- ರಾಘವೇಂದ್ರ ಅಡಿಗ ಎಚ್ಚೆನ್.

ವಿಜಯ್ ರಾಘವೇಂದ್ರ ಅಭಿನಯದ ಕಿಶೋರ್ ಮೂಡಬಿದ್ರೆ ನಿರ್ದೇಶನದ ರಿಪ್ಪನ್ ಸ್ವಾಮಿ ಸಿನಿಮಾ ರಾಜ್ಯಾದ್ಯಂತ ಆಗಸ್ಟ್ 29 ರಂದು ರಿಲೀಸ್ ಆಗ್ತಾ ಇದೆ. ಆದರೆ ಇದಕ್ಕೂ ಮುನ್ನ ಚಿತ್ರತಂಡ ಒಂದಷ್ಟು ಭಾಗದಲ್ಲಿ ಪೇಯ್ಡ್ ಶೋ ತೋರಿಸಲಾಗಿದೆ. ಈ ಶೋ ನೋಡಿದವರು ಫಿದಾ ಆಗೋಗಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಸೇರಿದಂತೆ ಹಲವು ಕಡೆ ಪೇಯ್ಡ್ ಶೋಗಳನ್ನ ಆರ್ಗನೈಸ್ ಮಾಡಲಾಗಿತ್ತು. ರಿಪ್ಪನ್ ಸ್ವಾಮಿ ಸಿನಿಮಾ ನೋಡಿದ ಸ್ಟುಡೆಂಟ್ಸ್ ಆಗಿರಬಹುದು, ದೊಡ್ಡವರಾಗಿರಬಹುದು ಎಲ್ಲರಿಗೂ ಕಾಡಿದಂತ ವಿಚಾರ ಅಂದ್ರೆ ಅದು ವಿಜಯ್ ರಾಘವೇಂದ್ರ ಅವರ ಲುಕ್.

FB_IMG_1756293013216

ಈಗಾಗಲೇ ರಿಪ್ಪನ್ ಸ್ವಾಮಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ನಲ್ಲಿ ವಿಜಯ್ ರಾಘವೇಂದ್ರ ಹೊಸ ಅವತಾರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ರಾ ಲುಕ್ ನಲ್ಲಿ ಖಡಕ್ ಎಕ್ಸ್ ಪ್ರೆಷನ್ ಕೊಟ್ಟಿದ್ದಾರೆ. ಅವರ ಮಾ್ಉ, ಅವರ ನಡೆ ಸಿನಿಮಾದಲ್ಲಿ ಹೇಗಿರಲಿದೆ ಅಂತ ಟ್ರೇಲರ್ ನಲ್ಲಿಯೂ ಅನವಾರಣವಾಗಿದೆ. ಅದನ್ನ ಸಂಪೂರ್ಣವಾಗಿ ಸಿನಿಮಾದಲ್ಲಿ ನೋಡಿದವರು ಖುಷಿಯಾಗಿದ್ದಾರೆ.

FB_IMG_1756293022924

ಒಂದು ಕಡೆ ವಿಜಯ್ ರಾಘವೇಂದ್ರ ಅವರ ನಟನೆಗೆ ಫಿದಾ ಆದ್ರೆ ಮತ್ತೊಂದು ಕಡೆ ಸಿನಿಮಾದ ಹಾಡುಗಳು ಕ್ರೇಜ್ ಸೃಷ್ಟಿಸಿವೆ. ಒಟ್ಟಾರೆ ಎಲ್ಲಾ ಕಡೆ ರಿಪ್ಪನ್ ಸ್ವಾಮಿಯದ್ದೇ ಹವಾ ಶುರುವಾಗಿದೆ. ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತವನ್ನು ನೀಡಿದ್ದಾರೆ. ರಂಗನಾಥ್ ಸಿ ಎಂ ರವರು ಕ್ಯಾಮರಾ ಹಿಡಿದಿದ್ದಾರೆ. ಶಶಾಂಕ್ ನಾರಯಣ್ ಸಂಕಲನ ಮಾಡಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ