ಭಾರತೀಯ ಭವ್ಯ ಸಂಸ್ಕೃತಿಯ ಪ್ರತೀಕವಾಗಿರುವ ರೇಷ್ಮೆ ಸೀರೆಗೆ ಯಾವುದೂ ಸರಿಸಾಟಿ ಇಲ್ಲ! ನವ ವಧು ತನ್ನ ಮದುವೆಗೆ ಬೇಕಾಗುವಂಥ ವಿವಿಧ ಬಗೆಯ ರೇಷ್ಮೆ ಸೀರೆಗಳನ್ನು ಆರಿಸಿಕೊಳ್ಳುವುದು ಹೇಗೆ ಮತ್ತು ಅವುಗಳ ವೈವಿಧ್ಯತೆಗಳ ಬಗ್ಗೆ ಸಂಪೂರ್ಣ ವಿವರ ತಿಳಿಯೋಣವೇ.......?

ನೀರೆಯರ ಭವ್ಯ ಪಾರಂಪರಿಕ ಉಡುಗೆಯ ಪ್ರತೀಕ ಸೀರೆ. ಇದು ಭಾರತೀಯ ನಾರಿಯ ಅಚ್ಚುಮೆಚ್ಚಿನ ಹಾಗೂ ಆಕರ್ಷಕವಾದ ಉಡುಪುಗಳಲ್ಲಿ ಒಂದು. ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಸೀರೆಗಳ ಪಾತ್ರ ಹಿರಿದು. ಸೀರೆಗೆ ಐದು ಸಾವಿರ ವರ್ಷಗಳ ಇತಿಹಾಸವಿದ್ದು, ಇದು ಸಿಂಧೂ ನದಿಯ ನಾಗರಿಕತೆಯ ಸಮಯದಿಂದರೂ ಚಾಲ್ತಿಯಲ್ಲಿತ್ತು ಎಂದು ನಂಬಲಾಗಿದೆ. ಹತ್ತಿ ಹಿಂಜಿ ಮಹಿಳೆಯರಿಗಾಗಿ ಸತ್ತಿಕಾ ಎಂಬ ಉಡುಪನ್ನು ನೀಡುತ್ತಿದ್ದರು. ಅದರಲ್ಲಿ ಅಂತರೀಯ, ಉತ್ತರೀಯ ಹಾಗೂ ಸ್ತನ ಪಟ್ಟಿ ಎಂಬ ಮೂರು ತುಂಡುಗಳಿದ್ದವು.

ಸೀರೆಯೊಂದಿಗೆ ಹೆಣ್ಣು ಮಕ್ಕಳ ಬದುಕು ತಳುಕು ಹಾಕಿಕೊಂಡಿರುತ್ತದೆ. ತವರಿಗೆ ಬರುವ ಹೆಣ್ಣುಮಕ್ಕಳಿಗೆ ಸೀರೆ ಉಡಿಸಿ ಕಳಿಸುವ ಪದ್ಧತಿ ಇದೆ. ಋತುಮತಿಯಾದಾಗ, ನಿಶ್ಚಿತಾರ್ಥ, ಮದುವೆ, ಸೀಮಂತ, ಕೊನೆಗೆ ಅಂತಿಮ ಸಂಸ್ಕಾರದ ಸಮಯದಲ್ಲೂ ತವರಿನ ಸೀರೆ ಜೊತೆಯಲ್ಲಿ ಬರುವುದು. ಈ ಫ್ಯಾಷನ್‌ ಫಾರ್ವರ್ಡ್ ಯುಗದಲ್ಲಿ ಉಡುಗೆತೊಡುಗೆಯ ಸ್ಟೈಲ್ ‌ಕೂಡ ದೊಡ್ಡ ಪ್ರಮಾಣದಲ್ಲಿ ಬದಲಾಗುತ್ತಿರುತ್ತದೆ. ಕಾಲ ಎಷ್ಟೇ ಬದಲಾದರೂ ನೀರೆಗೆ ಸೀರೆಯ ಮೇಲಿನ ವ್ಯಾಮೋಹ ಕ್ಷೀಣಿಸದು. ಸೀರೆಗಳಲ್ಲೇ ವಿವಿಧ ಪ್ರಯೋಗಗಳನ್ನು ಮಾಡಿ ಟ್ರೆಂಡ್‌ ಗೆ ತಕ್ಕಂತೆ ಅದನ್ನು ಬದಲಾಯಿಸಿಕೊಳ್ಳುವರು.

ಸೀರೆಗಳಲ್ಲಿ ಜಾರ್ಜೆಟ್‌, ಶಿಫಾನ್‌, ಕ್ರೇಪ್‌, ಟಸ್ಸರ್‌, ಕಾಟನ್‌ ಹೀಗೆ ನಾರ್ಮಲ್ ವೇರಿಗೆ ಅನೇಕ ಬಗೆಯ ಸೀರೆಗಳು ಯುವತಿಯರನ್ನು ಆಕರ್ಷಿಸುತ್ತವೆ. ಇವನ್ನು ಮೈಸೂರು ಸಿಲ್ಕ್, ಕಾಂಜೀರಂ, ಮೊಳಕಾಲ್ಮೂರು, ಇಳಕಲ್, ಧರ್ಮಾವರಂ, ಪೈಠಣಿ, ಬನಾರಸ್‌, ಉಪ್ಪಾಡ ಕಟ್ಟು ಹೀಗೆ ಜರಿಯೊಂದಿಗೆ ರಾಯಲ್ ಲುಕ್‌ ಇರುವ ರೇಷ್ಮೆ ಸೀರೆಗಳು ಮದುವೆ ಸಮಾರಂಭಗಳಲ್ಲಿ ಬಳಸಲ್ಪಡುತ್ತವೆ. ಇತ್ತೀಚಿನ ದಿನಗಳಲ್ಲಿ ಕೆಲವು ಯುವತಿಯರು ನಿಶ್ಚಿತಾರ್ಥ ಹಾಗೂ ರಿಸೆಪ್ಷನ್‌ ಗಳಲ್ಲಿ ಉತ್ತರದವರಂತೆ ಲೆಹೆಂಗಾ ಧರಿಸಲು ಬಯಸಿದರೂ, ಮದುವೆ ಮುಹೂರ್ತಕ್ಕೆ ಸಾಂಪ್ರದಾಯಿಕ ರೇಷ್ಮೆ ಸೀರೆಯೇ ಎಲ್ಲರ ಆಯ್ಕೆಯಾಗಿರುತ್ತದೆ.

Image_1663820074

ರೇಷ್ಮೆ ಸೀರೆ ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಸೀರೆಗಳ ವಿನ್ಯಾಸ ವಿಭಿನ್ನವಾಗಿದ್ದರೂ ಪ್ರತಿಯೊಂದೂ ಆಕರ್ಷಕ, ಅನನ್ಯ. ಕರ್ನಾಟಕದ ಮೈಸೂರು ಸಿಲ್ಕ್ ಸೀರೆ, ಇಳಕಲ್ ಸೀರೆ, ಮೊಳಕಾಲ್ಮೂರು ಸಿಲ್ಕ್ ಸೀರೆ, ಕೇರಳದ ಬಕಾರಾಂಪುರ ಸೀರೆ, ತೆಲಂಗಾಣದ ಗಡ್ವಾಲಾ ಸಿಲ್ಕ್, ಪೋಚಂಪಲ್ಲಿ, ಧರ್ಮಾವರಂ, ತಮಿಳುನಾಡಿನ ಕಾಂಜೀವರಂ, ಆರಣಿ, ಮದುರೈ ಸೀರೆ,  ಚೆಟ್ಟಿನಾಡು, ವಿನ್ನಲಪತ್ತಿ ಸೀರೆ, ಕೊಯಂಬತ್ತೂರು ಸೀರೆ, ಮಧ್ಯಪ್ರದೇಶದ ಚಂದ್ರಗಿರಿ ಸೀರೆ, ಮಹೇಶ್ವರಿ ಸೀರೆ, ಮಹಾರಾಷ್ಟ್ರದ ಪೈಠಣಿ ಸೀರೆ, ನಲ್ವಾರಿ ಸೀರೆ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುವುದು......

0_Image_1663819571

ಮೈಸೂರು ರೇಷ್ಮೆ ಸೀರೆಗಳು

ಕನ್ನಡ ನಾಡಿನಲ್ಲಿ ಅಧಿಪತ್ಯ ಸಾಧಿಸಿರುವ ಸೀರೆ ಎಂದರೆ ಮೈಸೂರು ಸಿಲ್ಕ್ ಸೀರೆಗಳು. ಮೈಸೂರು ಸಿಲ್ಕ್ ಸೀರೆಯ ವೈಶಿಷ್ಟ್ಯ ಎಂದರೆ ದೂರದಿಂದಲೇ ಕಾಣುವ ಅದರ ಹೊಳಪು, ಶುದ್ಧ ರೇಷಿಮೆಯ ಮೃದುತ್ವ ಹಾಗೂ ದೀರ್ಘಕಾಲಿಕ ಬಾಳಿಕೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ