• ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ: “S/O ಮುತ್ತಣ್ಣ”
ನಿರ್ಮಾಣ: ಪುರಾತನ ಫಿಲಂಸ್
ನಿರ್ದೇಶನ: , ಶ್ರೀಕಾಂತ್ ಹುಣಸೂರು
ತಾರಾಂಗಣ: ಪ್ರಣಂ ದೇವರಾಜ್, ಖುಷಿ ರವಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ, ಸಂದೀಪ ಎಂ ಮುಂತಾದವರು
ರೇಟಿಂಗ್:

ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ “S/O ಮುತ್ತಣ್ಣ”  ಚಿತ್ರ ಈ ವಾರ (ಸೆ.12) ರಾಜ್ಯಾದ್ಯಂತ ಬಿಡುಗಡೆ ಆಗಿದೆ.  ಸಚಿನ್ ಬಸ್ರೂರ್ ಸಂಗೀತ ನಿರ್ದೇಶನದ ಚಿತ್ರದಲ್ಲಿ  ಪ್ರಣಂ ದೇವರಾಜ್ ಮತ್ತು ರಂಗಾಯಣ ರಘು ಅವರ ಕಾಂಬಿನೇಶನ್ ವಿಶೇಷ.. ನಿರ್ಮಾಣ ಸಂಸ್ಥೆಗೆ ಎಸ್ ಅರ್ ಕೆ ಫಿಲಂಸ್ ಸಾಥ್ ನೀಡಿದೆ‌.  . ಪ್ರಣಂ ದೇವರಾಜ್ ಅವರಿಗೆ ನಾಯಕಿಯಾಗಿ “ದಿಯಾ” ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ, ಸಂದೀಪ ಎಂ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತವಿರುವ  ‘s/o ಮುತ್ತಣ್ಣ’ ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಚಿತ್ರಕ್ಕಿದೆ… ಹಾಗಾದರೆ ಚಿತ್ರ ಹೇಗಿದೆ ಇಲ್ಲಿ ಓದಿ..

son

ಮುತ್ತಣ್ಣ (ರಂಗಾಯಣ ರಘು) ಒಬ್ಬ  ನಿವೃತ್ತ  ಮಿಲಿಟರಿ ಆಫೀಸರ್. ಅವನ ಮಗ ಶಿವು (ಪ್ರಣಂ ದೇವರಾಜ್) ಅಂದರೆ ಎಲ್ಲಿಲ್ಲದ ಪ್ರೀತಿ. ಅಪ್ಪ ಮಕ್ಕಳ ಖುಷಿ, ಸಂಭ್ರಮಕ್ಕೆ ಪಾರವೇ ಇಲ್ಲ. ಪ್ರೆಂಡ್ಸ್ ಥರ ಇರೋ ಅಪ್ಪ ಮಗನ ನಡುವೆ ಡಾಕ್ಟರ್  ಸಾಕ್ಷಿ (ಖುಷಿ ರವಿ) ಯ ಎಂಟ್ರಿ ಆಗುತ್ತೆ.  ಹೀರೋಗೆ ಇಲ್ಲಿ ನಾಯಕಿಯನ್ನು ನೋಡಿದ ತಕ್ಷಣ ಲವ್ ಆಗುತ್ತೆ. ಅದು ಮದ್ವೆ‌ ಹಂತಕ್ಕೂ ಹೋಗುತ್ತೆ. ಅಷ್ಟರೊಳಗೆ  ಫ್ರೆಂಡ್ಸ್ ಥರ ಇರುವ ಅಪ್ಪ ಮಗನ‌ ಮಧ್ಯೆ ಸಣ್ಣ  ಬಿರುಕು ಬರುತ್ತೆ. ಮುಂದೆ…? ಅದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ನೀವು ಚಿತ್ರಮಂದಿರದಲ್ಲಿ  S/O ಮುತ್ತಣ್ಣ ನೋಡಬೇಕು. ಚಿತ್ರದಲ್ಲಿ ಅಲ್ಲಲ್ಲಿ ಸಣ್ಣ ಟ್ವಿಸ್ಟ್ ಗಳಿವೆ.  ಸಿನಿಮಾದುದ್ದಕ್ಕೂ ಅಪ್ಪ ಮಗ ಹೊರತು ಬೇರೇನೂ ಇಲ್ಲ. ಹಾಗಂತ ಸಿನಿಮಾ ಬೇಸರ ತರಿಸುತ್ತದಾ ಎಂಡರೆ ಇಲ್ಲ ಎನ್ನಬಹುದು. ಕೆಲವು ಕಡೆ ಅನಗತ್ಯ ದೃಶ್ಯಗಳಿದ್ದರೂ ಕೆಲವೊಂದು ಭಾವನಾತ್ಮಕ ಸನ್ನಿವೇಶಗಳು ಮನಸ್ಸನ್ನು ಕಾಡುತ್ತದೆ.
ಚಿತ್ರದ ಬಹುತೇಕ ಕೇವಲ ತಂದೆ-ಮಗ-ಸಾಕ್ಷಿ ಈ ಮೂರೇ ಪಾತ್ರಗಳು ಆವರಿಸಿಕೊಂಡಿದೆ. ಮೊದಲರ್ಧ ನೋಡುವಾಗ ಕಥೆ ನಿಧಾನಗತಿ ಎನಿಸುತ್ತದೆ. ಆದರೆ ದ್ವಿತೀಯಾರ್ಧದ ನಂತರ ಕಥೆಗೆ ಸ್ವಲ್ಪ ವೇಗ ಸಿಕ್ಕಿದೆ. ಚಿತ್ರಕಥೆ ಇನ್ನಷ್ಟು ಬಿಗಿಯಾಗಿದ್ದರೆ ಚಿತ್ರ ಇನ್ನಷ್ಟು ಆಕರ್ಷಣೀಯವಾಗಿ ಬರುತ್ತಿತ್ತು..
ಪಾತ್ರದ ವಿಷಯಕ್ಕೆ ಬಂದರೆ ರಂಗಾಯಣ ರಘು ಅವರೇ ಇಡೀ ಚಿತ್ರವನ್ನು ಆವರಿಸಿದ್ದಾರೆ.. ನಕ್ಕು ನಗಿಸುವುದರೊಡನೆ ಕೆಲವೊಮ್ಮೆ ಅಳಿಸುತ್ತಾರೆ. ನಾಯಕ ಪ್ರಣಮ್ ದೇವರಾಜ್ ಅಭಿನಯದಲ್ಲಿ ಮತ್ತಷ್ಟು ಪಳಗಬೇಕಿದೆ. ಭಾವನಾತ್ಮಕ ದೃಶ್ಯ ಸೇರಿದಂತೆ ಕೆಲವೊಂದೆಡೆಗಳಲ್ಲಿ ಅವರ ಅಭಿನಯ ತುಸು ಕುಂದಿದೆ. ನಾಯಕಿ ಖುಷಿ ರವಿ ತೆರೆ ಮೇಲೆ ಸುಂದರವಾಗಿ ಕಾಣಿಸುತ್ತಾರೆ. ಸುಚೀಂದ್ರ ಪ್ರಸಾರ್, ಗಿರಿ ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಸಚಿನ್ ಬಸ್ರೂರು ಅವರ ಸಂಗೀತದಲ್ಲಿ ಮತ್ತಷ್ಟು ಧಮ್ ನಿರೀಕ್ಷೆ ಇತ್ತು.. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣದಲ್ಲಿ ವರಣಾಸಿಯ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಲಬಹುದಾಗಿದೆ. ಒಟ್ಟಾರೆ  “S/O ಮುತ್ತಣ್ಣ”  ಒಮ್ಮೆ ನೋಡಿ ಬರಬಹುದಾದ ಚಿತ್ರ ಎನ್ನಲು ತಕರಾರಿಲ್ಲ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ