ಇಂದಿಗೂ ಸಹ ಪಾರ್ಟಿವೇರ್‌ಗಳಲ್ಲಿ ಸೀರೆ ಪ್ರಧಾನ ಪಾತ್ರ ವಹಿಸುತ್ತದೆ. ಆದರೆ ಚಳಿಗಾಲದಲ್ಲಿ ಇದು ಚಳಿಯ ಕಾಟ ಎದುರಿಸಲು ತುಸು ಕಷ್ಟಕರ. ಹೀಗಾದಾಗ ಎಷ್ಟೋ ಸಲ ಸೀರೆಯುಟ್ಟು ಪಾರ್ಟಿಗೆ ಹೊರಡಬೇಕೆನ್ನುವ ಹೆಂಗಸರು ಚಳಿಯ ಹಿಂಸೆ ಎದುರಿಸಬೇಕಾಗುತ್ತದೆ. ಈ ತೊಂದರೆ ನಿವಾರಿಸಲೆಂದೇ ಫ್ಯಾಷನ್‌ ಡಿಸೈನರ್ಸ್‌ ಫ್ಯಾಷನೆಬಲ್ ಜ್ಯಾಕೆಟ್ಸ್ ರೂಪಿಸಿದ್ದಾರೆ. ಇದನ್ನು ಸೀರೆ ಮೇಲೆ ಧರಿಸಬಹುದು. ಈ ಜ್ಯಾಕೆಟ್‌, ಸೀರೆ ಹಾಗೂ ಡಿಸೈನರ್‌ ಬ್ಲೌಸ್‌ನ್ನು ಮರೆಮಾಚುವುದಿಲ್ಲ, ಬದಲಿಗೆ ಅದರ ಬ್ಯೂಟಿಯನ್ನು ಮತ್ತಷ್ಟು ಎತ್ತಿತೋರುತ್ತದೆ. ಈ ಜ್ಯಾಕೆಟ್‌, ಲಾಂಗ್‌ ಕೋಟ್‌ ತರಹ ಮಂಡಿಯವರೆಗೂ ಹೋಗುತ್ತದೆ. ಸೀರೆಗೆ ಮ್ಯಾಚ್‌ ಆಗುವಂಥ ಇದು, ಫ್ಯಾಷನ್ನಿನ ಹೊಸ ಟ್ರೆಂಡ್‌ ಎನಿಸಲಿದೆ.

ಸ್ಪೆಷಲ್ ಡಿಸೈನರ್‌ ಜ್ಯಾಕೆಟ್‌

ಈ ಕುರಿತಾಗಿ ನಗರದ ಖ್ಯಾತ ಫ್ಯಾಷನ್‌ ಡಿಸೈನರ್ಸ್‌ ಅಭಿಪ್ರಾಯದಲ್ಲಿ, ಹಿಂದಿನಿಂದಲೂ ಸೀರೆ ಮೇಲೆ ಕೋಟ್‌ ಅಥವಾ ಓವರ್‌ಕೋಟ್‌ ಧರಿಸುವ ರೂಢಿ ಇದ್ದೇ ಇದೆ ಬಿಡಿ. ಕೋಟ್‌ ಅಥವಾ ಸ್ವೆಟರ್‌ನಿಂದಾಗಿ ಸೀರೆಯ ಸೊಬಗು ಮರೆಯಾಗುತ್ತಿತ್ತು. ಆಗ ಅದು ಪಾರ್ಟಿ ಡ್ರೆಸ್‌ ಅಂತ ಅನಿಸುವ ಬದಲು ಚಳಿಗೆ ಸ್ವೆಟರ್‌ ಧರಿಸಿದ್ದಾರೆ ಎಂದಷ್ಟೇ ಆಗುತ್ತದೆ. ಹೀಗಾಗಿ ಮಹಿಳೆಯರು ಇದನ್ನು ಪಾರ್ಟಿಗಳಿಗೆ ಧರಿಸಲು ನಿರಾಕರಿಸುತ್ತಾರೆ. ಕೊರೆಯುವ ಚಳಿ ಇರುವಾಗ ಕೇವಲ ಸೀರೆ ಬ್ಲೌಸ್‌ ಧರಿಸಿ ಹೋಗುತ್ತೇವೆ ಎನ್ನುವುದು ಸರಿಯಲ್ಲ. ಅದು ಹಿಂಸೆ ಅನಿಸುತ್ತದೆ. ಹೀಗಾಗಿ ಸೀರೆಯೊಂದಿಗಿನ ಈ ಸ್ಪೆಷಲ್ ಡಿಸೈನರ್‌ ಜ್ಯಾಕೆಟ್‌ ಹೊಸ ಟ್ರೆಂಡ್‌ ಆಗಿದೆ.

ಸೀರೆ ಜೊತೆ ಜ್ಯಾಕೆಟ್‌ ಸರಿಯಾಗಿ ಕ್ಯಾರಿ ಆಗಲಿ ಎಂಬ ಉದ್ದೇಶಕ್ಕಾಗಿ, ಜ್ಯಾಕೆಟ್‌ಗೆ ಸುಂದರ ಬೆಲ್ಟ್ ಸಹ ಅಳವಡಿಸಬಹುದಾಗಿದೆ. ಇದನ್ನು ಧರಿಸಿದ ಮೇಲೆ ಸೀರೆ, ಜ್ಯಾಕೆಟ್‌ ಇದ್ದರೂ ಇರಿಸುಮುರಿಸೆನ್ನದೆ ಫಿಗರ್‌ ಪರ್ಫೆಕ್ಟ್ ಆಗಿ ತೋರುತ್ತದೆ. ಈ ಜ್ಯಾಕೆಟ್‌  ಯಾವ ತರಹ ರೂಪಿಸಲಾಗಿರುತ್ತದೆ ಎಂದರೆ, ಇದನ್ನು ಧರಿಸಿದ ಮೇಲೆ ಸೀರೆ ಡಿಸೈನ್‌ ಮತ್ತು ಬ್ಲೌಸ್‌ನ ಕಟ್ಸ್ ಮರೆಯಾಗುವುದಿಲ್ಲ. ಜ್ಯಾಕೆಟ್‌ ರೂಪಿಸುವಲ್ಲಿ ಫ್ಯಾಬ್ರಿಕ್‌ ಸ್ಟಿಚ್‌, ಮೋಸ್ಟ್ ಫ್ಯಾಷನೆಬಲ್ ಮಾತ್ರವಲ್ಲದೆ, ವಿಂಟರ್‌ನ ಕೊರೆಯುವ ಚಳಿಕಾಟ ತಪ್ಪಬೇಕು.

ವಿಂಟರ್‌ ಸೀಸನ್‌ ನೋ ಟೆನ್ಶನ್‌!

ಸೀರೆ ಜೊತೆ ಧರಿಸುವ ಈ ಜ್ಯಾಕೆಟ್‌ ಫ್ಯಾಷನೆಬಲ್ ಲುಕ್ಸ್ ನೀಡುತ್ತವೆ. ಇದರ ದೊಡ್ಡ ವೈಶಿಷ್ಟ್ಯ ಎಂದರೆ, ಇದನ್ನು ಡಿಸೈನರ್‌ ಸಲ್ವಾರ್‌ ಕುರ್ತಾ ಮತ್ತು ಲಹಂಗಾಗಳ ಜೊತೆಯಲ್ಲೂ ಧರಿಸಬಹುದು. ಜ್ಯಾಕೆಟ್‌ನ ಕಲರ್‌ ಫ್ಯಾಬ್ರಿಕ್ಸ್ ಹೇಗೆ ರಿಚ್‌ ಆಗಿರುತ್ತವೆ ಎಂದರೆ, ಇದನ್ನು ಯಾವುದೇ ಬಗೆಯ ವಿಭಿನ್ನ ಬಣ್ಣಗಳ ಸೀರೆ, ಸಲ್ವಾರ್‌ಗಳೊಂದಿಗೆ ಧರಿಸಬಹುದು.

ಸೀರೆಯ ತರಹವೇ ಲಹಂಗಾ

ಜ್ಯಾಕೆಟ್‌ ಸಹ ಟ್ರೆಂಡ್‌ನಲ್ಲಿದೆ. ಹೀಗಿರುವಾಗ ಲಹಂಗಾ ಹಲವು ವಿಧದಲ್ಲಿ ಕೆಲಸಕ್ಕೆ ಬರುತ್ತದೆ. ಈ ಜ್ಯಾಕೆಟ್‌ನ್ನು ಅನಾರ್ಕಲಿ ಲಹಂಗಾ ಜೊತೆ ಸ್ಟೈಲ್ ಆಗಿ ಧರಿಸಬಹುದು. ಚೋಲಿ ಬಳಿ ಇದರ ಫಿಟಿಂಗ್‌ ವಿಶಿಷ್ಟವಾಗಿರುತ್ತದೆ. ಧರಿಸಿದವರ ಗ್ಲಾಮರ್‌ ಕೋಶಂಟ್‌ ಹೆಚ್ಚುತ್ತದೆ. ಇಂಡೋವೆಸ್ಟರ್ನ್‌ ಲಹಂಗಾ ಜೊತೆಯೂ ಇದನ್ನು ಧರಿಸಬಹುದು. ಅಂದ್ರೆ ಚಳಿ ಇದ್ದಾಗೆಲ್ಲ, ಪಾರ್ಟಿಗೆ ಸೀರೆ ಹೇಗಪ್ಪ ಉಡುವುದು ಎಂಬ ಚಿಂತೆಯೇ ಬೇಡ!

– ಶೈಲಜಾ ಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ