ರೂಪಾ ವಾರ್ಡ್ ರೋಬ್ ತೆರೆದು ಚಿಂತಿಸುತ್ತಾ ನಿಂತಿದ್ದಳು. ಅವಳು ಮರುದಿನ ನ್ಯೂ ಇಯರ್ ಪಾರ್ಟಿಗಾಗಿ ತನ್ನ ಗೆಳತಿಯ ಮನೆಗೆ ಹೋಗುವವಳಿದ್ದಳು. ಆದರೆ ಅವಳಿಗೆ ಯಾವ ಡ್ರೆಸ್ ಧರಿಸಲಿ ಎಂದು ತಿಳಿಯಲಿಲ್ಲ. ಚಳಿಗಾಲವಾದ್ದರಿಂದ ಸ್ಲೀವ್ ಲೆಸ್ ಧರಿಸಲಾಗದು. ಮತ್ಯಾವುದು ಎಂದು ಯೋಚಿಸುತ್ತಿದ್ದರೆ, ಆಗ ಅಲ್ಲಿಗೆ ಬಂದ ರಾಹುಲ್ ಅವಳನ್ನು ಅಣಕಿಸಿದ, ``ಬೀರುವಿನ ತುಂಬ ಬಟ್ಟೆ ಇಟ್ಟುಕೊಂಡಿದ್ದೀಯಾ ಬಿಡು, ನಿನಗೆ ಸದಾ ಇದೇ ಸಮಸ್ಯೆ.''
ರೋಹಿಣಿಯದೂ ಕೊಂಚ ಇಂತಹದೇ ಪರಿಸ್ಥಿತಿ. ಅವಳ ಮನೆಯವರು ಅವಳನ್ನು ರೇಗಿಸುವುದೇನೆಂದರೆ, ಮನೆಯವರೆಲ್ಲ ಅವಳ ಬಟ್ಟೆಗಳ ಮೇಲೆ ಮಲಗುತ್ತಾರೆ ಎಂದು. ಆದರೆ ಮನೆಯಲ್ಲಿನ ಬಾಕ್ಸ್ ವುಳ್ಳ ಮಂಚಗಳಿಲ್ಲ ಅವಳ ಬಟ್ಟೆಗಳೇ ತುಂಬಿವೆ.
ಸೀಮಾ ತನ್ನ ಅಣ್ಣ ಏರ್ಪಡಿಸಿದ್ದ ನ್ಯೂ ಇಯರ್ ಪಾರ್ಟಿಗಾಗಿ ಒನ್ ಪೀಸ್ ಡ್ರೆಸ್ ಆಯ್ಕೆ ಮಾಡಿಕೊಂಡಳು. ತಾನು ಇತರರಿಗಿಂತ ವಿಶೇಷವಾಗಿ ಕಾಣುವೆನೆಂದು ಅವಳು ಭಾವಿಸಿದರೆ, ಪಾಪ ಎಲ್ಲರ ಹಾಸ್ಯಕ್ಕೆ ಗುರಿಯಾದಳು. ಅದೇ ರೇಷ್ಮಾ, ಹಳೆಯ ಬನಾರಸ್‌ಸೀರೆಯಿಂದ ಒಂದು ನವೀನ ಮಾದರಿಯ ಚೂಡಿದಾರ್ ಹೊಲಿಸಿಕೊಂಡಳು. ಇದರಿಂದ ಹಳೇ ಸೀರೆ ಮರುಬಳಕೆಗೆ ಬಂದಿತು ಮತ್ತು ಒಂದು ಹೊಸ ಡ್ರೆಸ್ ದೊರೆತಂತಾಯಿತು.
ಮಹಿಳೆಯರಿಗೆ ಬಟ್ಟೆ ಕೊಳ್ಳುವುದೆಂದರೆ ಬಲು ಆಸಕ್ತಿ. ಇದರಿಂದ ಅವರ ವಾರ್ಡ್ ರೋಬ್ ನಲ್ಲಿ ಅದೆಷ್ಟು ಬಟ್ಟೆಗಳು ತುಂಬಿಕೊಳ್ಳುವುದೆಂದರೆ ಅವುಗಳಲ್ಲಿ ಶೇ.60 ರಷ್ಟು ಉಡುಪುಗಳು ಮಾತ್ರ ಉಪಯೋಗಿಸಲ್ಪಟ್ಟಿರುತ್ತವೆ. ಆಗ ಅವರಿಗೆ ಬಟ್ಟೆ ಕೊಳ್ಳುವ ಮುನ್ನ ಯೋಚಿಸಬೇಕಾಗಿತ್ತು ಅನ್ನಿಸುತ್ತದೆ.
ಬುದ್ಧಿವಂತಿಕೆಯಿಂದ ಶಾಪಿಂಗ್ ಮಾಡಿ ಮಹಿಳೆಯರು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಶಾಪಿಂಗ್ ಮಾಡಿದರೆ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.
ನೀವು ಗೃಹಿಣಿಯಾಗಿರಲಿ ಅಥವಾ ಉದ್ಯೋಗಸ್ಥೆಯಾಗಿರಲಿ ವೆಸ್ಟರ್ನ್ ಡ್ರೆಸ್ ಧರಿಸಲು ಇಷ್ಟಪಡುವಿರಾದರೆ, ನಿಮ್ಮ ವಾರ್ಡ್ ರೋಬ್ ನಲ್ಲಿ ಒಂದು ಬ್ಲೂ ಜೀನ್ಸ್, ವೈಟ್ ಶರ್ಟ್ ಮತ್ತು ಬ್ಲ್ಯಾಕ್ ಟೀ ಶರ್ಟ್ ನ್ನು ಅವಶ್ಯವಾಗಿ ಇರಿಸಿಕೊಂಡಿರಿ. ಜೀನ್ಸ್ ಕೊಳ್ಳುವಾಗ ಫ್ಯಾಷನ್ ಬದಲು ನಿಮ್ಮ ವಯಸ್ಸು ಮತ್ತು ಮೈಕಟ್ಟನ್ನು ಗಮನದಲ್ಲಿರಿಸಿಕೊಳ್ಳಿ.
ನಿಮಗೆ ಶರ್ಟ್ ಮತ್ತು ಟೀ ಶರ್ಟ್ ಇಷ್ಟವಿಲ್ಲದಿದ್ದರೆ ಒಂದು ಬಿಳಿ ಮತ್ತು ಒಂದು ಕಪ್ಪು ಬಣ್ಣದ ಕುರ್ತಾಗಳನ್ನು ಇರಿಸಿಕೊಳ್ಳಿ. ಅವುಗಳನ್ನು ನೀವು ಯಾವುದೇ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಧರಿಸಬಹುದು. ಈ ಬಣ್ಣಗಳು ಶೇ.98 ಮಹಿಳೆಯರಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ.
ಜೀನ್ಸ್ ಗೆ ಕೊಂಚ ಎಥ್ನಿಕ್ ಲುಕ್ ನೀಡಲು ಬಯಸಿದರೆ, ಒಂದು ಸ್ಟೋಲ್ ನ್ನು ಇರಿಸಿಕೊಳ್ಳಿ. ಇದನ್ನೂ ಕುರ್ತಾ ಮತ್ತು ಸ್ಕರ್ಟ್ ಗಳ ಜೊತೆಗೆ ಬಳಸಬಹುದು.
ನಿಮ್ಮ ವಾರ್ಡ್ ರೋಬ್ ನಲ್ಲಿ ಹತ್ತಾರು ಅಗ್ಗವಾದ ಸ್ಟೋಲ್ ಗಳನ್ನು ಇರಿಸಿಕೊಳ್ಳುವ ಬದಲು ಕೆಲವು ಒಳ್ಳೆಯ ಬೆಲೆ ಬಾಳುವ ಸ್ಟೋಲ್ ಅಥವಾ ದುಪಟ್ಟಾಗಳನ್ನು ಇರಿಸಿಕೊಂಡರೆ ಯಾವುದೇ ಕಾರ್ಯಕ್ರಮಕ್ಕೂ ಬಳಸಬಹುದು.
ಒನ್ ಪೀಸ್ ಡ್ರೆಸ್ ಎಲ್ಲ ಮಹಿಳೆಯರಿಗೂ ಹೊಂದುವುದಿಲ್ಲ. ನಿಮ್ಮದು ಸಪೂರವಾದ ಮೈಕಟ್ಟಾದರೆ ಲಾಂಗ್ ಒನ್ ಪೀಸ್ ಕೊಳ್ಳಬಹುದು. ಅದರೊಂದಿಗೆ ಲಾಂಗ್ ಡ್ಯಾಂಗ್ಲರ್ಸ್ ಇದ್ದರೆ ನಿಮಗೆ ಕ್ಲಾಸಿಕಲ್ ಲುಕ್ ಜೊತೆಗೆ ಸೆಕ್ಸೀ ಲುಕ್ ಸಹ ಸಿಗುತ್ತದೆ. ಈ ಡ್ರೆಸ್ ಹಾಕಿಕೊಂಡಾಗ ನಿಮ್ಮ ಮೈಮಾಟದತ್ತ ಎಲ್ಲರ ಗಮನವಿರುತ್ತದೆ. ನಿಮಗೆ ಬೊಜ್ಜು ಇದ್ದರೆ ಅದು ಎದ್ದು ಕಾಣುತ್ತದೆ. ಆದ್ದರಿಂದ ಹಾಗಿರುವಾಗ ಇಂತಹ ಡ್ರೆಸ್‌ಕೊಳ್ಳಲೇಬೇಡಿ.