ಡಿಸೈನರ್‌ ಗೋಲ್ಡನ್‌ ಬ್ಲೌಸ್‌ ಮತ್ತು ನಕ್ಷತ್ರಗಳಿಂದ ಸಿಂಗರಿಸಲ್ಪಟ್ಟ ಈ ನೆಟೆಡ್‌ ಡಿಸೈನರ್‌ ಸೀರೆಯಲ್ಲಿ  ಮಿರಿಮಿರಿ ಮಿಂಚುತ್ತಿರುವ ಈ ಚೆಲುವೆಯ ಮೋಡಿಗೆ ಬೆರಗಾಗದವರಾರು?

ಗೋಲ್ಡನ್‌ ವರ್ಕ್‌ನಿಂದ ಸಜ್ಜುಗೊಳಿಸಲ್ಪಟ್ಟ ಆರೆಂಜ್‌ ಲಹಂಗಾ, ಬ್ಲೌಸ್‌ ಮತ್ತು ದುಪಟ್ಟಾ ಮೇಲೆ ಎಕ್ಸ್ ಟ್ರಾ ಫಿಟಿಂಗ್ಸ್ ನ ಬ್ಯೂಟಿಫುಲ್ ಕಾಂಬಿನೇಷನ್‌ ಜೊತೆಯಲ್ಲೇ, ಇವಳ ಗೆಳತಿ ಡಿಸೈನರ್‌ ಬ್ಲ್ಯಾಕ್‌ ಲಹಂಗಾ ಚೋಲಿ ಆಧುನಿಕ ಬೆಡಗನ್ನು ಬೀರುತ್ತಾ ಕಣ್ಣು ಕೋರೈಸುವಂತೆ ಇಬ್ಬರೂ ನಿಂತುಬಿಟ್ಟಿದ್ದಾರೆ.

ಮುತ್ತುಗಳಿಂದ ಸಿಂಗರಿಸಲ್ಪಟ್ಟ ನೆಟೆಡ್‌ ಬಾಹುಗಳುಳ್ಳ `ವೀ' ನೆಕ್‌ನ ಈ ಬ್ಯೂಟಿಫುಲ್ ಮೋವ್ ಕಲರ್‌ ಗೌನ್‌ ತೊಟ್ಟ ಷೋಡಶಿಯ ಜೊತೆ ಬೀಡ್ಸ್, ಮುತ್ತು ಹಾಗೂ ಲೇಸ್‌ನಿಂದ ಸಜ್ಜುಗೊಳಿಸಲಾದ ಹೆವಿ ಲಹಂಗಾ ಡಿಸೈನರ್‌ ಬ್ಲೌಸ್‌ನಿಂದ ಮನಮೋಹಿಸುವಂತೆ ನಿಂತಿದ್ದಾರೆ ಈ ಚೆಲುವೆಯರು.

ಗೋಲ್ಡನ್‌ ವರ್ಕ್‌ನಿಂದ ಸುಸಜ್ಜಿತಗೊಳಿಸಲಾದ ಈ ಸ್ಟೈಲಿಶ್‌ ಲಹಂಗಾ ಜೊತೆ, ಪಾರಂಪರಿಕ ಜ್ಯೂವೆಲರಿ ಮತ್ತು ಹೇರ್‌ಸ್ಟೈಲ್‌ನ ಆಕರ್ಷಣೆ ನಯನಾಭಿರಾಮ ಎನಿಸಿದೆ.

ಅತ್ಯಾಕರ್ಷಕ ಹ್ಯಾಂಡ್‌ ವರ್ಕ್‌ನಿಂದ ಸಿಂಗರಿಸಲ್ಪಟ್ಟ ಡಾರ್ಕ್‌ ಬ್ಲೂ ಗೌನ್‌ ಹಾಗೂ ಕಲರ್‌ಫುಲ್ ಬೀಡ್ಸ್ ಗೋಲ್ಡನ್‌ ಮುತ್ತುಗಳಿಂದ ಚಂದಗೊಳಿಸಲಾದ ಡಿಸೈನರ್‌ ಗೌನ್‌ ಧರಿಸಿದ ಈ ಲಲನೆಯರಿಬ್ಬರೂ ಗ್ಲಾಮರ್‌ಗೆ ಸವಾಲು ಒಡ್ಡುವಂತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ