KGFನಂತಹ ಆಕ್ಷನ್ ಪ್ಯಾಕ್ಡ್ ಸಿನಿಮಾ ಬಳಿಕ ಟಾಕ್ಸಿಕ್ ಕಿಕ್ ಕೊಡೋಕೆ ಸಜ್ಜಾಗಿರೋ ರಾಕಿಭಾಯ್ ಯಶ್ಗೆ ಈಗ ಲೇಡಿಸೂಪರ್ ಸ್ಟಾರ್ ಜೊತೆಯಾಗಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಬಹುನಿರೀಕ್ಷಿತ ಟಾಕ್ಸಿಕ್ ಮೂವಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ.. ಲೇಡಿ ಟೈಗರ್ ಅಂತಾನೇ ಫೇಮಸ್ ಆಗಿರೋ ನಟಿ ನಯನತಾರಾ ನಟಿಸಲಿದ್ದಾರೆ. ಈ ಸುದ್ದಿಯನ್ನು ಟಾಕ್ಸಿಕ್ ಸಿನಿಮಾ ತಂಡ ಕನ್ಫರ್ಮ್ ಮಾಡದೇ ಇದ್ರೂ ಡಿಜಿಟಲ್ ಕಾಮೆಂಟರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಾಲಿವುಡ್ ನಟ ಅಕ್ಷಯ್ ಒಬೆರಾಯ್, ಟಾಕ್ಸಿಕ್ ಸಿನಿಮಾದಲ್ಲಿ ನಯನತಾರಾ ಇದ್ದಾರೆ ಅನ್ನೋದನ್ನ ಖಚಿತಪಡಿಸಿದ್ದಾರೆ.
ಅಸಲಿಗೆ ಟಾಕ್ಸಿಕ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ನಟ ಯಶ್ಗೆನಾಯಕಿಯಾಗಿ ಬಾಲಿವುಡ್ ಬೆಡಗಿ ನಟಿ ಕರೀನಾ ಕಪೂರ್ ನಟಿಸಲಿದ್ದಾರೆ ಅನ್ನೋದು ಈ ಹಿಂದೆ ಸುದ್ದಿಯಾಗಿತ್ತು. ಅದಾದ ನಂತರ ಇದೇ ಫಿಲ್ಮ್ನಲ್ಲಿನಯನತಾರಾ ಇದ್ದು, ಅವರ ಅಕ್ಕನ ಪಾತ್ರದಲ್ಲಿ ಕರೀನಾ ನಟಿಸೋ ಸಾಧ್ಯತೆ ಇದೆ ಅಂತಾನೇ ಹೇಳಲಾಗ್ತಿತ್ತು. ಆದ್ರೆ, ಆ ಯಾವ ವರದಿಗಳೂ ಕೂಡ ಸ್ಪಷ್ಟತೆ ಇರಲಿಲ್ಲ.
ಇದೀಗ ನಟಿ ನಯನತಾರಾ ಅವರು ನಟ ಯಶ್ ಜೊತೆ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ ಅಂತಾ ಹೇಳಿರುವ ಬಾಲಿವುಡ್ ನಟ ಅಕ್ಷಯ್ ಒಬೆರಾಯ್, ಬೇರೆ ಯಾರೆಲ್ಲಾ ಇದ್ದಾರೆ ಅನ್ನೋದನ್ನ ಮಾತ್ರ ಓಪನ್ ಆಗಿ ಹೇಳಿಲ್ಲ.
ಇನ್ನು ಟಾಕ್ಸಿಕ್ ಗೋವಾದಲ್ಲಿ ಡ್ರಗರ್ಸ್ ದಂಧೆ ಸುತ್ತ ಹೆಣೆಯೋ ಆಕ್ಷನ್ ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಇದೇ ವರ್ಷ ಏಪ್ರಿಲ್ 10ಕ್ಕೆ ರಿಲೀಸ್ ಮಾಡೋಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಇತ್ತೀಚೆಗೆ ಯಶ್ ಜನ್ಮದಿನದಂದು ಬಿಡುಗಡೆಯಾಗಿದ್ದ ಟಾಕ್ಸಿಕ್ ಟೀಸರ್ ಈಗಾಗಲೇ ಅಭಿಮಾನಿಗಳಲ್ಲಿ ಸಖತ್ ಎಕ್ಸೈಟ್ಮೆಂಟ್ ಕ್ರಿಯೇಟ್ ಮಾಡಿದೆ. ಅಷ್ಟೇ ಅಲ್ಲ, ಯೂಟೂಬ್ನಲ್ಲಿ ಮಿಲಿಯನ್ಗಟ್ಟಲೇ ವೀವ್ಸ್ ಕಂಡಿದೆ. ಆದ್ರೆ, ಈ ಟೀಸರ್ನಲ್ಲಿ ಖಡಕ್ ಆಗಿ ಎಂಟ್ರಿ ಕೊಡೋ ಯಶ್ ನೇರವಾಗಿ ಪಬ್ಗೆ ಹೋಗಿ ಡ್ಯಾನ್ಸರ್ ಒಬ್ಬರ ಕಾಲನ್ನ ಮೇಲಕ್ಕೆತ್ತಿ ಆಕೆ ಮೇಲೆ ಮದ್ಯವನ್ನು ಸುರಿಯೋ ದೃಶ್ಯ ಕೆಲವರ ಟೀಕೆಗೆ ಗುರಿಯಾಗಿತ್ತು. ಇಷ್ಟಾದ್ರೂ ಕೂಡ ಸಿಗಾರ್ ಹಿಡಿದುಕೊಂಡು ರಾಕ್ ಆಗಿ ಎಂಟ್ರಿ ಕೊಡೋ ರಾಕಿಭಾಯ್ ಸ್ಟೈಲ್ಗೆಮಾತ್ರ ಎಲ್ಲರೂ ಫಿದಾ ಆಗೋಗಿದ್ದಾರೆ. ಟಾಕ್ಸಿಕ್ ಕೆಜಿಎಫ್ಗಿಂತ ಮತ್ತೊಂದು ಲೆವೆಲ್ನಲ್ಲಿ ಇರೋದಂತೂ ಗ್ಯಾರಂಟಿ ಅಂತಾ ಮಾತನಾಡಿಕೊಳ್ತಿದ್ದಾರೆ.
ಇದೀಗ ಟಾಕ್ಸಿಕ್ ಸಿನಿಮಾಗೆ ನಟಿ ನಯನತಾರಾ ಸೇರಿಕೊಂಡಿರೋದು ಯಶ್ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ. ರಾಕಿಂಗ್ ಸ್ಟಾರ್ ಮತ್ತು ಲೇಡಿ ಸೂಪರ್ಸ್ಟಾರ್ ಜೋಡಿ ಜಬರ್ದಸ್ತ್ ಆಗಿಯೇ ಇರಲಿದ್ದು, ದಕ್ಷಿಣ ಭಾರತದ ಎಲ್ಲಾ ಚಿತ್ರಗಳ ದಾಖಲೆಗಳನ್ನೇ ಅಳಿಸಿಹಾಕಲಿದೆ ಅನ್ನೋ ಚರ್ಚೆ ಕೂಡ ಜೋರಾಗಿದೆ.