ಕಥೆ - ಅರವಿಂದ್ಜೋಷಿ

ಬಾಲ್ಯದ ಗೆಳತಿಯರಾದ ರಶ್ಮಿ ಮತ್ತು ದೀಪಿಕಾ ಬಹಳ ಆದರ್ಶ ಸ್ನೇಹ ಹೊಂದಿದ್ದರು. ಮದುವೆಯಾದ ನಂತರ ಬೇರೆ ಬೇರೆ ಊರಿನಲ್ಲಿದ್ದರು, ಮುಂದೇ ಒಂದೇ ಊರಿನಲ್ಲಿ ಇರುವಂತಾಯಿತು. ಈ ಮಧ್ಯೆ ತನ್ನ ಬರ್ತ್‌ ಡೇ ಸಮಾರಂಭದಲ್ಲಿ ಚಿನ್ನದ ಸರ ಕಳೆದುಕೊಂಡ ರಶ್ಮಿ, ಅಲ್ಲಿಗೆ ಬಂದಿದ್ದ ದೀಪಿಕಾ ಅದನ್ನು ಕದ್ದಿರಬಹುದೇ ಎಂದು ಅನುಮಾನಿಸಿದಳು. ಮುಂದೆ ಏನಾಯಿತು......?

``ದೀಪೂ ಮಿಸ್‌ ಮಾಡ್ಕೊಬೇಡ ಕಣೇ, ಖಂಡಿತಾ ಬಾ.... ಐ ಆ್ಯಮ್ ವೇಟಿಂಗ್‌ ಈಗರ್ಲಿ......'' ಎಂದು ಕಳೆದ ಒಂದು ವಾರದಿಂದಲೂ ದೀಪಿಕಾಳ ಬಾಲ್ಯ ಸ್ನೇಹಿತೆ ರಶ್ಮಿ, ದಿನಕ್ಕೆ ಎರಡು ಮೂರು ಬಾರಿಯಾದರೂ ಫೋನ್‌ ಮೂಲಕ ಅವಳಿಗೆ ತಿಳಿಸುತ್ತಲೇ ಇದ್ದಳು.

ಪ್ರತಿ ಬಾರಿ ಅವಳಿಗೆ ಉತ್ತರಿಸುವಾಗೆಲ್ಲ ದೀಪಿಕಾ ಅಷ್ಟೇ ಆತ್ಮೀಯವಾಗಿ, ``ಮಿಸ್‌ ಮಾಡಲ್ಲಾ ಕಣೇ.... ಅಟ್‌ಎನಿ ಕಾಸ್ಟ್ ಬಂದೇ ಬರ್ತೀನಿ....'' ಎಂದು ಹೇಳುತ್ತಿದ್ದಳು.

ರಶ್ಮಿ  ನಗರದ ಪ್ರತಿಷ್ಠತ ಉದ್ಯಮಿ ವಾಮನ ರಾವ್ ‌ರ ಏಕೈಕ ಪುತ್ರಿ. ದೀಪಿಕಾ ಮಧ್ಯಮ ವರ್ಗಕ್ಕೆ ಸೇರಿದ ಸರ್ಕಾರಿ ನೌಕರ ಗೋಪಾಲಯ್ಯನ ಮಗಳು.

ರಶ್ಮಿಯ ಬಂಗಲೆಯ ಹಿಂಭಾಗದ ರಸ್ತೆಯ ಎರಡನೇ ತಿರುವಿನಲ್ಲಿ ದೀಪಿಕಾಳ ಮನೆ ಇತ್ತು ಅದು ಪುಟ್ಟದಾದರೂ ತುಂಬಾ ಅಚ್ಚುಕಟ್ಟಾಗಿತ್ತು. ಅಲ್ಲಿ ಅವಳು ತನ್ನ ತಾಯಿ, ತಂದೆ ಹಾಗೂ ಅಣ್ಣನೊಂದಿಗೆ ವಾಸಿಸುತ್ತಿದ್ದಳು. ಸಮವಯಸ್ಕರಾದ ರಶ್ಮಿ ಮತ್ತು ದೀಪಿಕಾ ಬಾಲ್ಯದಿಂದ ಎಂದರೆ ಮೂರನೇ ತರಗತಿಯಿಂದಲೂ ಪಕ್ಕಾ ಸ್ನೇಹಿತೆಯಾಗಿದ್ದರು. ಹಬ್ಬ ಹರಿದಿನಗಳಲ್ಲಿ ಪರಸ್ಪರರ ಮನೆಗೆ ಹೋಗಿ ಯಾವ ಹಮ್ಮು ಬಿಮ್ಮು ಇಲ್ಲದೆ ಸಂಭ್ರಮಿಸುತ್ತಿದ್ದರು.

ಆಗೆಲ್ಲ ಶ್ರೀಮಂತಿಕೆಯ ಹಿನ್ನೆಲೆಯಲ್ಲಿ ಬೆಳೆದಿದ್ದ ರಶ್ಮಿ, ಅಂತಸ್ತಿಗೆ ತಕ್ಕಂತೆ ಜರತಾರಿ ಲಂಗ, ಒಂದೆರಡು ಚಿನ್ನದ ಒಡವೆ ಧರಿಸಿದರೆ, ದೀಪಿಕಾ ತನ್ನ ಮನೆಯವರ ಆರ್ಥಿಕ ಮಟ್ಟಕ್ಕೆ ತಕ್ಕಂತೆ ಸಾಧಾರಣ ಬಟ್ಟೆ ಧರಿಸಿ ತೃಪ್ತಿ ಪಡುತ್ತಿದ್ದಳು. ದಿನ ಕಳೆದಂತೆ ಗೆಳತಿಯರಿಬ್ಬರೂ ಬೆಳೆಯುತ್ತಾ ಹೋದಂತೆ ಅದೇಕೋ ರಶ್ಮಿ ಕೊಂಚ ಅಹಂನತ್ತ ವಾಲಿದ್ದರೆ, ದೀಪಿಕಾ ಮಾತ್ರ ಒಂದಿನಿತೂ ಬದಲಾಗಿರಲಿಲ್ಲ. ಕಾಲೇಜು ವ್ಯಾಸಂಗ ಪೂರೈಸಿದ ಇಬ್ಬರೂ ಉತ್ತಮ ಅಂಕಗಳೊಂದಿಗೆ ಡಿಗ್ರಿ ಪದವಿ ಪಡೆದಿದ್ದರು. ತನ್ನ ಮನೆಯ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೀಪಿಕಾ ಮುಂದೆ ಓದುವುದನ್ನು ನಿಲ್ಲಿಸಿದ್ದಳು. ಆದರೆ ರಶ್ಮಿ ತನ್ನ ಓದು ಮುಂದುವರಿಸಿ, ಸ್ನಾತಕೋತ್ತರ ಪದವಿ ಪಡೆದಳು. ಈ ನಡುವೆ ದೀಪಿಕಾಳಿಗೆ ಕಂಕಣ ಬಲ ಕೂಡಿ ಬಂದಿದ್ದರಿಂದ ಅವರ ಪೋಷಕರು ನೋಡಿ ಗೊತ್ತುಪಡಿಸಿದ ಶ್ರೀಕಾಂತ್‌ ನನ್ನು ಮದುವೆ ಆಗಿದ್ದಳು. ಶ್ರೀಕಾಂತ್‌ ರಾಷ್ಟ್ರೀಕೃತ ಬ್ಯಾಂಕ್‌ ನಲ್ಲಿ ಉದ್ಯೋಗಿಯಾಗಿದ್ದು, ಅವನು ದೀಪಿಕಾಳ ಗುಣ ಸ್ವಭಾವಕ್ಕೆ ತಕ್ಕವನಾಗಿದ್ದ. ಮದುವೆ ಆಗಿ ಎರಡು ಮೂರು ತಿಂಗಳ ನಂತರ ಶ್ರೀಕಾಂತ್‌ ಗೆ ಉತ್ತರ ಭಾರತದ ಬಿಹಾರ್‌ ರಾಜ್ಯದ ಒಂದು ಜಿಲ್ಲೆಗೆ ವರ್ಗವಾಗಿತ್ತು. ಹೀಗೆ ಇವರು ಅಲ್ಲಿಗೆ ಹೋಗಿ ಹತ್ತು ವರ್ಷಗಳೇ ಕಳೆದು ಹೋಗಿದ್ದವು.

ಇಷ್ಟಾದರೂ ದೀಪಿಕಾ ತನ್ನ ಬಾಲ್ಯದ ಗೆಳತಿ ರಶ್ಮಿಯೊಂದಿಗೆ ಸಂಪರ್ಕದಲ್ಲಿದ್ದು ಸಮಯ ದೊರೆತಾಗೆಲ್ಲ ಪರಸ್ಪರ ಕಷ್ಟ ಸುಖ ವಿಚಾರಿಸಿಕೊಂಡು ತೃಪ್ತಿಪಡುತ್ತಿದ್ದರು. ಈ ನಡುವೆ ರಶ್ಮಿಯೂ ಸಹ ಸಂಬಂಧಿಕರ ಪೈಕಿ ಕೇಶವ್ ರಾವ್ ‌ನನ್ನು ವರಿಸಿ ಮದುವೆ ಆಗಿದ್ದಳು. ಕೇಶವ್ ರಾವ್ ‌ಶ್ರೀಮಂತಿಕೆಯಲ್ಲಿ ರಶ್ಮಿಗಿಂತ ಎರಡು ತೂಕ ಹೆಚ್ಚಿಗೇ ಇದ್ದ. ಇದರಿಂದಾಗಿ ಮೊದಲೇ ಅಹಂನತ್ತ ವಾಲಿದ್ದ ರಶ್ಮಿ ಈಗ ಇನ್ನಷ್ಟು ಜಂಭಪಡುವಂತಾಗಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ