ಮನೆ ಅಥವಾ ಕಛೇರಿ ಇರಲಿ, ನಮ್ಮ ಸಂವಿಧಾನ ಹೆಂಗಸರಿಗೆ ಅನೇಕ ಹಕ್ಕುಗಳನ್ನು ಒದಗಿಸಿದೆ, ಇದು ನಿಮಗೆ ಗೊತ್ತೇ....?
ಭಾರತೀಯ ಹೆಂಗಸರು ನಮ್ಮ ದೇಶದಲ್ಲಿ ಸದಾ ತುಳಿಯಲ್ಪಟ್ಟ ವರ್ಗದ 2ನೇ ದರ್ಜೆ ಪ್ರಜೆಗಳಾಗಿಯೇ ಉಳಿದುಬಿಟ್ಟಿದ್ದಾರೆ. ನಮ್ಮ ಸಂವಿಧಾನ ಹೆಂಗಸರಿಗೆ ಗಂಡಸರಷ್ಟೇ ಸರಿಸಮಾನ ಹಕ್ಕುಗಳನ್ನು ಕೊಟ್ಟಿದ್ದರೂ, ನಿಜಜೀನದಿ ಗಮನಿಸಿದಾಗ, ಇಂದಿಗೂ ಸಹ ಎಷ್ಟೋ ಮನೆಗಳಲ್ಲಿ ಹೆಂಗಸರು ತಮ್ಮ ಹಕ್ಕುಗಳಿಗಾಗಿ ಹೆಣಗಾಡ ಬೇಕಾಗುತ್ತದೆ, ತಮ್ಮವರೊಂದಿಗೇ ಮತ್ತೆ ಮತ್ತೆ ಹೋರಾಡ ಬೇಕಾಗುತ್ತದೆ.
ಮನೆ ಅಥವಾ ಆಫೀಸ್ ಇರಲಿ, ಎಲ್ಲಾ ಜಾಗದಲ್ಲೂ ಅವರಿಗೆ ಸಿಗಬೇಕಾದ ಹಕ್ಕುಗಳನ್ನು ನೀಡದೆ ಶೋಷಿಸಲಾಗುತ್ತದೆ. ಈ ಕುರಿತಾಗಿ ಮಹಿಳೆಯರು ಒಂದೋ ಅಜ್ಞಾತವಶರಾಗಿ ಅಥವಾ ಇನ್ನೊಂದೋ, ಸಾಮಾಜಿಕ ಒತ್ತಡಕ್ಕೆ ಸಿಲುಕಿ ಆ ಹಕ್ಕುಗಳನ್ನು ನಿರ್ಲಕ್ಷಿಸಿ ಸುಮ್ಮನೆ ಇದ್ದುಬಿಡುತ್ತಾರೆ, ಇದರಿಂದಾಗಿ ಅವರು ನಿರಂತರ ಶೋಷಣೆಗೆ ಒಳಗಾಗುತ್ತಲೇ ಇರುತ್ತಾರೆ. ಆದರೆ ಎಷ್ಟೋ ಸಲ ಮಹಿಳೆಯರಿಗೆ ತಮ್ಮ ಹಕ್ಕುಗಳ ಕುರಿತು ಅರಿವೇ ಇರುವುದಿಲ್ಲ. ಈ ಕಾರಣದಿಂದಾಗಿ ಅವರು ಒಂದಿಷ್ಟೂ ಮಾತನಾಡದೆ ಎಲ್ಲವನ್ನೂ ಸಹಿಸಿಕೊಂಡೇ ಇದ್ದುಬಿಡುತ್ತಾರೆ. ಹೆಣ್ಣು ತಿಳಿದಿರಬೇಕಾದ ಕೆಲವು ಹಕ್ಕುಗಳು ಹೀಗಿವೆ :
ಮೇಂಟೆನೆನ್ಸ್ ಹಕ್ಕು
ಭಾರತೀಯ ಸಂವಿಧಾನ ಹೆಂಗಸರಿಗೆ ಅವರ ಮೇಂಟೆನೆನ್ಸ್ ನ ಹಕ್ಕನ್ನು ನೀಡಿದೆ. ಇದರ ಪ್ರಕಾರ ಪ್ರತಿ ವಿವಾಹಿತ ಮಹಿಳೆಗೆ ಕಾನೂನಿನ ವತಿಯಿಂದ ತನ್ನ ಪತಿಯಿಂದ ಮೇಂಟೆನೆನ್ಸ್ ಅಂದ್ರೆ ಜೀವನಾಂಶ ಪಡೆಯುವ ಹಕ್ಕಿದೆ, ಮುಖ್ಯವಾಗಿ ಜೊತೆಗೆ ವಾಸಿಸದೆ ಇದ್ದಾಗ. ಈ ಹಕ್ಕು ಭಾರತದಲ್ಲಿ ಮಹಿಳೆಯರಿಗೆ ಹಿಂದೂ ವಿವಾಹ ಅಧಿನಿಯಮ, 1955 ಹಾಗೂ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಅಧಿನಿಯಮ, 2005 ನಂಥ ಕಾನೂನುಗಳ ಮೂಲಕ ಸಂರಕ್ಷಿಸಲಾಗಿದೆ. ಕಲಂ 24ರ ಪ್ರಕಾರ, ಸಮರ್ಥ ಪತಿ ಯಾ ಪತ್ನಿಯರಲ್ಲಿ, ಅವರ ಪಾರ್ಟ್ ನರ್‌ಮೇಂಟೆನೆನ್ಸ್ ಗೆ ಬೇಡಿಕೆ ಸಲ್ಲಿಸಬಹುದು. ಏಕೆಂದರೆ ಭಾರತೀಯ ಹೆಂಗಸರಿಗೆ ಮದುವೆ ನಂತರ, ಪತಿ ಹಾಗೂ ಅತ್ತೆ ಮನೆಯನ್ನೇ ಆಶ್ರಯಿಸಬೇಕಾಗುತ್ತದೆ. ಹೀಗಿರುವಾಗ ಈ ಹಕ್ಕು ಅವಳ ಮಾಸಿಕ ಜೀವನಾಧಾರದ ವ್ಯವಸ್ಥೆಗೆ ಸುನಿಶ್ಚಿತ ದಾರಿ ತೋರುತ್ತದೆ. ಮೇಂಟೆನೆನ್ಸ್ ರೂಪದಲ್ಲಿ ಮಹಿಳೆಯರು ತಮ್ಮ ಪತಿಯಿಂದ ತಿಂಗಳ ಖರ್ಚಿನ ಹಣ ಪಡೆಯಬಹುದು.
ಇಬ್ಬರ ನಡುವೆ ವಿಚ್ಛೇದನದ ಸಂದರ್ಭ ಬಂದುಬಿಟ್ಟರೆ, ವಿಚ್ಛೇದನದ ಪ್ರೊಸೆಸಿಂಗ್ ಟೈಂನಲ್ಲಿ ಹಾಗೂ ನಂತರ ಸಹ ಅವರಿಗೆ ಮೇಂಟೆನೆನ್ಸ್ ನ ಹಕ್ಕು ಇದೆ. ಪತಿ ಇದನ್ನು ಅಲಕ್ಷಿಸಲಾಗದು.
ಸಮಾನ ವೇತನದ ಹಕ್ಕು
ಸಮಾನ ವೇತನದ ಹಕ್ಕು ಎಲ್ಲಕ್ಕಿಂತ ಮಹತ್ವಪೂರ್ಣ ಶ್ರಮ ಹಕ್ಕುಗಳಲ್ಲಿ ಒಂದಾಗಿದೆ. ಈ ಹಕ್ಕು, ಒಂದೇ ತರಹದ ಕೆಲಸಕ್ಕಾಗಿ ಏಕರೂಪದ ವೇತನಕ್ಕಾಗಿ ಒತ್ತಾಯಿಸುವ ಹಕ್ಕಾಗಿದೆ. ಭಾರತದಲ್ಲಿ ಸಮಾನ ಪಾರಿಶ್ರಮಿಕ ಅಧಿನಿಯಮ 1976 ಪ್ರಾಥಮಿಕ ಕಾನೂನಾಗಿದೆ. ಇದು ಗ್ಯಾರಂಟಿ ಪಡಿಸುವುದೆಂದರೆ ಗಂಡು/ಹೆಣ್ಣು ಇಬ್ಬರು ಶ್ರಮಿಕರಿಗೂ ಕೆಲಸ ಮಾಡುವುದಕ್ಕಾಗಿ, ಸಮಾನ ವೇತನ ಕೊಡಬೇಕೆಂದು ಒತ್ತಾಯಿಸುವ ಹಕ್ಕಾಗಿದೆ.
ಈ ಹಕ್ಕು ಹೆಂಗಸರಿಗೆ ಆಫೀಸ್ ಹಾಗೂ ತಮ್ಮ ಕಾರ್ಯಸ್ಥಳಗಳಲ್ಲಿ ಅಪಾಯಿಂಟ್ ಮೆಂಟ್ ಹಾಗೂ ಇನ್ ಕ್ರಿಮೆಂಟ್ ನಲ್ಲಿ ಜೆಂಡರ್ ಆಧಾರದಿಂದ ಮಹಿಳೆಯರ ವಿರುದ್ಧ ನಡೆಯುತ್ತಿರುವ ಭೇದಭಾವಕ್ಕೂ ಪ್ರತಿಬಂಧನೆ ಒಡ್ಡುತ್ತದೆ.





