ಹೆಣ್ಣಿನ ಜೀವನದಲ್ಲಿ ಮದುವೆ ಅತಿ ವಿಶೇಷ ಪಾತ್ರ ವಹಿಸುತ್ತದೆ. ಮದುಮಕ್ಕಳಿಗೆ ಪರಸ್ಪರ ಚಿಂತೆಯಾದರೆ, ಬಂದವರಿಗೆ ಊಟದ ಚಿಂತೆ ಎಂಬಂತೆ ಎಲ್ಲರೂ ಇದರಲ್ಲಿ 100% ತಲ್ಲೀನರಾಗುತ್ತಾರೆ. ಮದುವೆಗೆ ಬಂದ ಪ್ರತಿಯೊಬ್ಬ ಮಹಿಳೆ ತಾನು ಅತಿ ಸುಂದರವಾಗಿ ಕಂಗೊಳಿಸಬೇಕೆಂದು ಪ್ರಯತ್ನಿಸುತ್ತಾಳೆ.
ಆದರೆ ಈ ಕೋವಿಡ್ ಕೊರೋನಾ ಕಾಟದಿಂದಾಗಿ ಮೊದಲಿನಷ್ಟು ಆಡಂಬರ, ಪ್ರದರ್ಶನ, ಜನಜಂಗುಳಿ ಇಲ್ಲ. ಎಲ್ಲವೂ ಹಿತಮಿತವಾಗಿ, ಇರುದರಲ್ಲಿ ಕ್ಲುಪ್ತವಾಗಿ ನಡೆಯಬೇಕಿದೆ. ಆದರೆ ಜನ ತಮ್ಮ ಉತ್ಸಾಹ, ಸಡಗರ, ಸಂಭ್ರಮಗಳ ಜೊತೆ ಕಾಂಪ್ರಮೈಸ್ ಆಗುವುದಿಲ್ಲ ಎಂಬುದು ನಿಶ್ಚಿತ.
`ನ್ಯೂ ನಾರ್ಮಲ್' ಎಂಬ ಈ ಸ್ಥಿತಿಯಲ್ಲಿ ವರ್ಚುವಲ್ ವೆಡ್ಡಿಂಗ್, ಕಡಿಮೆ ಅತಿಥಿಗಳು ಹಾಗೆಂದು ಬಂದ ಜನರೆದುರು ಯಾವುದೋ ಸುಮಾರಾದ ಡ್ರೆಸ್ ಧರಿಸಲು ಸಾಧ್ಯವೇ? ನವ ವಧು ಅಥವಾ ಅವಳ ಸಖಿಯರೇ ಇರಲಿ, ನೇರ ಬಂದಿರುವಾಗ ಯಾವ ರೀತಿಯ ಡ್ರೆಸ್ಸಿಂಗ್ ಸೆನ್ಸ್ ಇರಬೇಕೆಂದು ತಜ್ಞರಿಂದ ಕೇಳಿ ತಿಳಿಯೋಣವೇ? ಈ ಟ್ರೆಂಡ್ ಅನುಸರಿಸಿ ನೀವು ಮದುವೆಗಳಲ್ಲಿ ಮಿರಿಮಿರಿ ಮಿಂಚಬಹುದು.
ಏನಾದರೂ ಹೊಸತಿರಲಿ
ನೀವು ಅನೂಹ್ಯ ಮಿಕ್ಸ್ ಮ್ಯಾಚ್ ಡ್ರೆಸೆಸ್ ನಿಂದ ನಿಮ್ಮ ವಾರ್ಡ್ ರೋಬಿಗೆ ಹೊಸ ಟಚ್ ಕೊಡಿ. ಕಡಿಮೆ ಹಣದಲ್ಲಿ ಉತ್ತಮ ಉಡುಗೆ ಕೊಂಡು ನಿಮ್ಮ ಲುಕ್ಸ್ ಗೆ ಹೊಸ ಟಚ್ ನೀಡಿ. ಸ್ಯಾರಿ ಡ್ರೇಪಿಂಗ್ ನ ಹೊಸ ಹೊಸ ವಿಧಾನ ಅನುಸರಿಸಿ ಅಥವಾ ಡ್ರೇಪ್ ನ್ನು ಹೊಸ ಸ್ಟೈಲಿಂಗ್ ನಲ್ಲಿ ಸಿಂಗರಿಸಿ, ನೀವು ಬೇರೆ ಸ್ಟೈಲ್ ಸ್ಟೇಟ್ ಮೆಂಟ್ ನೀಡಬಹುದು. ಹೀಗೆ ಫ್ಯಾಷನ್ನಿಗೆ ಹೊಸ ಟ್ವಿಸ್ಟ್ ನೀಡಬಹುದು.
ಡ್ರಮಾಟಿಕ್ ಸ್ಲೀವ್ಸ್
ಈ ಸೀಸನ್ ನಲ್ಲಿ ಡ್ರಮಾಟಿಕ್ ಸ್ಲೀವ್ಸ್ ಫ್ಯಾಷನ್ ನಲ್ಲಿ ಇನ್. ಇದರಲ್ಲಿ ಧಾರಾಳ ಉದ್ದನೆ ಬೆಲ್‌ಶೇಪ್, ಫ್ಲೌಸಿ, ಫುಲ್ ಸ್ಲೀವ್ಸ್ ಟ್ರೆಂಡ್ ನಲ್ಲಿದೆ. ನೀವು ನಿಮ್ಮ ಸೀರೆ ಯಾ ಲೆಹಂಗಾದ ಬ್ಲೌಸ್ ನಲ್ಲಿ, ಇಂಥ ಸ್ಪೆಷಲ್ ಸ್ಲೀವ್ ಮಾಡಿಸಿಕೊಳ್ಳಿ, ಫ್ಯಾಷನ್ ದೀವಾ ಎನಿಸಿರಿ. ನಿಮ್ಮ ಬೆಸ್ಟ್ ಫ್ರೆಂಡ್ ಮದುವೆಗೆ ಹೀಗೆ ಸಿಂಗರಿಸಿಕೊಂಡು ಪುಟ್ಟಕ್ಕನಾಗಿ ಹೊರಟು, ಎಲ್ಲರ ಗಮನ ಸೆಳೆಯಿರಿ.
ಮಾಸ್ಕ್ ಇದ್ದರೂ ಅಡ್ಡಿಯಿಲ್ಲ
ಸುರಕ್ಷತೆ, ಹೈಜೀನ್ ದೃಷ್ಟಿಯಿಂದ ಇತ್ತೀಚೆಗೆ ಎಲ್ಲಾ ಸಮಾರಂಭಕ್ಕೂ ಮಾಸ್ಕ್ ಕಡ್ಡಾಯವಾಗಿದೆ. ವಧೂ ವರರಿಂದ ಹಿಡಿದು ಬಂದ ಅತಿಥಿಗಳು, ಬಂಧುಬಳಗ ಎಲ್ಲಾ ಮಾಸ್ಕ್, ಫೇಸ್ ಶೀಲ್ಡ್, ಕೈಗವಸು, ಸ್ಯಾನಿಟೈಸರ್ ಇಲ್ಲದೆ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಎಷ್ಟೇ ಜನ ಬಂದಿರಲಿ ಸೋಶಿಯಲ್ ಡಿಸ್ಟೆನ್ಸಿಂಗ್ ಬಗ್ಗೆ ಕಾಳಜಿ ಇರಲಿ.
ನಿಮಗಾಗಿ, ನಿಮ್ಮವರಿಗಾಗಿ ಮಾಸ್ಕ್ ಕಡ್ಡಾಯ ಧರಿಸಿರಿ. ಇದಕ್ಕಾಗಿ ಮಾಸ್ಕ್ ನ್ನು ಫ್ಯಾಷನೆಬಲ್ ಸ್ಟೈಲಿಶ್ ಆಗಿಸಿಕೊಳ್ಳಿ. ಜೊತೆಗೆ ದಂಪತಿಗಳು ತಮ್ಮ ಉಡುಗೆಗೆ ತಕ್ಕಂತೆ ಮಾಸ್ಕ್ ನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ಆ್ಯಕ್ಸೆಸರೀಸ್, ಕಸೂತಿ, ಹೆಸರಿನ ಇನಿಶಿಯಲ್ಸ್, ಇತರ ಪ್ರಿಂಟ್ಸ್ ಅಳವಡಿಸಿ. ಇದು ಸುರಕ್ಷತೆ ಜೊತೆ ನಿಮಗೆ ಫ್ಯಾಷನ್ ಸ್ಟೇಟ್ ಮೆಂಟ್ ಸಹ ಆಗುತ್ತದೆ.