ಮಾವಿನ ಸ್ವಾದಿಷ್ಟ ಶ್ರೀಖಂಡ

ಸಾಮಗ್ರಿ : 1 ಲೀ. ಗಟ್ಟಿ ಹಾಲು, ಒಂದಿಷ್ಟು ಏಲಕ್ಕಿಪುಡಿ, ಹಾಲಲ್ಲಿ ನೆನೆಹಾಕಿದ ಕೇಸರಿ, 2 ಮಾಗಿದ ಮಾವು, ರುಚಿಗೆ ತಕ್ಕಷ್ಟು ಸಕ್ಕರೆ, 1 ಚಮಚ ಮೊಸರು, ತುಸು ಗುಲಾಬಿ ಶರಬತ್ತು.

ವಿಧಾನ : ದಪ್ಪ ತಳದ ಸ್ಟೀಲ್ ಪಾತ್ರೆಯಲ್ಲಿ ಹಾಲು ಕಾಯಿಸಿ. ಅದರ ಅರ್ಧಕ್ಕೂ ಹೆಚ್ಚು ಭಾಗ ಹಿಂಗುವವರೆಗೂ ಮಂದ ಉರಿಯಲ್ಲಿ ಕುದಿಸುತ್ತಾ ಕೈಯಾಡಿಸಿ. ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ಇದಕ್ಕೆ ಮೊಸರು ಬೆರೆಸಿ ಹೆಪ್ಪು ಹಾಕಿ. ಹೀಗೆ ಹೆಪ್ಪಾದ ಹೊಸ ಗಟ್ಟಿ ಮೊಸರನ್ನು ತೆಳು ಬಟ್ಟೆಯಲ್ಲಿ ಗಂಟು ಕಟ್ಟಿ ತೇವಾಂಶ ಹೋಗಲಾಡಿಸಿ. ಈಗ ಮಾವಿನ ಹೋಳನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಗಟ್ಟಿ ಮೊಸರಿಗೆ ಸಕ್ಕರೆ, ಏಲಕ್ಕಿ, ಕೇಸರಿ, ಮಾವಿನ ಪೇಸ್ಟ್, ಗುಲಾಬಿ ಶರಬತ್ತು ಬೆರೆಸಿ ಗೊಟಾಯಿಸಿ. ಇದನ್ನು 2-3 ತಾಸು ಫ್ರಿಜ್‌ನಲ್ಲಿರಿಸಿ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಿರಿ.

ಮ್ಯಾಂಗೋ ಸ್ಯಾಂಡ್‌ವಿಚ್‌

ಸಾಮಗ್ರಿ : 1-2 ಮಾಗಿದ ಮಾವು, ಅರ್ಧ ಲೀ. ಗಟ್ಟಿ ಹಾಲು, 8-10 ಬ್ರೆಡ್‌ ಸ್ಲೈಸ್‌. ಒಂದಿಷ್ಟು ಏಲಕ್ಕಿಪುಡಿ, ಹಾಲಲ್ಲಿ ನೆನೆಸಿದ ತುಸು ಕೇಸರಿ, ಅರ್ಧ ಸೌಟು ತುಪ್ಪ, ರುಚಿಗೆ ತಕ್ಕಷ್ಟು ಸಕ್ಕರೆ.

ವಿಧಾನ : ಹಾಲನ್ನು ಕಾಯಿಸಿ ಮಂದ ಉರಿಯಲ್ಲಿ ಚೆನ್ನಾಗಿ ಕುದಿಸುತ್ತಾ ಅರ್ಧದಷ್ಟು ಹಿಂಗುವಂತೆ ಮಾಡಿ. ಸಕ್ಕರೆ ಹಾಕಿ ಕದಡಿಕೊಂಡು ಇದನ್ನು ಕೆಳಗಿಳಿಸಿ ಆರಲು ಬಿಡಿ. ಬ್ರೆಡ್‌ ಸ್ಲೈಸ್‌ನ್ನು ಗುಂಡಗೆ ಕತ್ತರಿಸಿ, ಫ್ಯಾನಿನ ಕೆಳಗೆ ಪಂಚೆಯ ಮೇಲೆ ಒಣಗಲು ಬಿಡಿ. 1-2 ಗಂಟೆಗಳ ನಂತರ ಇವನ್ನು ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಮಾವಿನ ಸಿಪ್ಪೆ ಹೆರೆದು, ಹೋಳು ಮಾಡಿ, ನುಣ್ಣಗೆ ಪೇಸ್ಟ್ ಮಾಡಿ. ಒಂದು ದೊಡ್ಡ ಬಟ್ಟಲಿಗೆ ಕಾದಾರಿದ ಹಾಲು, ಮಾವಿನ ಪೇಸ್ಟ್, ನೆನೆದ ಕೇಸರಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕದಡಿಕೊಳ್ಳಿ. ಕರಿದ ಬ್ರೆಡ್‌ ಸ್ಲೈಸ್‌ಗಳನ್ನು ಇದರಲ್ಲಿ ಸ್ವಲ್ಪ ಹೊತ್ತು ನೆನೆಹಾಕಿ, ಹೊರತೆಗೆದು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

 

ಮಾವು ಇಂಗಿನ ಉಪ್ಪಿನಕಾಯಿ

ಸಾಮಗ್ರಿ : 500 ಗ್ರಾಂ ಹುಳಿ ಮಾವಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಅರ್ಧ ಚಮಚ ಅರಿಶಿನ, ಅರ್ಧ ಸೌಟು ರೀಫೈಂಡ್‌ ಆಯಿಲ್‌, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ.

ವಿಧಾನ : ಮಾವನ್ನು ಶುಚಿಗೊಳಿಸಿ, ಚೆನ್ನಾಗಿ ಒರೆಸಿ, ಸಣ್ಣ ಹೋಳುಗಳಾಗಿ ಕತ್ತರಿಸಿ. ಒಂದು ಗಾಜಿನ ಭರಣಿಗೆ ಈ ಮಾವಿನ ಹೋಳು, ಉಪ್ಪು, ಅರಿಶಿನ ಹಾಕಿ, ಚೆನ್ನಾಗಿ ಕುಲುಕಿ 3-4 ದಿನ ಬಾಯಿಕಟ್ಟಿ ಬಿಸಿಲಿಗಿಡಿ. ಆಮೇಲೆ ಇದನ್ನು ಬೇಸನ್ನಿಗೆ ಹರಡಿಕೊಂಡು ಖಾರ, ಇಂಗು, ಒಗ್ಗರಣೆ ಕೊಟ್ಟು ಕಾದಾರಿದ ಎಣ್ಣೆ ಹಾಕಿ ಎಲ್ಲವನ್ನೂ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಇದನ್ನು ಭರಣಿಗೆ ತುಂಬಿಸಿ ಬಾಯಿಕಟ್ಟಿ ಮತ್ತೆ 4-5 ದಿನ ಬಿಸಿಲಿಗಿಡಿ. ಆಮೇಲೆ ಇದು ಬಳಸಲು ರೆಡಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ