- ರಾಘವೇಂದ್ರ ಅಡಿಗ ಎಚ್ಚೆನ್.
2025ರ ಬಹುನಿರೀಕ್ಷಿತ '45' ಚಿತ್ರದ ಟೀಸರ್ ಅನಾವರಣಗೊಂಡಿದೆ. ಆಗಸ್ಟ್ 15ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿದ್ದು, ಚಿತ್ರತಂಡ ಇತ್ತೀಚೆಗೆ ಪ್ರಚಾರ ಹಮ್ಮಿಕೊಂಡಿತ್ತು. ಈವೆಂಟ್ನಲ್ಲಿ, ರಿಯಲ್ ಸ್ಟಾರ್ ಉಪೇಂದ್ರ ಅವರು ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅವರನ್ನು ಅಪರಂಜಿ ಎಂದು ಗುಣಗಾನ ಮಾಡಿದ್ರು.
'ಅಷ್ಟಕ್ಕೂ ದೊಡ್ಮನೆಯಿಂದ ಬಂದವರಲ್ವೇ': ಡೈರೆಕ್ಟರ್ಗಳ ಮೂಲ ಶಿವಣ್ಣ. ನಿನ್ನಲ್ಲೂ ಒಬ್ಬ ಡೈರೆಕ್ಟರ್ ಇದ್ದಾನೆ ಎಂದವರೇ ಇವರು. ನಾನಿನ್ನೂ ಏನು ಅಲ್ದಿರೋ ಸಂದರ್ಭ ಹೇಳಿದವ್ರು ಇವರು. ಇವರಿಂದ ಎಷ್ಟು ಜನ ನಿರ್ದೇಶಕರು ಬಂದಿದ್ದಾರೋ ಏನೋ. ಎಷ್ಟು ಜನ ಸೂಪರ್ ಡೂಪರ್ ಹಿಟ್ ಆಗಿದ್ದಾರೋ?. ಅದಕ್ಕೇನೆ ಶಿವಣ್ಣನಿಗೆ ಅಪರಂಜಿ ಅನ್ನೋದು. ದೊಡ್ಮನೆಯಿಂದ ಬಂದವರು. ದೊಡ್ಮನೆ ಅನ್ನೋದು ಅದಕ್ಕೇ ತಾನೆ. ನಿರ್ದೇಶಕ ಅರ್ಜುನ್ ಜನ್ಯ ಅವರನ್ನೂ ಬೆಂಬಲಿಸಿದ್ದಾರೆ ಎಂದು ಗುಣಗಾನ ಮಾಡಿದರು.
‘ನಾವು ಸರ್ಪ್ರೈಸ್ ಇಟ್ಟಿದ್ದೇವೆ"
‘ಓಂ’ ಸಿನಿಮಾ ರಿಲೀಶ್ ಆಗಿ 3 ದಶಕಗಳು ಕಳೆದಿವೆ. ಈ ಚಿತ್ರವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿದ್ದರೆ, ಶಿವರಾಜ್ಕುಮಾರ್ ಅವರು ನಟಿಸಿದ್ದರು. ಶಿವಣ್ಣ ಅವರಿಗೆ ಬೇರೆಯದೇ ಖದರ್ ಕೊಟ್ಟ ಸಿನಿಮಾ ಇದು. ಈಗ ಶಿವಣ್ಣ ಹಾಗೂ ಉಪೇಂದ್ರ ‘45’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ‘ಓಂ 2’ ಚಿತ್ರದ ಬಗ್ಗೆ ಕೇಳಲಾಯಿತು. ಈ ವೇಳೆ ಮಾತನಾಡಿದ ಉಪೇಂದ್ರ, ‘ನಾವು ಸರ್ಪ್ರೈಸ್ ಇಟ್ಟಿದ್ದೇವೆ. ಈಗಲೇ ರಿವೀಲ್ ಮಾಡಿದರೆ ಹೇಗೆ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಉಪೇಂದ್ರ ಊಟದ ಸ್ಟೈಲ್ ನೆನೆದ ಶಿವಣ್ನ
‘45’ ಸಿನಿಮಾದ ಟೀಸರ್ ಬಿಡುಗಡೆ ವೇಳೆ ಶಿವಣ್ಣ ಒಂದು ಘಟನೆ ನೆನಪಿಸಿಕೊಂಡಿದ್ದಾರೆ. ‘ಉಪೇಂದ್ರ ಸ್ಟೈಲ್ ತುಂಬ ಭಿನ್ನ. ಅವರು ಊಟದ ರೀತಿ ಮಾಡಲ್ಲ. ಅನ್ನ, ಸಾಂಬಾರ್, ರಸಂ, ಮೊಸರು ಎಲ್ಲನ್ನೂ ಒಟ್ಟಿಗೆ ಕಲಿಸಿಕೊಂಡು ಪಾಯಸದ ರೀತಿ ಕುಡಿಯುತ್ತಿದ್ದರು. ನಾನೇ ಫಾಸ್ಟ್ ಎಂದರೆ ಉಪೇಂದ್ರ ನನಗಿಂತ ಫಾಸ್ಟ್’ ಎಂದು ಶಿವಣ್ಣ ಹೇಳಿದ್ದಾರೆ.
'ಶಿವಣ್ಣ ಹೀರೋ ಎಂದಾಗಲೇ ಧೈರ್ಯ ಬಂತು': ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, ಅರ್ಜುನ್ ಸರ್ ಶಿವಣ್ಣ ಹೀರೋ ಎಂದು ತಿಳಿಸಿದ್ರು. ನಮಗಾಗಲೇ ಧೈರ್ಯ ಬಂತು. ನಾವು ಮೊದಲಿನಿಂದಲೂ ಶಿವಣ್ಣನ ಫ್ಯಾನ್ಸ್. ಅವರೆಂದರೆ ಬಹಳ ಪ್ರೀತಿ. ಸಿನಿಮಾ ಬಹಳ ಚೆನ್ನಾಗಿ ಬಂದಿದೆ. ನಿಮ್ಮ ಸಹಕಾರ ಇದ್ರೆ ಇನ್ನು ಒಳ್ಳೊಳ್ಳೆ ಚಿತ್ರಗಳು ಬರುತ್ತವೆ ಎಂದು ತಿಳಿಸಿದರು.
ರಾಜ್ ಬಿ ಶೆಟ್ಟಿ ಮಾತನಾಡಿ, ಈ ಸಿನಿಮಾದಲ್ಲಿ ಮೂವರಲ್ಲ, ಇಬ್ಬರೇ ಸೂಪರ್ ಸ್ಟಾರ್ಸ್ ಇರೋದು. ಅವರು ಮಾಡಿರುವಂತಹ ಕೆಲಸಗಳೇನು? ಕೊಟ್ಟಂತಹ ಸಿನಿಮಾಗಳೇನು?. ನಾನು ನಿನ್ನೆ ಮೊನ್ನೆ ಬಂದವನು. ನಾನು ಈ ಸಿನಿಮಾದ ಮೂರನೇ ಸೂಪರ್ ಸ್ಟಾರ್ ಅಲ್ಲ, ಓರ್ವ ನಟ ಅಷ್ಟೇ ಎಂದು ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರ ಬಗ್ಗೆ ಗುಣಗಾನ ಮಾಡಿದ್ರು.