ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ ಜನಪ್ರತಿನಿಧಿಗಳು ಕುಳಿತು ರಾಜ್ಯಭಾರ ನಡೆಸಿದರೆ, ಅವರು ನಡೆಸುತ್ತಿರುವ ಆಡಳಿತ ಸರಿ ಇದೆಯೇ ಎಂದು ನೋಡಿಕೊಳ್ಳುವ ಸಲುವಾಗಿಯೇ ಕೇಂದ್ರಸರ್ಕಾರದಿಂದ ನಿಯೋಜಿತವಾಗಿರುವ ರಾಜ್ಯಪಾಲರು  ಈ ಶಕ್ತಿಕೇಂದ್ರದಿಂದ ಕೂಗಳತೆಯೇ ದೂರದಲ್ಲೇ ಇರುವ ರಾಜಭವನದಲ್ಲಿ ವಾಸಿಸುತ್ತಿದ್ದಾರೆ. ಇಂತಹ ರಾಜಭವನ ನಿರ್ಮಾಣದ ಹಿಂದೆಯೂ ರೋಚಕವಾದ ಇತಿಹಾಸವಿದ್ದು ಆದರ ಸಂಪೂರ್ಣ ಚರಿತ್ರೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.  ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

1799 ರಲ್ಲಿ ಟಿಪ್ಪು ಸುಲ್ತಾನನ ಆಳ್ವಿಕೆ ಕೊನೆಗೊಂಡ ನಂತರ ಕೆಲವು ವರ್ಷಗಳ ಕಾಲ ಶ್ರೀರಂಗಪಟ್ಟಣದಲ್ಲಿಯೇ ನೆಲೆಗೊಂಡಿದ್ದ ಬ್ರಿಟಿಷ್ ಪಡೆಗಳು ನಂತರ ಅವರಿಗೆ ಕೊಡುವ ಯುದ್ದದ ಭತ್ಯೆ ನಿಂತು ಹೋದ ಕಾರಣ ಕ್ಷಿಪ್ರವಾಗಿ ಸಿಪಾಯಿದಂಗೆ ನಡೆಸಿದ ಕಾರಣ, ಶ್ರಿರಂಗ ಪಟ್ಟಣ ನಮಗೆ ಸುರಕ್ಷಿತಸ್ಥಳವಲ್ಲ ಎಂದು ನಿರ್ಧರಿಸಿದ ಬ್ರಿಟೀಷರು, ಬೆಂಗಳೂರಿನ ಆಹ್ಲಾದಕರ ವಾತಾವರಣದಿಂದ ಆಕರ್ಷಿತಗೊಂಡು ತಮ್ಮ ಆಡಳಿತವನ್ನು ಬೆಂಗಳೂರಿಗೆ ವರ್ಗಾಯಿಸಿದ್ದಲ್ಲದೇ, ಕೆಂಪೇಗೌಡರು ಕಟ್ಟಿದ್ದ ಹಳೇ ಬೆಂಗಳೂರನ್ನು ಹೊರತು ಪಡಿಸಿ, ಹಲಸೂರು ಕೆರೆಯ ಆಸುಪಾಸಿನಲ್ಲಿ ತಮ್ಮ ಮಿಲಿಟರಿ ಕಂಟೋನ್ಮೆಂಟ್ ಸ್ಥಾಪಸಿದ್ದಲ್ಲದೇ, ಮದ್ರಾಸಿನಿಂದ ಬೆಂಗಳೂರಿಗೆ ರೈಲ್ವೇ ಸಂಪರ್ಕವನ್ನು ಮೈಸೂರು ಮಹಾರಾಜರ ನೆರವಿನಿಂದ ಮಾಡಿಸಿ ಈಗಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರಿಚ್ಮಂಡ್ ರಸ್ತೆ ಸುತ್ತಮುತ್ತಲೂ ಬ್ರಿಟಿಷರ ಮಿಲಿಟರಿ ನೆಲೆಯಾಗಿ ಹೆಚ್ಚಿನ ಸಂಖ್ಯೆಯ ಯುರೋಪಿಯನ್ನರು ಮತ್ತು ಆಂಗ್ಲೋ-ಇಂಡಿಯನ್ನರು ಮತ್ತು ಮಿಷನರಿಗಳ ನೆಲೆಯಾಗಿದ್ದಲ್ಲದೇ, ಅವರ ಮೋಜು ಮಸ್ತಿಗೆಂದು ವಿವಿಧ ರೀತಿಯ ಕ್ಲಬ್ಬುಗಳು ಆರಂಭವಾಗಿ ಕೇವಲ ಅವರಿಗಷ್ಟೇ ಪ್ರವೇಶವಿತ್ತು.

ಇಂತಹ ಸಂದರ್ಭದಲ್ಲಿ ದೂರದ ಇರಾನ್ ನಿಂದ ಕುದುರೆ ವ್ಯಾಪಾರಕ್ಕೆಂದು ಸಮುದ್ರ ಮೂಲಕ ಕರ್ನಾಟಕದ ಕರಾವಳಿ ಪ್ರಾಂತ್ಯಕ್ಕೆ ಬಂದು ನಂತರ ಕೊಡಗು ಮತ್ತು ಮೈಸೂರಿನ ಮೂಲಕ ಬೆಂಗಳೂರಿಗೆ ಬಂದ ಅಗಾ ಅಲಿ ಆಸ್ಕರ್ ಇಲ್ಲಿನ ಹವಾಮಾನಕ್ಕೆ ಮನಸೋತು ಇಲ್ಲಿಯೇ ನೆಲೆಸಿದ್ದಲ್ಲದೇ, ಕೆಲವೇ ಸಮಯದಲ್ಲಿ ಮಾರ್ಕ್ ಕಬ್ಬನ್ ಆದಿಯಾಗಿ ಅನೇಕ ಬ್ರಿಟೀಷ್ ಅಧಿಕಾರಿಗಳ ಗೆಳೆತನ ಬೆಳೆಸಿಕೊಂಡು ಅವರೊಂದಿಗೆ ರಾತ್ರಿಯ ಕ್ಲಬ್ಬುಗಳಲ್ಲಿ ಮೋಜು ಮಸ್ತಿ ಮಾಡುವಷ್ಟರ ಮಟ್ಟಿಗೆ ಬೆಳೆದು ಬಿಡುತ್ತಾನೆ.

rajbhavan7

ಇದೇ ಅಲಿ ಅಸ್ಕರ್ ಮುಂದೆ ಪ್ರಸ್ತುತ ಈ ರಾಜ್ಯಪಾಲರ ನಿವಾಸ, ರಾಜ್ಯ ಅತಿಥಿ ಗೃಹವಾಗಿರುವ ಬಾಲಾಬ್ರೂಯಿ ಮತ್ತು ಲೀಲಾ ನಿವಾಸ್ ಸೇರಿದಂತೆ ಒಟ್ಟು ಐದು ಸುಂದರವಾದ ಬಂಗಲೆಗಳನ್ನು ನಿರ್ಮಿಸಿ ಅವುಗಳಿಗೆ ಬೆಹೆಷ್ಟ್, ಅಲಿಯಾಬಾದ್, ಹುಸೇನಾಬಾದ್, ಅಜಿಮಾಬಾದ್ ಮತ್ತು ಅಸ್ಕರಾಬಾದ್ ಎಂದು ಹೆಸರಿಸಿರುತ್ತಾನೆ. 1834 ರಿಂದ 1861 ರ ವರೆಗೆ ಬ್ರಿಟಿಷರಿಗೆ ಮೈಸೂರು ಪ್ರಾಂತ್ಯಗಳ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ಅವರು ಅರೇಬಿಯನ್ ಕುದುರೆಗಳನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದದಲ್ಲದೇ ಅಲಿ ಅಸ್ಗರ್ ಗೆಳೆತನದಿಂದ ಅವರ ಲಾಯದಲ್ಲಿ ಕನಿಷ್ಠ ಐವತ್ತು ಕುದುರೆಗಳು ಇರುತ್ತವೆ. ಇದೇ ಗೆಳೆತನದಲ್ಲೇ ಅಂದಿನ ಹೈಗ್ರೌಂಡ್ಸ್ ಪ್ರದೇಶದಲ್ಲಿ ಸುಮಾರು 92.3 ಎಕರೆಯಷ್ಟು (67.6 ಎಕರೆ ಅಳತೆಯಲ್ಲಿ ಕಟ್ಟಡವಿದ್ದರೆ, ಪಶ್ಚಿಮಕ್ಕೆ ಕಟ್ಟಡಗಳಿಲ್ಲದ 24.7 ಎಕರೆಯಷ್ಟು ಖಾಲಿ ಜಾಗ) ಪ್ರದೇಶದಲ್ಲಿ ಒಂದೇ ಅಂತಸ್ತಿನ ಸುಂದರ ಕಟ್ಟಡವಾಗಿ ನಿರ್ಮಾಣವಾಗಿದ್ದ ಆ ಕಟ್ಟಡವನ್ನು ಅಲಿ ಅಸ್ಗರ್ ನಿಂದ ಸರ್ಕಾರಿ ಅನುದಾನದ ಮೂಲಕ ಖರೀಧಿಸಿ 1840 ಮತ್ತು 1842 ರ ನಡುವೆ ಈ ಬಂಗಲೆಯನ್ನು ಔಟ್ ಹೌಸ್ ಮತ್ತು ಲಾಯಗಳೊಂದಿಗೆ ನಿರ್ಮಿಸಿ ಕೆಲ ಕಾಲ ವಾಸಿಸುತ್ತಿರುತ್ತಾರೆ. ಕಬ್ಬನ್ ಹೋದ ನಂತರ, ಅವರ ಬಂಗಲೆ ಮತ್ತು ಇತರ ಆಸ್ತಿಯು ಅವರ ಏಜೆಂಟ್ ಮೇಜರ್ ಫ್ರೆಡ್ರಿಕ್ ಗ್ರೇ ಅವರ ಉಸ್ತುವಾರಿಗೆ ಬಂದಾಗ ಆತ ಆ ಬಂಗಲೆಯನ್ನು ಮಾರಾಟಕ್ಕೆ ಇಟ್ಟಾಗ, ಕಬ್ಬನ್ ಉತ್ತರಾಧಿಕಾರಿಯಾದ ಲೆವಿನ್ ಬೆಂಥೆಮ್ ಬೌರಿಂಗ್ ನವೆಂಬರ್ 13, 1862 ರಂದು ಆ ಕಟ್ಟಡವನ್ನು ಅಧಿಕೃತವಾಗಿ ಅಂದಿನ ಬ್ರಿಟಿಷ್ ಸರ್ಕಾರದ ಪರವಾಗಿ ಖರೀಧಿಸಿ ಅದನ್ನು ಕಮಿಷನರ್ ಅವರ ಅಧಿಕೃತ ನಿವಾಸವನ್ನಾಗಿ ಮಾಡಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ