ಸರಸ್ವತಿ*

ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ, ವಿನಯ್ ರಾಜ್ ಕುಮಾರ್ ನಟನೆಯ ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ಒಂದು ಸರಳ ಪ್ರೇಮ ಕಥೆ ಒಟಿಟಿ ಎಂಟ್ರಿಗೆ ಸಜ್ಜಾಗಿದೆ. ಇದೇ ತಿಂಗಳ 21ರಿಂದ zee5ನಲ್ಲಿ ಒಂದು ಸರಳ ಪ್ರೇಮ ಕಥೆ ಸ್ಟ್ರೀಮಿಂಗ್ ಆಗಲಿದೆ.

ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್ ಒಳಗೊಂಡ ಈ ಚಿತ್ರ ಪ್ರೇಕ್ಷಕರಿಂದ ಭಾರೀ‌ ಮೆಚ್ಚುಗೆ ಪಡೆದಿತ್ತು. ನಾಯಕ ವಿನಯ್, ನಾಯಕಿಯರಾದ ಸ್ವಾತಿಷ್ಠ, ಮಲ್ಲಿಕಾ ಅಮೋಘ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್‌ನ್ನು ಸಿನಿರಸಿಕರು ಸಖತ್ ಇಷ್ಟಪಟ್ಟಿದ್ದರು. ರಾಘವೇಂದ್ರ ರಾಜ್‌ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ಸಿನಿಮಾದಲ್ಲಿದ್ದಾರೆ.

ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ, ಕಾರ್ತಿಕ್ ಅವರ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ರಾಮ್ ಮೂವೀಸ್ ಬ್ಯಾನರ್ ನಡಿ ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ.

ಕಥಾನಾಯಕ ಅತಿಶಯ್‌ಗೆ (ವಿನಯ್‌) ಜೀವನದಲ್ಲಿ ಇರುವುದು ಎರಡೇ ಕನಸು. ಒಂದು, ದೊಡ್ಡ ಸಂಗೀತ ನಿರ್ದೇಶಕ ಆಗಬೇಕು ಎಂಬುದು. ಇನ್ನೊಂದು, ತನ್ನ ಹೃದಯ ಒಪ್ಪುವ ಹುಡುಗಿಯನ್ನು ಮದುವೆ ಆಗಬೇಕು ಎಂಬುದು. ಇವೆರಡಲ್ಲೂ ಆತ ಯಶಸ್ಸು ಸಾಧಿಸುತ್ತಾನಾ ಎಂಬುದೇ ಕಥೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ