- ರಾಘವೇಂದ್ರ ಅಡಿಗ ಎಚ್ಚೆನ್.
ಮೈಸೂರು ಸಿನಿಮಾ ಸೊಸೈಟಿ' (ಎಂ.ಸಿ.ಎಸ್) ಆಯೋಜಿಸುತ್ತಿರುವ ಗಂಧದಗುಡಿ ಸಿನಿಹಬ್ಬ 2026' ಕಾರ್ಯಕ್ರಮದ ಲಾಂಛನ ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.
ಕಾರ್ಯಕ್ರಮ ಕುರಿತು ಮಾತನಾಡಿದ ಸೊಸೈಟಿ ಅಧ್ಯಕ್ಷರು ಕನ್ನಡದ ಪ್ರತಿಭಾವಂತ ಯುವ ಮನಸ್ಸುಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಯುತ್ತಿದೆ ಬೆಂಗಳೂರಿನ FKCCI ಸಭಾಂಗಣದಲ್ಲಿ ನವೆಂಬರ್ 21, 22ರಂದು ಈ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ 126 ಕಿರುಚಿತ್ರಗಳ ಸ್ವೀಕಾರ ಆಗಿದ್ದು ಅದರಲ್ಲಿ 30 ಕಿರುಚಿತ್ರಗಳನ್ನು ಜ್ಯೂರಿಗಳು ಆಯ್ಕೆ ಮಾಡಿದ್ದಾರೆ. ಆ ಪೈಕಿ 10 ಕಿರುಚಿತ್ರಗಳಿಗೆ ಪ್ರಶಸ್ತಿ ನೀಡಲಾಗುವುದು.
ಆಯ್ಕೆಯಾದ ಅತ್ಯುತ್ತಮ 10 ಕಿರುಚಿತ್ರಗಳಿಗೆ ಆಕರ್ಷಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕ ಸಂಘದ ಅಧ್ಯಕ್ಷ ಎನ್ ಆರ್ ಕೆ ವಿಶ್ವನಾಥ್ ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೆ ಶುಭ ಕೋರಿದರು.
ಚಲನಚಿತ್ರ ನಟಿ ತೇಜಸ್ವಿನಿ ಶರ್ಮಾ ಕಾರ್ಯಕ್ರಮದ ಲೋಗೋ ಲೋಕಾರ್ಪಣೆ ಮಾಡಿದರು.
ಮೈಸೂರು ಸಿನಿಮಾ ಸೊಸೈಟಿ' ಇದು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಿರುಚಿತ್ರೋತ್ಸವ ಆಯೋಜಿಸುತ್ತಿದೆ. ಇದಕ್ಕೆ ಮುನ್ನ ಎರಡು ದಿನಗಳ ಪ್ರತಿಷ್ಠಿತ ಪರಿದೃಶ್ಯ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವ ಮೈಸೂರಿನಲ್ಲಿ ಯಶಸ್ವಿಯಾಗಿ ನಡೆದಿದೆ.

ಬೆಂಗಳೂರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರರಂಗದ ಹಲವು ಗಣ್ಯರು ಹಾಗೂ 'ಮೈಸೂರು ಸಿನಿಮಾ ಸೊಸೈಟಿ'ಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಿರುಚಿತ್ರಗಳನ್ನು ಸಲ್ಲಿಸುವ ವಿಧಾನ:
ಕೆಳಗಿನ ಗೂಗಲ್ ಫಾರ್ಮ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ: https://forms.gle/LJqqw8EtQp3uLXDq6
ಅಥವಾ ಪೋಸ್ಟರ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ ನೇರವಾಗಿ ಅಪ್ಲೈ ಮಾಡಿ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
+91 9980596824 / 6366917256





