ಭಾರತೀಯ ಹೆಣ್ಣಿಗೆ ಸೀರೆಗಿಂತಲೂ ಅದ್ಭುತ ಉಡುಗೆ ಬೇರೆ ಯಾವುದಿರಲು ಸಾಧ್ಯ? ಫ್ಯಾಷನ್‌ ಗೆ ತಕ್ಕಂತೆ ಇದನ್ನು ಉಡುವ ಶೈಲಿ ಬದಲಾಗುತ್ತಿರುತ್ತದೆ. ಸೀರೆಗಿಂತಲೂ ಉತ್ತಮ ಲುಕ್‌ ನೀಡಬಲ್ಲ ಬೇರೆ ಯಾ ಉಡುಗೆಯೂ ಇಲ್ಲ ಎಂದೇ ಹೇಳಬೇಕು. ಇದು ಹಬ್ಬ ಹರಿದಿನ, ಪಾರ್ಟಿ, ಶುಭ ಸಮಾರಂಭ, ಆಫೀಸ್‌ ಫಂಕ್ಷನ್‌.... ಎಲ್ಲದಕ್ಕೂ ಪರ್ಫೆಕ್ಟ್ ಚಾಯ್ಸ್! ಇದನ್ನು ಉಡುವ (ಡ್ರೇಪಿಂಗ್‌) ವಿವಿಧ ವಿಧಾನ ಗಮನಿಸಿ :

ಬಟರ್ಫ್ಲೈ ಡ್ರೇಪಿಂಗ್

ಇಂಥ ವಿಧಾನ ತೆಳು ಹಾಗೂ ಸದೃಢ ಮೈಕಟ್ಟಿನ ತರುಣಿಯರಿಗೆ ಚೆನ್ನಾಗಿ ಒಪ್ಪುತ್ತದೆ. ಬಟರ್‌ ಫ್ಲೈ ಸ್ಟೈಲ್ ಡ್ರೇಪಿಂಗ್‌ ನ್ನು ಯಾವುದೇ ಬಗೆಯ ಸೀರೆಗೆ ಟ್ರೈ ಮಾಡಬಹುದು. ಆದರೆ ನೀವು ಕೋಟಾ ಯಾ ಶಿಫಾನ್‌ ತರಹದ ಲೈಟ್‌ ಸೀರೆ ಆರಿಸಿದ್ದರೆ, ಚಿಟ್ಟೆಯ ರೆಕ್ಕೆಗಳು ನೆಟ್ಟಗೆ ನಿಲ್ಲುವ ಸಂಭವ ಇರುತ್ತದೆ ಎಚ್ಚರ. ಯಾವುದರಲ್ಲಿ ದಟ್ಟ ಕಸೂತಿ ಇರುತ್ತದೋ ಅಂಥದ್ದನ್ನೇ ಆರಿಸಿ. ಇದನ್ನು ಫ್ರಂಟ್‌ ಸೆರಗಿನ ಶೈಲಿಗೆ ಬಳಸುವುದು ಲೇಸು. ಬಾಲಿವುಡ್‌ ನಟಿ ಸೋನಂ ಕಪೂರ್‌ ಈ ಶೈಲಿಯಲ್ಲೇ ಹೆಚ್ಚಾಗಿ ಸೀರೆ ಉಡುತ್ತಾಳೆ. ಪರ್ಫೆಕ್ಟ್ ಲುಕ್ಸ್ ಗಾಗಿ ಹಗುರ ಸೀರೆಯ ಜೊತೆ ಭಾರಿ ಪೇಪ್ಲಂ ಬ್ಲೌಸ್‌ ಕ್ಯಾರಿ ಮಾಡಿ.

ಧೋತಿ ಸೀರೆ

Dhoti-Saree

ಇಂಥ ಸೀರೆ ಇಂದಿನ ಆಧುನಿಕ ತರುಣಿಯರಲ್ಲಿ ಜನಪ್ರಿಯವಾಗಿದೆ. ಏಕೆಂದರೆ ಈ ಶೈಲಿ ಉಡಲು ಅತಿ ಸುಲಭ ಹಾಗೂ ಆರಾಮ ಎನಿಸುತ್ತದೆ. ಈ ತರಹದ ಶೈಲಿಯಲ್ಲಿ ಹಲವು ಸಿನಿಮಾ ನಟಿಯರನ್ನು ಗಮನಿಸಬಹುದು. ಈ ಟ್ರೆಂಡ್‌ ನಿಮ್ಮ ಫ್ಯಾಷನ್‌ ಸ್ಟೇಟ್ ಮೆಂಟ್‌ ಲೆವೆಲ್ ‌ನ್ನು ಹೆಚ್ಚಿಸುತ್ತದೆ. ಇದನ್ನು ಕಟ್‌ ಬ್ಲೌಸ್‌ ಯಾ ಕ್ರಾಪ್‌ ಟಾಪ್‌/ ಟೀ ಶರ್ಟ್‌ ಜೊತೆಯೂ ಉಡಬಹುದಾಗಿದೆ. ಈಗ ಚಳಿಗಾಲ ದಟ್ಟವಾಗುತ್ತಿದೆ. ಹೀಗಾಗಿ ಇದನ್ನು ನೀವು ಜ್ಯಾಕೆಟ್‌ ಬ್ಲೇಝರ್‌ ಜೊತೆಯೂ ಟ್ರೈ ಮಾಡಬಹುದು.

ಲೆಹಂಗಾ ಸೀರೆ

Lahnga-Saree (1)

ಈ ಶೈಲಿ ಇದೀಗ ಎಲ್ಲೆಡೆ ಮಾಮೂಲಿ ಎನಿಸಿದೆ. ಮದುವೆ, ಮುಂಜಿಯಂಥ ಶುಭ ಸಮಾರಂಭ, ದೀಪಾವಳಿಯಂಥ ದೊಡ್ಡ ಹಬ್ಬಗಳಿಗೂ ಸೂಟ್‌ ಆಗುತ್ತದೆ.

ಇತ್ತೀಚೆಗೆ ನವ ವಧುವಿನ ಲೆಹಂಗಾ ಸಹ ಇದೇ ಪ್ಯಾಟರ್ನ್‌ ನಲ್ಲಿ ಚಾಲ್ತಿಯಲ್ಲಿದೆ. ಇದನ್ನು ಸುಪ್ರಸಿದ್ಧ ರೆಡ್‌ ಕಾರ್ಪೆಟ್‌ ಈವೆಂಟ್ ಗಳಲ್ಲೂ ಗಮನಿಸಬಹುದಾಗಿದೆ. ಅರ್ಧ ಸೀರೆಯ ಈ ಶೈಲಿ, ಸೀರೆ ಉಡುವ ಶೈಲಿಗಳಲ್ಲೇ ಹೆಚ್ಚು ಟ್ರೆಂಡಿ ಎನಿಸಿದೆ.

ಈ ಸ್ಟೈಲ್ ‌ಗಾಗಿ ನೀವು ಕಾಂಟ್ರಾಸ್ಟ್ ಕಲರ್‌ ನಲ್ಲಿ ಲೆಹಂಗಾ ಚೋಲಿ ಮತ್ತು ಒಂದು ಸೀರೆ ಆರಿಸಿಕೊಳ್ಳಿ. ಅದರಿಂದಾಗಿ ಅರ್ಧ ಸೀರೆಯ ಲುಕ್‌ ಬರುತ್ತದೆ.

ಮುಮ್ತಾಝ್ ಸೀರೆ

ದಶಕಗಳಾಚೆಯ ನಟಿ ಮುಮ್ತಾಝ್ ಫಂಕಿ ಸ್ಟೈಲ್ ಸ್ಟೇಟ್‌ ಮೆಂಟ್ಸ್ ಗೆ ಪ್ರಸಿದ್ಧಳಾಗಿದ್ದಳು. `ಆಜ್‌ ಕಲ್ ತೇರೆ ಮೇರೆ ಪ್ಯಾರ್‌ ಕೀ ಚರ್ಚೆ.....' ಹಾಡಿನಲ್ಲಿ ಅವಳುಟ್ಟಿದ್ದ ಸೀರೆಯ ಶೈಲಿ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಹೊಳೆಯು ಚಮಕ್‌ ನ ಬಾರ್ಡರ್‌ ಹಾಗೂ ಕೂಲ್ ‌ಡ್ರೇಪಿಂಗ್‌ ಸ್ಟೈಲ್‌, ರೆಟ್ರೋ ಲುಕ್ಸ್ ಗೆ ಹೆಚ್ಚಿನ ಬೇಡಿಕೆ ಇದೆ. ಇಂದಿನ ತರುಣಿಯರು ಈಗಲೂ ಇದನ್ನು ಫಾಲೋ ಮಾಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ