ಬೀನ್ ಸ್ಕ್ವೇರ್
ಸಾಮಗ್ರಿ : 2-3 ಚಮಚ ಆಲಿವ್ ಎಣ್ಣೆ, ಶುಂಠಿ/ಬೆಳ್ಳುಳ್ಳಿ ಪೇಸ್ಟ್, ಮಿಕ್ಸ್ಡ್ ಹರ್ಬ್, ಹಸಿ ಮೆಣಸಿನ ಪೇಸ್ಟ್ (ತಲಾ ಅರ್ಧರ್ಧ ಚಮಚ), 1-1 ದೊಡ್ಡ ಈರುಳ್ಳಿ, ಕ್ಯಾಪ್ಸಿಕಂ, ಟೊಮೇಟೊ, 1 ಕಪ್ ಬೆಂದ ರಾಜ್ಮಾ, ರುಚಿಗೆ ತಕ್ಕಷ್ಟು, ಉಪ್ಪು, ಪುಡಿಮೆಣಸು, ಟೊಮೇಟೊ ಸಾಸ್, ಚಿಲೀ ಸಾಸ್, ತುರಿದ ಚೀಸ್ ಕ್ಯೂಬ್ಸ್, ಅರ್ಧ ಪೌಂಡ್ ಬ್ರೆಡ್ ಸ್ಲೈಸ್.
ವಿಧಾನ : ಒಂದು ಪ್ಯಾನ್‌ನಲ್ಲಿ ಆಲಿವ್ ಎಣ್ಣೆ ಬಿಸಿ ಮಾಡಿ ಅದಕ್ಕೆ ಹಸಿಮೆಣಸಿನ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಕ್ಯಾಪ್ಸಿಕಂ, ಟೊಮೇಟೊ ಬೆಂದ ರಾಜ್ಮಾ ಹಾಕಿ ಬಾಡಿಸಿ. ಆಮೇಲೆ ಉಪ್ಪು, 2 ಬಗೆಯ ಸಾಸ್ ಹಾಕಿ ಚೆನ್ನಾಗಿ ಬಾಡಿಸಿ, ಬೇಯಿಸಿ. ನಂತರ ಮೆಣಸು, ತುರಿದ ಚೀಸ್ ಕ್ಯೂಬ್ಸ್, ಮಿಕ್ಸ್ಡ್ ಹರ್ಬ್, ಉಪ್ಪು ಸೇರಿಸಿ ಕೆದಕಿ ಕೆಳಗಿಳಿಸಿ. ಬ್ರೆಡ್ ಸ್ಲೈಸ್‌ಗಳ ಅಂಚಿನಿಂದ ಅರ್ಧ ಇಂಚು ಬಿಡುತ್ತಾ ಮಧ್ಯದ ಭಾಗ ಟೊಳ್ಳಾಗಿಸಿ, ಚೌಕದ ಬಟ್ಟಲಾಗಿಸಿ. ಇನ್ನೊಂದು ಬ್ರೆಡ್ ಸ್ಲೈಸ್‌ಗೆ ತುಸು ಆಲಿವ್ ಎಣ್ಣೆ ಸವರಿ, ಅದರ ಮೇಲೆ ಈ ಬಟ್ಟಲು ಬರುವಂತೆ ಸೆಟ್ ಮಾಡಿ. ಆಮೇಲೆ ಮೇಲಿನ ಬಟ್ಟಲಿಗೂ ತುಸು ಆಲಿವ್ ಎಣ್ಣೆ ಸವರಿ, ಅದರ ಭರ್ತಿ ರಾಜ್ಮಾ ಮಿಶ್ರಣ ತುಂಬಿಸಿ. ಈ ರೀತಿ ಒಂದಷ್ಟು ಸೆಟ್ ಮಾಡಿಕೊಂಡು, ಮೊದಲೇ ಬಿಸಿ ಮಾಡಿದ ಓವನ್‌ನಲ್ಲಿ 250 ಡಗ್ರಿ ಶಾಖದಲ್ಲಿ 10 ನಿಮಿಷ ಬೇಕ್ ಮಾಡಿ. ಬಿಸಿ ಇರುವಾಗಲೇ ಕಾಫಿ ಜೊತೆ ಸರ್ವ್ ಮಾಡಿ.
ಮಾಕ್ ಸ್ಟ್ರಾಬೆರಿ ಡಾಗ್ರಿ
ಸಾಮಗ್ರಿ : 1 ಸೌಟು ಕ್ರಶ್ಡ್ ಸ್ಟ್ರಾಬೆರಿ, 2 ಕಪ್ ಸ್ಪ್ರೈಟ್ ಅಥವಾ 7 ಅಪ್ ಕೂಲ್ ಡ್ಡ್ರಿಂಕ್, 1 ನಿಂಬೆ ರಸ, ಒಂದಿಷ್ಟು ಹೆಚ್ಚಿದ ಸ್ಟ್ರಾಬೆರಿ, ಅಗತ್ಯವಿದ್ದಷ್ಟು ಪುಡಿ ಐಸ್.
ವಿಧಾನ : ಹೆಚ್ಚಿದ ಸ್ಟ್ರಾಬೆರಿ ಹೊರತುಪಡಿಸಿ ಉಳಿದೆಲ್ಲ ಸಾಮಗ್ರಿ ಬೆರೆಸಿ ಮಿಕ್ಸಿಯಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಿ. 2-3 ಗ್ಲಾಸುಗಳಲ್ಲಿ ಹೆಚ್ಚಿದ ಸ್ಟ್ರಾಬೆರಿ ಹಾಕಿಟ್ಟು, ಮೇಲೆ ಈ ಪೇಯ ಸುರಿದು, ಸರ್ವ್ ಮಾಡಿ.
ನಗೆಟ್ಸ್
ಸಾಮಗ್ರಿ : ಅರ್ಧ ಸೌಟು ಬೆಣ್ಣೆ, ಅರ್ಧರ್ಧ ಕಪ್ ತುರಿದ ಕ್ಯಾರೆಟ್, ಹೆಚ್ಚಿದ ಬೀನ್ಸ್, ಬೆಂದ ಸ್ವೀಟ್ ಕಾರ್ನ್, ಬ್ರೆಡ್ ಕ್ರಂಬ್ಸ್, ಮೈದಾ, 1 ಕಪ್ ಹಾಲು, 2-3 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್‌ಮಸಾಲ, ನಿಂಬೆರಸ, ಬೇಯಿಸಿ ಮಸೆದ 2 ಆಲೂ, ಜೊತೆಗೆ ಸವಿಯಲು ಟೊಮೇಟೊ ಸಾಸ್.
ವಿಧಾನ : ಒಂದು ಬಾಣಲೆಯಲ್ಲಿ ಬೆಣ್ಣೆ ಕರಗಿಸಿ ಕ್ಯಾರೆಟ್, ಬೀನ್ಸ್, ಕಾರ್ನ್ ಸೇರಿಸಿ ಹದನಾಗಿ ಬಾಡಿಸಿ ಒಂದು ಪ್ಲೇಟಿಗೆ ಹಾಕಿಡಿ. ನಂತರ ಅದೇ ಬಾಣಲೆಯಲ್ಲಿ ಹಾಲು ಬೆರೆಸಿ ಮಂದ ಉರಿಯಲ್ಲಿ ಕುದಿಸಿ, ಕೆದಕಿರಿ. ನಂತರ ಬಾಡಿಸಿದ ಕ್ಯಾರೆಟ್ ಮಿಶ್ರಣ, ಮಸೆದ ಆಲೂ, ಉಪ್ಪು, ಮಸಾಲೆ ಸೇರಿಸಿ ಕೆದಕಿ ಕೆಳಗಿಳಿಸಿ. ಇದಕ್ಕೆ ತುಸು ಹೆಚ್ಚಿದ ಕೊ.ಸೊಪ್ಪು, ನಿಂಬೆರಸ ಬೆರೆಸಿ, ಸಣ್ಣ ಉಂಡೆಗಳಾಗಿಸಿ. ಮೈದಾಗೆ ಚಿಟಕಿ ಉಪ್ಪು, ಖಾರ ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಅದರಲ್ಲಿ ಈ ಉಂಡೆಗಳನ್ನು ಅದ್ದಿ ಕಾದ ಎಣ್ಣೆಯಲ್ಲಿ ಬೊಂಬಾಯಿ ಬೋಂಡ ಮಾಡುವ ಹಾಗೆ ಕರಿಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸಾಸ್ ಜೊತೆ ಸವಿಯಲು ಕೊಡಿ.