ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಕುಮಾರಕೃಪ ಅತಿಥಿ ಗೃಹ ರಾಜ್ಯದ ಅತ್ಯಂತ ಪ್ರತಿಷ್ಠಿತ ಸರ್ಕಾರಿ ಅತಿಥಿ ಗೃಹಗಳಲ್ಲಿ ಒಂದಾಗಿದೆ. ವಿಶಾಲವಾದ ಹಸಿರು ವಾತಾವರಣ, ಐತಿಹಾಸಿಕ ಹಿನ್ನೆಲೆ, ಉತ್ತಮ ಆತಿಥ್ಯ ಸೇವೆ ಮತ್ತು ರಾಜಕೀಯ ಮಹತ್ವದಿಂದಾಗಿ ಇದು ಕರ್ನಾಟಕದ ಆಡಳಿತ ವ್ಯವಸ್ಥೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.ಹೊರ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ರಾಷ್ಟ್ರದ ಗಣ್ಯರು ಹಾಗೂ ವಿದೇಶಿ ಪ್ರತಿನಿಧಿಗಳು ಬೆಂಗಳೂರಿಗೆ ಭೇಟಿ ನೀಡಿದಾಗ ಸಾಮಾನ್ಯವಾಗಿ ವಾಸ್ತವ್ಯ ಮಾಡುವ ಪ್ರಮುಖ ಸ್ಥಳಗಳಲ್ಲಿ ಕುಮಾರಕೃಪ ಅತಿಥಿ ಗೃಹವೂ ಒಂದಾಗಿದೆ. ಇಂತಹ ಪಾರಂಪರಿಕ ಕಟ್ಟಡವನ್ನು ರಕ್ಷಣೆ ಮಾಡಬೇಕಾದವರೇ ಅದರ ವಿನಾಶಕ್ಕೆ ಕೈ ಹಾಕಿರುವುದು ವಿಪರ್ಯಾಸವಾಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಈ ಕಟ್ಟಡವನ್ನು ತಮ್ಮ ಗೃಹ ಕಚೇರಿ ಮಾಡಿಕೊಳ್ಳುವ ನೆಪದಲ್ಲಿ ಅದರ ಮೂಲಸ್ವರೂಪಕ್ಕೆ ಧಕ್ಕೆ ತರುತ್ತಿರುವ ಹಿನ್ನಲೆಯಲ್ಲಿ ಕುಮಾರಕೃಪಾ ಅಥಿಗೃಹದ ಸಂಪೂರ್ಣ ವಿವರಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಈ ಅತಿಥಿ ಗೃಹ ಕುಮಾರ ಕೃಪ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ದಿವಾನ್ ಸರ್ ಕೆ. ಶೇಷಾದ್ರಿ ಅಯ್ಯರ್ (1883–1901) ಅವರ ಖಾಸಗಿ ಬಂಗಲೆ ಎನ್ನುವುದು ಅತ್ಯಂತ ಗಮನಾರ್ಹವಾಗಿದೆ. 1831ರಲ್ಲಿ ಅಧಿಕಾರವನ್ನು ಕಳೆದುಕೊಂಡಂತಹ ಮೈಸೂರು ಅರಸರು ಸುಮಾರು 50 ವರ್ಷಗಳ ಕಾಲ ಸುಧೀರ್ಘವಾದ ಪತ್ರ ವ್ಯವಹಾರದ ನಂತರ 1881 ರಲ್ಲಿ, ಮೈಸೂರು ರಾಜಪ್ರಭುತ್ವ ಒಡೆಯರ್ ರಾಜವಂಶಕ್ಕೆ ಹಸ್ತಾಂತರವಾದಾಗ, ಹತ್ತನೇ ಚಾಮರಾಜೇಂದ್ರ ಒಡೆಯರ್ ಮೈಸೂರಿನ ಒಡೆಯರಾಗಿ ಆಡಳಿತದ ಜವಾಬ್ದಾರಿಯನ್ನು ವಹಿಸಿ ಕೊಂಡರೆ ಶ್ರೀ ರಂಗಾಚಾರ್ಲು ಅವರು ದಿವಾನರಾದರು, ಕೇವಲ ಎರಡೇ ವರ್ಷಗಳಲ್ಲಿ ಆವರು ಅಕಾಲಿಕವಾಗಿ ಮರಣ ಹೊಂದಿದಾಗ ದಿವಾನರಾದವರೇ ಶ್ರೀ ಕೆ. ಶೇಷಾದ್ರಿ ಅಯ್ಯರ್.

ಚಾಮರಾಜ ಒಡೆಯರ ಪ್ರಜಾಹಿತದೃಷ್ಟಿ ಮತ್ತು ದಿವಾನ್ ಶೇಷಾದ್ರಿ ಐಯ್ಯರ್ ಅವರ ವಿವೇಕ ಹಾಗೂ ಜಾಣ್ಮೆಯಿಂದ ಮೈಸೂರು ರಾಜ್ಯದ ಪ್ರಗತಿ ಮತ್ತೊಂದು ಮಜಲಿಗೆ ತಲುಪುತ್ತದೆ. ಪ್ರಜೆಗಳ ಹಿತರಕ್ಷಣೆಗಾಗಿ ಬಹಳಷ್ಟು ಒತ್ತು ನೀಡಿ ಶಿಕ್ಷಣ, ಆರೋಗ್ಯ, ಅರಣ್ಯ ಸಂಪತ್ತು ಕಾಪಾದುವ ಮೂಲಕ ರಾಜ್ಯದ ಪ್ರಗತಿಯನ್ನು ತರುವುದಲ್ಲದೇ, ರಾಜ್ಯದ ಆದಾಯವನ್ನು ಹೆಚ್ಚಿಸುವ ಮೂಲಕ ಪ್ರಜೆಗಳ ನೆಮ್ಮದಿಯನ್ನು ಇಮ್ಮಡಿಸುವುದರಲ್ಲಿ ಸಫಲರಾಗುತ್ತಾರೆ. ಬೆಂಗಳೂರನ್ನು ಆಧುನಿಕರಣಗೊಳಿಸಿದ ಕಾರಣಕ್ಕಾಗಿ ಆವರು ಆಧುನಿಕ ಬೆಂಗಳೂರಿನ ನಿರ್ಮಾಪಕ ಎಂದೇ ಪ್ರಖ್ಯಾತಿಯನ್ನು ಹೊಂದಿದ್ದಾರೆ.

ಆಗಸ್ಟ್ 1898ರಲ್ಲಿ ಬೆಂಗಳೂರಿಗೆ ಪ್ಲೇಗ್ ಎಂಬ ಮಹಾಮಾರಿ ವಕ್ಕರಿಸಿದಾಗ, ಅಂದಿನ ಮೈಸೂರು ಸರ್ಕಾರವು ಜನನಿಬಿಡ ಪ್ರದೇಶವಾಗಿದ್ದ ಬಸವನಗುಡಿ ಮತ್ತು ಮಲ್ಲೇಶ್ವರಂ ಬಡಾವಣೆಗಳಿಂದ ಹೊಸಾ ಬಡವಾಣೆಗಳನ್ನು ನಿರ್ಮಿಸಲು ಯೋಚಿಸಿದಾಗಲೇ ಪ್ರಸ್ತುತ ಶೇಷಾದ್ರಿಪುರದ ನಿರ್ಮಾಣವಾಗಿ ಅಂತಹ ಕೆ. ಶೇಷಾದ್ರಿ ಅಯ್ಯರ್ ಆವರು ತಮ್ಮ ಅಧಿಕಾರದ ಕೊನೆಯ ಹಂತದಲ್ಲಿ ತಮ್ಮ ವಾಸಕ್ಕಾಗಿ ಒಂದು ಮನೆಯನ್ನು ಕಟ್ಟಲು ನಿರ್ಧರಿಸಿದಾಗ ಅಂದಿನ ವಾಸ್ತುತಜ್ಞರು ಅಂದಿನ ಕಾಲದ ವಿಶಿಷ್ಟ ಬ್ರಿಟಿಷ್ ಶೈಲಿಯ ಕುಟೀರಗಳಂತೆ ವಿನ್ಯಾಸ ಗೊಳಿಸಿದ್ದನ್ನು ಇಚ್ಚಿಸದ ಶೇಷಾದ್ರಿಗಳು ತಮ್ಮ ನಿವಾಸ ಸಂಪೂರ್ಣವಾಗಿ ಭಾರತೀಯ ಸೌಂದರ್ಯಶಾಸ್ತ್ರ ಮತ್ತು ವಾಸ್ತುಶಾಸ್ತ್ರದ ಅನುಗುಣವಾಗಿ ಇರಬೇಕೆಂದು ಸೂಚಿಸಿ ಅದರ ಅನುಗುಣವಾಗಿ ಈ ಅರಮನೆಯಂತಹ ಮೇರು ಕೃತಿಯನ್ನು ಸುಮಾರು 1897ರಲ್ಲಿ ನಿರ್ಮಿಸಿದರು. ಕೇರಳದ ಪಾಲಕ್ಕಾಡಿನ ಕುಮಾರಪುರಂ ಮೂಲದವರಾದ ಅಯ್ಯರ್ ಅವರು ತಮ್ಮ ಕುಲ ದೇವರಾದ ಕುಮಾರಸ್ವಾಮಿಯ (ಸುಬ್ರಹ್ಮಣ್ಯಸ್ವಾಮಿ) ಆಶೀರ್ವಾದ ಎನ್ನುವಂತೆ ಆ ಭವ್ಯವಾದ ಕಟ್ಟಡಕ್ಕೆ ಕುಮಾರಕೃಪ ಎಂಬ ಹೆಸರನ್ನು ಇಡಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ