ಕೆಲವೊಮ್ಮೆ ಕೆಲವರು ನಮ್ಮ ಜೀವನದಲ್ಲಿ ನಮಗೆ ಅರಿವಿಲ್ಲದಂತೆಯೇ ಬಂದು ಬಿಡುವುದಲ್ಲದೇ ನಮಗೇ ಅರಿವಿಲ್ಲದಂತೆಯೇ ಅವರ ಪ್ರಭಾವಕ್ಕೆ ಒಳಗಾಗಿ ಒಂದು ರೀತಿಯಲ್ಲಿ ಅವರ ಬಗ್ಗೆ ಆತ್ಮೀಯತೆಯೋ ಇಲ್ಲವೇ ಪೂಜ್ಯ ಭಾವವೋ ಬೆಳೆದು ಧನ್ಯಾತಾಭಾವ ಬಂದು ಬಿಟ್ಟಿರುತ್ತದೆ. ಆದರೆ ಇದ್ದಕ್ಕಿದ್

ಇಷ್ಟೆಲ್ಲಾ ಸುಳಿವನ್ನು ಕೊಟ್ಟ ಮೇಲೆ ನೀವು ಖಂಡಿತವಾಗಿಯೂ ನೀವು ಅವರನ್ನು ಊಹಿಸಿಯೇ ಇರುತ್ತೀರಿ ಎನ್ನುವುದೇ ನನ್ನ ಭಾವನೆಯಾಗಿದೆ. ಪ್ರತೀ ದಿನ ಬೆಳಿಗ್ಗೆ ಪಟ ಪಟ ಅಂತ ಮಾತನಾಡುತ್ತಾ, ನಮ್ಮ ಇಡೀ ದಿನದ ಮನಸ್ಥಿತಿಯನ್ನು ಉಲ್ಲಾಸಿತವಾಗಿಡುತ್ತಿದ್ದ ಮಾತಿನ ಮಲ್ಲಿ ಸುಮಾರು 39 ವರ್ಷದ ಆರ್ .ಜೆ. ರಚನಾ (Radio Jockey Rachana) 22.02.2022 ಮಂಗಳವಾರ ಮಧ್ಯಾಹ್ನ ತೀವ್ರವಾದ ಹೃದಯಾಘಾತಕ್ಕೆ ಒಳಗಾಗಿ ಅಸುನೀಗುವ ಮೂಲಕ ಲಕ್ಷಾಂತರ ಕನ್ನಡ ಎಘ್. ಎಂ ಕೇಳುಗರ ಕಂಬನಿಗೆ ಕಾರಣರಾಗಿರುವುದು ನಿಜಕ್ಕೂ ದುಃಖಕರವಾದ ವಿಷಯವಾಗಿದೆ.

ಬೆಂಗಳೂರಿನ . ರಚನಾ ಭಾರದ್ವಾಜ್ 1983ರಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ಸಾಂಪ್ರದಾಯಕ ಕುಟುಂಬದಲ್ಲಿ ಜನಿಸಿದ ರಚನಾ ಚಿಕ್ಕಂದಿನಿಂದಲೂ ಆಟ ಪಾಠಗಳ ಜೊತೆ ಸಂಗೀತ ಮತ್ತು ನೃತ್ಯಗಳಲ್ಲೂ ಪ್ರವೀಣೆಯೇ. ಆಕೆ ಶಾಸ್ತ್ರೀಯ ಸಂಗೀತ ಪಾರಂಗತೆಯಾಗಿದ್ದು ಉತ್ತಮವಾದ ಹಾಡುಗಾರ್ತಿಯಗಿದ್ದಳು. ಭಾರತೀಯ ವಿದ್ಯಾ ಭವನದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದು ತಮ್ಮ ವಿದ್ಯಾಭ್ಯಾಸ ಮುಗಿದ ತಕ್ಷನ ಐದಾರು ಅಂಕಿಯ ಸಂಬಳ ಗಳಿಸುತ್ತಾ ವಾರಾಂತ್ಯದಲ್ಲಿ ಮೋಜು ಮಸ್ತಿ ಮಾಡುವ ಮನೋಸ್ಥಿತಿಯುಳ್ಳ ಯುವಕ ಯುವತಿಯರೇ ಹೆಚ್ಚಾಗಿರುವಾಗ, ತನ್ನ ವಿದ್ಯಾಭ್ಯಾಸ ಮುಗಿಸಿ ಕೈತುಂಬಾ ಸಂಬಳ ಪಡೆಯುವ ಎಲ್ಲಾ ಅರ್ಹತೆ ಇದ್ದರೂ, ಅವೆಲ್ಲವನ್ನು ಬಿಟ್ಟು ತನ್ನ ಇಚ್ಚೆಯಂತೆ ಆಕೆ ಆಯ್ಕೆ ಮಾಡಿಕೊಂಡಿದ್ದು ದೃಶ್ಯ ಮಾಧ್ಯಮ. ಬಹುತೇಕರಿಗೆ ತಿಳಿಯದಿರುವ ವಿಷಯವೇನೆಂದರೆ, ರಚನ ರೇಡಿಯೋ ಜಾಕಿಯಾಗುವ ಮುನ್ನಾ ಕೆಲವು ಆಂಗ್ಲಭಾಷೆಯ ಛಾನೆಲ್ಲಿನಲ್ಲಿ ನಿರೂಪಕಿಯಾಗಿ ನಂತರ ತೊಂಭತ್ತರ ದಶಕದ ಅಂತ್ಯದಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಎಫ್.ಎಂ ಛಾನೆಲ್ಲುಗಳು ಆರಂಭದಲ್ಲಿ ಹಿಂದಿ ಮತ್ತ ಇಂಗ್ಲೀಷ್ ಭಾಷೆಗಷ್ಟೇ ಸೀಮಿತವಾಗಿದ್ದು ನಂತರ ಕನ್ನಡದಲ್ಲೂ ಕಾರ್ಯಕ್ರಮಗಳನ್ನು ಆರಂಭಿಸಲು ನಿರ್ಧರಿಸಿದಾಗ ಅರಳು ಹುರಿದಂತೆ ಪಟ ಪಟನೇ ಅತ್ಯಂತ ಸ್ಪಷ್ಟವಾದ ಕನ್ನಡವನ್ನು ಮಾತನಾಡ ಬಲ್ಲವಳಾಗಿದ್ದ ರಚನಾ ರೇಡಿಯೋ ಜಾಕಿಯಾಗಿ ರೇಡಿಯೋ ಸಿಟಿ ಸೇರಿಕೊಳ್ಳುತ್ತಾಳೆ.

ರೇಡಿಯೋ ಸಿಟಿ ಸೇರಿ ಕೊಂಡ ಕೆಲವೇ ದಿನಗಳಲ್ಲಿಯೇ ತಮ್ಮದೇ ಆದ ವಿಶೇಷ ಶೈಲಿಯ ಮಾತಿನಿಂದ ಅಪಾರ ಕೇಳುಗರನ್ನು ಸೆಳೆದುಕೊಳ್ಳುವುದರಲ್ಲಿ ಸಫಲರಾಗಿದ್ದ ರಚನಾ, ಆಕೆಯ ಕಾರ್ಯಕ್ರಮಗಳನ್ನು ಕೇಳಲು ಕೇಳುಗರ ವರ್ಗವೇ ಸೃಷ್ಟಿಯಾಗಿತ್ತು. ಆಕೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟ ನಟಿಯರೇ ತುದಿಗಾಲಲ್ಲಿ ನಿಲ್ಲುತ್ತಿದ್ದರು ಎಂದರೆ ಆಕೆಯ ಕಾರ್ಯಕ್ರಮದ ಹಿರಿಮೆ ಗರಿಮೆಯ ಅರ್ಥವಾಗುತ್ತದೆ.





