ಸ್ಮಿತಾ ತನ್ನ ಮದುವೆ ರಿಸೆಪ್ಶನ್ ನಲ್ಲಿ ಬಹಳ ಆಕರ್ಷಕವಾಗಿ ಕಾಣುತ್ತಿದ್ದಳು. ಅವಳ ಮೇಕಪ್ ಮತ್ತು ಡ್ರೆಸ್ ಅವಳ ಸೌಂದರ್ಯ ಇಮ್ಮಡಿಸಲು ಕಾರಣವಾಗಿತ್ತು. ಹೀಗಾಗಿ ಎಲ್ಲರೂ ಹೊಗಳುವವರೇ! ಮದುವೆಯಾದ 2 ವಾರಗಳ ನಂತರ ಸ್ಮಿತಾ ಗಂಡನೊಂದಿಗೆ ಅವನ ಗೆಳೆಯರ ಒಂದು ಪಾರ್ಟಿಗೆ ಹೋಗಬೇಕಿತ್ತು. ಅಲ್ಲಿಗೆ ಅವಳು ತನ್ನ ಹೆವಿ ಬ್ರೈಡಲ್ ಡ್ರೆಸ್ ನಲ್ಲಿ ಹೋದಳು, ಅದು ಭಾರಿ ಅನಾನುಕೂಲ ಎನಿಸಿತ್ತು. ಸ್ಮಿತಾಳ ಸಹೋದ್ಯೋಗಿಗಳ ಇನ್ನೊಂದು ಪಾರ್ಟಿಗೆ ಅವಳು ಈ ಬಾರಿ ಬಲು ಸಿಂಪಲ್ ಸೀರೆ ಉಟ್ಟುಹೋದಳು. ಅದನ್ನು ನೋಡಿ ಅಲ್ಲಿದ್ದವರಿಗೆ ಇವಳೇನಾ 2 ವಾರಗಳ ನವ ವಧು ಎಂಬಷ್ಟು ಅದು ಸಾಧಾರಣ ಆಗಿಹೋಗಿತ್ತು. ಇಂಥ ತೊಂದರೆ ಹೊಸದಾಗಿ ಮದುವೆಯಾದ ಹುಡುಗಿಯರನ್ನು ಕಾಡುತ್ತಿರುತ್ತದೆ.
ಬ್ರೈಡಲ್ ಡ್ರೆಸ್ ನ್ನು ಸಾಧಾರಣ ಪಾರ್ಟಿಗಳಿಗೆ ಧರಿಸಿದರೆ ಹೆವಿ ಎನಿಸುತ್ತದೆ. ಮದುವೆ ನಂತರ ವಧು ಧರಿಸುವ ಮಾಮೂಲಿ ಡ್ರೆಸ್ ಬಗ್ಗೆ ಯೋಚಿಸುವುದೇ ಇಲ್ಲ. ಮದುವೆಗಾಗಿ ಭಾರಿ ಗ್ರಾಂಡ್ ಡ್ರೆಸ್ ಗಳ ಶಾಪಿಂಗ್ ನಡೆಯುತ್ತದೆ. ಅದರಲ್ಲಿ ಪೋಸ್ಟ್ ವೆಡ್ಡಿಂಗ್ ಡ್ರೆಸ್ ಬಗ್ಗೆ ಪ್ರಸ್ತಾಪ ಇರುವುದಿಲ್ಲ. ಹೀಗಾಗಿ ನವ ವಧು ಮುಂದೆ ಇಂಥ ಅಭ್ಯಾಸಗಳನ್ನು ಎದುರಿಸಬೇಕಾಗುತ್ತದೆ. ನಂತರದ ಉಡುಗೆಗಳಿಗಾಗಿ ಭಾರಿ ಖರ್ಚು ಬೇಕಿಲ್ಲ. ಇದಕ್ಕಾಗಿ 5 ಮುಖ್ಯ ವಸ್ತುಗಳು ಬೇಕು. ಇದರಿಂದ ಅವಳು ಪಾರ್ಟಿಗಳಲ್ಲಿ ವಿಭಿನ್ನ ಲುಕ್ಸ್ ಗಳಿಸುತ್ತಾಳೆ.
ಹೆವಿ ಕಸೂತಿಯ ದುಪಟ್ಟಾ
ಭಾರಿ ಕಸೂತಿಯ ಸೀರೆ ಎಲ್ಲ ಸಂದರ್ಭಕ್ಕೂ ಒಗ್ಗದು. ಇದು ನಡೆದಾಡಲಿಕ್ಕೂ ಹಿತಕರಲ್ಲ. ಹೀಗಾಗಿ ಹೆವಿ ಕಸೂತಿಯ ದುಪಟ್ಟಾ ಕೊಂಡರೆ ಲೇಸು. ಇದನ್ನು ಸ್ಟೋಲ್ ತರಹ ಯಾವುದೇ ಸೀರೆಯ ಮೇಲೆ ಬಳಸಿಕೊಳ್ಳಿ. ಪ್ರತಿ ಸೀರೆಯ ಜೊತೆ ಈ ಹೊಸ ಲುಕ್ ಜನರನ್ನು ಬೆರಗಾಗಿಸುತ್ತದೆ.
ರೆಡಿಮೇಡ್ ಸೀರೆ ಮದುವೆ ನಂತರ ಬಗೆಬಗೆಯ ಪಾರ್ಟಿ, ಜನ ತಮ್ಮ ಮನೆಗಳಿಗೆ ಔತಣಕ್ಕೆ ಕರೆಯುವುದು ಇರುತ್ತದೆ. ಮನೆಗೆಲಸಗಳ ಮಧ್ಯೆ ಸೀರೆ ಸಂಭಾಳಿಸುವುದು ಕಷ್ಟ. ನವ ವಧು ಉತ್ತಮ ಡ್ರೆಸ್ ಧರಿಸದಿದ್ದರೆ ಹೇಗೆ? ಹೀಗಾಗಿ ರೆಡಿಮೇಡ್ ಸೀರೆ ಉಟ್ಟು ಅವಳು ಓಡಾಡುವುದೇ ಸೂಕ್ತ. ಇದನ್ನು ಧರಿಸುವುದೂ ಸುಲಭ. ನೆರಿಗೆ ಹಿಡಿದು, ಸಂಭಾಳಿಸುವ ತಲೆನೋವು ಇಲ್ಲ. ಕೆಲವಕ್ಕೆ ಬೇರೆಯದೇ ಸ್ಟಿಚೆಬಲ್ ಸೆರಗು ಸಹ ಲಭ್ಯ. ಪ್ರತಿ ದಿನ ಸೆರಗು ಬದಲಾಯಿಸುತ್ತಾ, ಹೊಸ ಸೀರೆಯ ಗೆಟಪ್ ತೋರಿಸಿ. ಕಸೂತಿಯ ಸೊಂಟದಪಟ್ಟಿ ಹೊಸ ಸೊಸೆ ನವ ವಧುವಾಗಿ ಸದಾ ಬೆಳ್ಳಿ ಸೊಂಟದಪಟ್ಟಿ ಧರಿಸಿ ಓಡಾಡುವುದು ಕಷ್ಟ. ಹೀಗಾಗಿ ಕಸೂತಿಗೊಳಿಸಿದ್ದನ್ನು ಬಳಸಿರಿ. ಇದು ಆ್ಯಕ್ಸೆಸರೀಸ್ ಕೆಲಸವನ್ನೂ ನಿಭಾಯಿಸುತ್ತದೆ. ಇದನ್ನು ಸೀರೆ ಅಥವಾ ಯಾವುದೇ ಡ್ರೆಸ್ ನೊಂದಿಗೂ ಧರಿಸಬಹುದು. ಇದರ ಅಗಲ 3-10 ಇಂಚು ಇರುತ್ತದೆ.
ಕಸೂತಿಯ ಕುರ್ತಿ ಸೀರೆ, ಲೆಹಂಗಾ, ಲಾಚಾ, ಲಾಂಗ್ ಸ್ಕರ್ಟ್ ಮೇಲೆ ಕಸೂತಿಯ ಕುರ್ತಿ ಧರಿಸಿ, ನಿಮ್ಮ ಲುಕ್ಸ್ ನ್ನು ಸ್ಪೆಷಲ್ ಗೊಳಿಸಿರಿ. ಇದು ಸೊಂಟದವರೆಗೂ ಉದ್ದಕ್ಕಿರುತ್ತದೆ. ಸಂಕೋಚವಿಲ್ಲದೆ ಧರಿಸಿ.