ಸಾಮಗ್ರಿ : 150 ಗ್ರಾಂ ಕೇಕ್ ಕ್ರಂಬ್ಸ್ (ರೆಡಿಮೇಡ್), 5 ಗ್ರಾಂ ಕ್ರೀಂ, 15 ಗ್ರಾಂ ಮೆಲ್ಟ್ ಟೆಂಪರ್ಡ್ ಡಾರ್ಕ್ ಕುಕಿಂಗ್ ಚಾಕಲೇಟ್, ಒಂದಿಷ್ಟು ಕರಗಿದ ಬೆಣ್ಣೆ, ಐಸಿಂಗ್ ಶುಗರ್, ಲಾಲಿಪಾಪ್ ಸ್ಟಿಕ್ಸ್, 2-3 ಹನಿ ವೆನಿಲಾ ಎಸೆನ್ಸ್.
ವಿಧಾನ : ಒಂದು ಬಟ್ಟಲಿಗೆ ಕೇಕ್ ಕ್ರಂಬ್ಸ್ ಹಾಕಿಕೊಳ್ಳಿ. ಇದಕ್ಕೆ ಐಸಿಂಗ್‌ಶುಗರ್, ಕರಗಿದ ಬೆಣ್ಣೆ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಇದಕ್ಕೆ ವೆನಿಲಾ ಎಸೆನ್ಸ್, ಕ್ರೀಂ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಚಾಕಲೇಟ್ ಸೇರಿಸಿ ಅತಿ ಮೃದು ಮಿಶ್ರಣ ರೆಡಿ ಮಾಡಿ. ಇದನ್ನು 10 ನಿಮಿಷ ಫ್ರಿಜ್ ನಲ್ಲಿರಿಸಿ. ನಂತರ ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿಕೊಳ್ಳಿ. ಲಾಲಿ ಸ್ಟಿಕ್ಸ್ ನ್ನು ಕರಗಿದ ಚಾಕಲೇಟ್ ನಲ್ಲಿ ಅದ್ದಿಕೊಂಡು, ಈ ಉಂಡೆಗಳಿಗೆ ಸಿಗಿಸಿ ಮತ್ತೆ 10 ನಿಮಿಷ ಫ್ರಿಜ್ ನಲ್ಲಿರಿಸಿ. ನಂತರ ಈ ಉಂಡೆಗಳನ್ನು ಮತ್ತೆ ಕರಗಿದ ಚಾಕಲೇಟ್ ನಲ್ಲಿ ಡಿಪ್ ಮಾಡಿ, ಚಿತ್ರದಲ್ಲಿರುವಂತೆ ಬಗೆ ಬಗೆ ಜೆಮ್ಸ್ ನಲ್ಲಿ ಹೊರಳಿಸಿ, ಈ ರೀತಿ ಟೇಬಲ್ ಮೇಲೆ ಜೋಡಿಸಿ, ಸವಿಯಲು ಕೊಡಿ.
ಡಚ್ ಚಾಕಲೇಟ್
ಸಾಮಗ್ರಿ : ಒಂದಿಷ್ಟು ಬಿಸ್ಕೆಟ್ ಕ್ರಂಬ್ಸ್, ಕೊಬ್ಬರಿ ತುರಿ, ಚಾಕಲೇಟ್ ಪೌಡರ್, ಕಂಡೆನ್ಸ್ಡ್ ಮಿಲ್ಕ್, ಕರಗಿದ ಬೆಣ್ಣೆ, ಚಿಟಕಿ ಏಲಕ್ಕಿ ಪುಡಿ, ಅಲಂಕರಿಸಲು ಜೆಮ್ಸ್, ಕೊಬ್ಬರಿ ಪುಡಿ.
ವಿಧಾನ : ಮೊದಲು ಬಿಸ್ಕೆಟ್ ಕ್ರಂಬ್ಸ್ ಗೆ ಚಾಕಲೇಟ್, ಏಲಕ್ಕಿ ಪುಡಿ, ಕೊಬ್ಬರಿ ತುರಿ ಸೇರಿಸಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಬೆಣ್ಣೆ ಹಾಕಿ ಗೊಟಾಯಿಸಿ. ಇದಕ್ಕೆ ಕಂಡೆನ್ಸ್ಡ್ ಮಿಲ್ಕ್ ಬೆರೆಸಿ, ಮಿಶ್ರಣ ಕಲಸಿಡಿ. ನಂತರ ಕೈಗಳಿಗೆ ತುಸು ಬೆಣ್ಣೆ ಸವರಿಕೊಂಡು, ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ. ಚಿತ್ರದಲ್ಲಿರುವಂತೆ ಕೊಬ್ಬರಿ ಪುಡಿಯಲ್ಲಿ ಹೊರಳಿಸಿ, ನೀಟಾಗಿ ಜೆಮ್ಸ್ ನಿಂದ ಹೀಗೆ ಅಲಂಕರಿಸಿ.
ಚಾಕೋ ಚಿಪ್ಸ್ ಕುಕೀಸ್
ಸಾಮಗ್ರಿ : ಒಂದಿಷ್ಟು ಮೈದಾ, ಬೇಕಿಂಗ್ ಸೋಡ, ಬೆಣ್ಣೆ, ಬ್ರೌನ್ ಶುಗರ್, ಕೆಸ್ಟರ್ ಶುಗರ್, ತುಸು ಹಾಲು, 2-3 ಹನಿ ವೆನಿಲಾ ಎಸೆನ್ಸ್, ಚಾಕೋ ಚಿಪ್ಸ್.
ವಿಧಾನ : ಮೈದಾ, ಬೇಕಿಂಗ್ ಪೌಡರ್, ಬ್ರೌನ್ ಶುಗರ್, ಕೆಸ್ಟರ್ ಶುಗರ್ ಇತ್ಯಾದಿಗಳನ್ನು ಒಂದು ದೊಡ್ಡ ಬಟ್ಟಲಿಗೆ ಹಾಕಿ ಮಿಕ್ಸ್ ಮಾಡಿ, ನಂತರ ಇದಕ್ಕೆ ಬೆಣ್ಣೆ, ಹಾಲು ಬೆರೆಸಿ ಮೃದು ಮಿಶ್ರಣ ಕಲಸಿಡಿ. ಇದಕ್ಕೆ ತುಸು ಚಾಕೋ ಚಿಪ್ಸ್, ಸೇರಿಸಿ. ಚಿತ್ರದಲ್ಲಿರುವಂತೆ ಉಂಡೆ ಮಾಡಿ, ಸಣ್ಣ ಸಣ್ಣ ಕುಕೀಸ್ ರೆಡಿ ಮಾಡಿ. ನಂತರ ಇದನ್ನು ಹಾಲು ಬೆಣ್ಣೆ ಮಿಶ್ರಣದಿಂದ ಗ್ಲೇರ್(ಬ್ರಶ್ಶಿಂಗ್) ಮಾಡಿ, ಮೊದಲೇ ಬಿಸಿಯಾದ ಓವನ್ನಿನಲ್ಲಿ 150 ಡಿಗ್ರಿ ಸೆಂ. ಶಾಖದಲ್ಲಿ 10-12 ನಿಮಿಷ ಹದನಾಗಿ ಬೇಕ್ ಮಾಡಿ. ಆರಿದ ನಂತರ ಹೊರ ತೆಗೆದು, ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ.