ಓಟ್ಸ್ ರವೆ ಢೋಕ್ಲಾ

ಸಾಮಗ್ರಿ : 1-1 ಕಪ್‌ ಓಟ್ಸ್, ಮೊಸರು, ಅರ್ಧ ಕಪ್‌ ಹುರಿದ ಸಣ್ಣರವೆ, ತುಸು ನೀರು, ಒಂದಿಷ್ಟು ತುರಿದ ಕ್ಯಾರೆಟ್‌, ಶುಂಠಿ, ಹಸಿಮೆಣಸಿನ ಪೇಸ್ಟ್, ತುಸು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಈನೋ ಫ್ರೂಟ್‌ ಸಾಲ್ಟ್.

ಒಗ್ಗರಣೆಗಾಗಿ : ಅಗತ್ಯವಿದ್ದಷ್ಟು ಎಣ್ಣೆ, ಸಾಸುವೆ, ಜೀರಿಗೆ, 6-7 ಎಸಳು ಕರಿಬೇವು, ಉದ್ದಕ್ಕೆ ಸೀಳಿದ ಹಸಿ ಮೆಣಸಿನಕಾಯಿ 2, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಬಾಣಲೆಯಲ್ಲಿ ಓಟ್ಸ್ ಹಾಕಿ ಮಂದ ಉರಿಯಲ್ಲಿ ಹುರಿದು, ಕೆಳಗಿಳಿಸಿ. ಆರಿದ ನಂತರ ಮಿಕ್ಸಿಯಲ್ಲಿ ಪೌಡರ್‌ ಮಾಡಿ. ಓಟ್ಸ್, ಹುರಿದ ರವೆ ಮತ್ತು ಮೊಸರು ಬೆರೆಸಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಇದನ್ನು ಮತ್ತೆ ಗೊಟಾಯಿಸಿ. ಆಮೇಲೆ ಇದಕ್ಕೆ ಕ್ಯಾರೆಟ್‌, ಉಪ್ಪು, ಶುಂಠಿ, ಹಸಿಮೆಣಸಿನ ಪೇಸ್ಟ್, ಎಣ್ಣೆ, ನೀರು ಎಲ್ಲಾ ಬೆರೆಸಿಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರಗೊಳಿಸಿ. ಇದು ಸಾಕಷ್ಟು ಗಟ್ಟಿ ಎನಿಸಿದರೆ ತುಸು ನೀರು ಬೆರೆಸಿಕೊಳ್ಳಿ. ಇಡ್ಲಿ ಪಾತ್ರೆಗೆ ಅಗತ್ಯವಿದ್ದಷ್ಟು ನೀರು ತುಂಬಿಸಿ ಕುದಿಸಿರಿ. ಇಡ್ಲಿ ತಟ್ಟೆಗಳಿಗೆ ಜಿಡ್ಡು ಸವರಿಕೊಳ್ಳಿ. ಅದಕ್ಕೆ ಮಿಶ್ರಣ ತುಂಬಿಸುವ ಮೊದಲು ಈನೋ ಫ್ರೂಟ್‌ಸಾಲ್ಟ್ ಬೆರೆಸಿ ಇಡ್ಲಿ ತರಹ ಸೆಟ್‌ ಮಾಡಿ ಹಬೆಯಲ್ಲಿ 10-15 ನಿಮಿಷ ಬೇಯಿಸಿ. ಕೆಳಗಿಳಿಸಿ ತಣಿದ ನಂತರ, ಬರ್ಫಿ ತರಹ ಕಟ್‌ ಮಾಡಿ. ಇದರ ಮೇಲೆ ಒಗ್ಗರಣೆ ಹಾಕಿ, ಕಾಯಿಚಟ್ನಿ ಜೊತೆ ಸವಿಯಲು ಕೊಡಿ.

ದಾಲ್ ‌ಕಚೋಡಿ ವಿತ್‌ ಆಲೂ ಭಾಜಿ

ಕಚೋರಿಗಾಗಿ ಸಾಮಗ್ರಿ : 200 ಗ್ರಾಂ ಮೈದಾ, 4 ಚಮಚ ತುಪ್ಪ, ತುಸು ಬೆಚ್ಚಗಿನ ನೀರು, ರುಚಿಗೆ ಉಪ್ಪು, ಕರಿಯಲು ಎಣ್ಣೆ.

ಹೂರಣಕ್ಕೆ ಸಾಮಗ್ರಿ : 50 ಗ್ರಾಂ ಹೆಸರುಬೇಳೆ, 4 ಚಮಚ ಕಡಲಹಿಟ್ಟು, ರುಚಿಗೆ ತಕ್ಕಷ್ಟ ಉಪ್ಪು, ಖಾರ, ಅಮ್ಚೂರ್‌ಪುಡಿ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಗರಂಮಸಾಲ, ಧನಿಯಾ ಪುಡಿ, ಇಂಗು, ಒಂದಿಷ್ಟು ಹೆಚ್ಚಿದ  ಹಸಿಮೆಣಸು, ಕೊ.ಸೊಪ್ಪು, ಪುದೀನಾ, ತುಸು ರೀಫೈಂಡ್‌ ಎಣ್ಣೆ.

ಆಲೂ ಭಾಜಿಗಾಗಿ ಸಾಮಗ್ರಿ : 250 ಗ್ರಾಂ ಬೇಯಿಸಿ ಮಸೆದ ಆಲೂ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಶುಂಠಿ, ಹಸಿಮೆಣಸಿನ ಪೇಸ್ಟ್, ಟೊಮೇಟೊ ಪೇಸ್ಟ್, ತುಸು ಅರಿಶಿನ, ಒಗ್ಗರಣೆಗೆ ರೀಫೈಂಡ್‌ ಎಣ್ಣೆ, ಸಾಸುವೆ, ಜೀರಿಗೆ ತುಸು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೈದಾಗೆ ಉಪ್ಪು, ನೀರು ಬೆರೆಸಿ ಮೃದು ಪೂರಿ ಹಿಟ್ಟಿನ ಹದಕ್ಕೆ ಕಲಸಿ, ತುಪ್ಪ ಹಾಕಿ ಚೆನ್ನಾಗಿ ನಾದಿಕೊಳ್ಳಿ. ಇದನ್ನು ಅರ್ಧ ಗಂಟೆ ನೆನೆಯಲು ಬಿಡಿ. ಹೆಸರುಬೇಳೆ ಲಘುವಾಗಿ ಹುರಿದು, ಬಿಸಿನೀರಿಗೆ ಹಾಕಿ ಸುಮಾರಾಗಿ ಬೇಯಿಸಿ, ತುಂಬಾ ಮೆದು ಆಗಬಾರದು. ಇದರ ನೀರು ಬಸಿದಿಡಿ. ಒಂದು ನಾನ್‌ಸ್ಟಿಕ್‌ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಇಂಗಿನ ಒಗ್ಗರಣೆ ಕೊಡಿ. ಶುಂಠಿ, ಹಸಿ ಮೆಣಸಿನ ಪೇಸ್ಟ್ ಹಾಕಿ ಕೆದಕಿ. ಕಡಲೆಹಿಟ್ಟು ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಕೆದಕಿರಿ. ಆಮೇಲೆ ಬೆಂದ ಬೇಳೆ ಸೇರಿಸಿ 3-4 ನಿಮಿಷ ಕೆದಕಬೇಕು. ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ. ಮೈದಾ ಹಿಟ್ಟನ್ನು ನಾದಿಕೊಂಡು ಸಣ್ಣ ಉಂಡೆಗಳಾಗಿಸಿ. ಇದನ್ನು ಪುಟ್ಟ ಪೂರಿಗಳಾಗಿ ಲಟ್ಟಿಸಿ. ಇದರ ಮಧ್ಯೆ 2-3 ಚಮಚ ಹೂರಣ ತುಂಬಿಸಿ, ಚಿತ್ರದಲ್ಲಿರುವಂತೆ ಗುಂಡಗೆ ಬರುವಂತೆ ಮಾಡಿ, ತುಸು ಲಟ್ಟಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಇವನ್ನು ಹೊಂಬಣ್ಣ ಬರುವಂತೆ ಮಂದ ಉರಿಯಲ್ಲಿ ಕರಿಯಿರಿ. ಅಗತ್ಯ ಬಿದ್ದಾಗ ಇದನ್ನು 1-2 ದಿನ ಮೊದಲೇ ತಯಾರಿಸಿ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಬಹುದು. ಅತಿಥಿಗಳು ಬಂದಾಗ ಮೈಕ್ರೋವೇವ್‌ನಲ್ಲಿ ಬಿಸಿ  ಮಾಡಿ, ಆಲೂ ಭಾಜಿ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ