಾಗಿ ಖುಷಿಯಿಂದ ಹೇಳಿದ್ದರು. ಇದೀಗ ಶಿವಣ್ಣ ಆರೋಗ್ಯ ಸುಧಾರಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಕರುನಾಡಿಗೆ ವಾಪಸ್ಸಾಗಲಿದ್ದು, ಮತ್ತೆ ಶೂಟಿಂಗ್​ನಲ್ಲಿ ತೊಡಗಿಕೊಳ್ಳಲಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ