ನೀಳ್ಗಥೆ ಶೇಖರಗೌಡ ವೀ..

ತುಂಬು ಹರೆಯದಲ್ಲಿ ರೂಪ್ಲಿ ತನಗರಿವಿಲ್ಲದೆ ಆಂಗ್ಲ ಸಾಹೇಬನಿಗೆ ಮನಸೋತಳು. ನಂತರ ಅವಳ ಮಗು ವಿದೇಶದಲ್ಲಿ ಬೆಳೆಯುವಂತಾಯಿತು. ಮುಂದೆ ಮಗನಿಗೆ ತಾಯಿಯ, ಜನ್ಮ ಭೂಮಿಯ ಸಾಂಗತ್ಯ ಸಿಗುವಂತಾಯಿತೇ.....?

ಜೋನ್ಸ್ ತನ್ನ ಜೀವನ ಸಂಗಾತಿ ಲಿಲ್ಲಿಯ ಜೊತೆಗೆ ಲಂಡನ್‌ ನಿಂದ ಪುಣ್ಯ ಭೂಮಿ ಭಾರತ ದೇಶಕ್ಕೆ ಬಂದಿದ್ದು ಇದೇ ಮೊದಲು. 55ರ ಹರೆಯ ಜೋನ್ಸ್ ಗಾದರೆ, ಲಿಲ್ಲಿಗೆ 53. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂತಲ ಸ್ಪರ್ಶಿಸಿದಾಗ, ಭೂದೇವಿಗೆ ಹಣೆಹಚ್ಚಿ ನಮಸ್ಕರಿಸಿ ಧನ್ಯತಾಭಾವ ವ್ಯಕ್ತಪಡಿಸಿದ್ದ.

ಕರ್ನಾಟಕದ ಐತಿಹಾಸಿಕ ಸ್ಥಳಗಳಲ್ಲಿ ಹದಿನೈದು ದಿನಗಳ ಸುತ್ತಾಟವಿತ್ತು. ಬೆಂಗಳೂರಿನ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ ವಿದೇಶಿ ದಂಪತಿಗಳು ಮರುದಿನ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಕರ್ನಾಟಕದ ಉತ್ತರ ದಿಕ್ಕಿನತ್ತ ಪ್ರಯಾಣ ಆರಂಭಿಸಿದ್ದರು. ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸುಗೂರಿಗೆ ಬಂದಾಗ ಮಧ್ಯಾಹ್ನ ಹನ್ನೆರಡೂವರೆ. ಸತತ ಪ್ರಯಾಣದಿಂದ ತುಸು ಆಯಾಸವಾಗಿದ್ದರೂ ಜೋನ್ಸ್ ಎದೆಯೊಳಗೆ ಅದೇನೋ ತವಕ, ತಳಮಳ, ತಲ್ಲಣ, ಚಡಪಡಿಕೆ.

`ಮಯೂರ ರೆಸಿಡೆನ್ಸಿ'ಯಲ್ಲಿ ರೂಮೊಂದನ್ನು ಪಡೆದುಕೊಂಡು ಒಂದು ತಾಸು ವಿಶ್ರಾಂತಿ ಪಡೆದರು. ನಂತರ ಊಟ ಮುಗಿಸಿ ಹೋಟೆಲ್ ‌ಮಾಲೀಕರೊಂದಿಗೆ ಮಾತಾಡಿ ಜಲದುರ್ಗಕ್ಕೆ ಹೋಗುವ ದಾರಿ ಕೇಳಿಕೊಂಡ ಜೋನ್ಸ್, ಜಲದುರ್ಗದ ಬಗ್ಗೆ ತಿಳಿದಿರುವ ಒಬ್ಬ ಹುಡುಗನನ್ನು ತಮ್ಮೊಂದಿಗೆ ಕಳುಹಿಸಿಕೊಡುವಂತೆ ಕೇಳಿಕೊಂಡು, ಅವರು ಕಳುಹಿಸಿದ ಹುಡುಗನನ್ನು ತಮ್ಮೊಂದಿಗೆ ಕರೆದುಕೊಂಡು ಪ್ರಯಾಣ ಶುರು ಮಾಡಿದರು.

ಕಾರು ಲಿಂಗಸುಗೂರು ಪಟ್ಟಣದಿಂದ ಜಲದುರ್ಗದ ಹಾದಿ ಹಿಡಿಯಿತು. ಟ್ಯಾಕ್ಸಿಯ ಚಾಲಕ ತುಂಬಾ ಸಹಕಾರಿಯಾಗಿದ್ದ. ಅಗಲವಾದ ರಸ್ತೆಯಿಂದ ಕಿರಿದಾದ ರಾಜ್ಯ ಹೆದ್ದಾರಿಯಲ್ಲಿ ಪಯಣ ಸಾಗಿತು. ರಸ್ತೆ ಪಕ್ಕದ ಸಣ್ಣಪುಟ್ಟ ಗಿಡಗಂಟಿಗಳು, ಅಲ್ಲಲ್ಲಿ ಡಾಂಬರ್‌ ಕಿತ್ತು ಹೋಗಿ ತಗ್ಗು ದಿಣ್ಣೆಗಳನ್ನು ಸೃಷ್ಟಿಸಿದ್ದ ಕಿರಿದಾದ ರಸ್ತೆಯ ಚಿತ್ರವಿಚಿತ್ರ ತಿರುವುಗಳನ್ನು ಕಣ್ತುಂಬಿಕೊಂಡ ದಂಪತಿಗಳು ಪರಸ್ಪರ ಅಚ್ಚರಿ ವ್ಯಕ್ತಪಡಿಸತೊಡಗಿದರು.

ಜಲದುರ್ಗ ಸಮೀಪಿಸುತ್ತಿದ್ದಂತೆ ಶುರುವಾದ ಲಘು ಅರಣ್ಯ ಪ್ರದೇಶ ತಮ್ಮನ್ನು ಸ್ವಾಗತಿಸುತ್ತಿರುವ ಭಾವ ಜೋನ್ಸ್ ನ ಎದೆಯಂಗಳ ಹೊಕ್ಕು ಜೀವನೋತ್ಸಾಹ ಚಿಗುರಿಸಿದ ಅನುಭವ.

``ಲಿಲ್ಲಿ, ಈ ಥಾರ್ನೀ ಪ್ಲಾಂಟ್ಸ್ ನೋಡು, ಚಿಕ್ಕಚಿಕ್ಕವಿದ್ದರೂ ತುಂಬಾ ಆಕರ್ಷಣೀಯಾಗಿವೆಯಲ್ಲವೇ....? ಇದರ ಎಲೆಗಳು ತುಂಬಾ ಚಿಕ್ಕವು. ಏಕೆ ಗೊತ್ತಾ....?'' ಎಂದ ಜೋನ್ಸ್ ಕುತೂಹಲದಿಂದ ಕೇಳಿದ.

``ನಾನೇನು ಬೊಟಾನಿಕಲ್ ಸೈಂಟಿಸ್ಟಾ....?'' ಎಂದು ಲಿಲ್ಲಿ ಕತ್ತು ಕೊಂಕಿಸಿ ವೈಯಾರದಿಂದ ಉಲಿದಳು.

o-pinjra-khol-story1

``ಅಷ್ಟೂ ಗೊತ್ತಾಗ್ಲಿಲ್ವೇ.....? ಇಲ್ಲಿ ಮಳೆ ತುಂಬಾ ಕಡಿಮೆ. ಸಿಕ್ಕಷ್ಟೇ ನೀರನ್ನು ಬಳಸಿಕೊಂಡು ಈ ಗಿಡಮರಗಳು ಬದುಕಿಕೊಂಡಿವೆ. ಅದಕ್ಕೇ ಇವುಗಳ ಲೀಫ್‌ ಸ್ಟ್ರಕ್ಚರ್‌ ಹೀಗೆ ಚಿಕ್ಕಚಿಕ್ಕದಾಗಿದೆ,'' ಎಂದು ಸಮಾಧಾನದಿಂದ ಉತ್ತರಿಸಿದ ಜೋನ್ಸ್.

``ಹೌದಾ...? ನೀನೆಷ್ಟಾದರೂ ಬೊಟಾನಿಕ್‌ ಸೈಂಟಿಸ್ಟ್ ಅಲ್ವಾ....'' ಎಂದು ಲಿಲ್ಲಿ ನಗೆ ಮಲ್ಲಿಗೆ ಪ್ರದರ್ಶಿಸಿದರು.

ಅಷ್ಟರಲ್ಲಿ ನೀರಿನ ಭೋರ್ಗರೆತದ ಶಬ್ದ. ಕಿರಿದಾದ ದಾರಿಯಲ್ಲಿ ತಿರುವುಗಳನ್ನು ದಾಟಿಕೊಂಡು ತುಸು ದೂರ ಬರುತ್ತಿದ್ದಂತೆ ಕೃಷ್ಣೆಗೆ ಅಡ್ಡವಾಗಿ ಕಟ್ಟಿದ್ದ ಸೇತುವೆ ಎದುರಾಯಿತು. ಮೈದುಂಬಿಕೊಂಡು ಭೋರ್ಗರೆಯುತ್ತಿದ್ದಳು ಕೃಷ್ಣೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ