ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜೀ಼ ಕನ್ನಡ ಸದಾ ಮುಂದಿರುತ್ತದೆ. ಇದೀಗ ಯುವ ಕಥೆಗಾರರಿಗೆ ಒಂದು ಅದ್ಭುತ ಅವಕಾಶ ಕಲ್ಪಿಸಿ ಕೊಡುತ್ತಿದೆ. ಅದರ ಜೊತೆಗೆ ಡ್ಯಾನ್ಸರ್ ಗಳು ಹಾಗೂ ಕಾಮಿಡಿಯನ್ ಗಳಿಗೂ ಸುವರ್ಣಾವಕಾಶ ಕಲ್ಲಿಸುತ್ತಿದ್ದು, ಜೀ಼ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ಸ್ ಸೆಪ್ಟೆಂಬರ್ 7 ರಂದು ಬೆಂಗಳೂರಿನಲ್ಲಿ ನಡೆಸುತ್ತಿದೆ.
ಜೀ಼ ರೈಟರ್ಸ್ ರೂಮ್ ನಲ್ಲಿ ಭಾಗವಹಿಸುವವರು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಮತ್ತು ಆಯ್ಕೆಯಾದ ಯುವಪ್ರತಿಭೆಗಳು ಮುಂದಿನ ಸುತ್ತಿಗೆ ಹೋಗುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳು ಜೀ಼ ರೈಟರ್ಸ್ ರೂಮ್ ಗೆ ಸೇರಲು ಅವಕಾಶ ಹೊಂದಿರುತ್ತಾರೆ, ಅಲ್ಲಿ ಅವರು ಇಂಡಸ್ಟ್ರಿಯ ವೃತ್ತಿಪರರಿಂದ ಮಾರ್ಗದರ್ಶನ ಪಡೆಯುತ್ತಾರೆ ಹಾಗೂ ಜೀ಼ ನ ಮುಂಬರುವ ಯೋಜನೆಗಳಿಗೆ ಕೆಲಸ ಮಾಡುವ ಅವಕಾಶ ಪಡೆಯುತ್ತಾರೆ. ಅಷ್ಟೇ ಅಲ್ಲ, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ ನಲ್ಲಿ ಉತ್ತೀರ್ಣರಾದವರು ಮುಂದಿನ ಸುತ್ತಿದೆ ಆಯ್ಕೆ ಆಗುತ್ತಾರೆ.
ಜೀ಼ ರೈಟರ್ಸ್ ರೂಮ್ ಆಡಿಷನ್ಸ್ ನಡಯುವ ಸ್ಥಳ ಸಂತ ಸೋಫಿಯಾ ಕಾನ್ವೆಂಟ್ ಸ್ಕೂಲ್, #6, 10th ಬ್ಲಾಕ್, 2ನೆ ಹಂತ, ನಾಗರಬಾವಿ, ಬೆಂಗಳೂರು. ಬೆಳಗ್ಗೆ 9 ಗಂಟೆಯಿಂದ 2ರ ವರೆಗೆ ನಡೆಯಲಿದ್ದು, 9900207711ಮೊಬೈಲ್ ಸಂಪರ್ಕಿಸಬಹುದು.
ಇನ್ನು ಡಾನ್ಸ್ ಕರ್ನಾಟಕ ಡಾನ್ಸ್ & ಕಾಮಿಡಿ ಖಿಲಾಡಿಗಳು ಆಡಿಷನ್ನಲ್ಲಿ ಪಾಲ್ಗೊಳ್ಳಲು ಬಯಸುವವರು. ಹೈಯರ್ ಸೆಕೆಂಡರಿ ಸ್ಕೂಲ್, ಆರ್ ವಿ ರೋಡ್, ಬಸವನಗುಡಿ, ಬೆಂಗಳೂರು ಇಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಪಾಲ್ಗೊಳ್ಳಬಹುದು. ಆಸಕ್ತರು 9513134434 ಸಂಖ್ಯೆಯನ್ನು ಸಂಪರ್ಕಿಸಬಹುದು.