ಮಿಸ್‌ ಚಟ್ನಿಯ ರೂಪ  ಈಗ ಎಷ್ಟೋ ಬದಲಾಗಿದೆ. ಹಿಂದೆಲ್ಲ ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಹುಳಿ ಮಾವು, ಹುಣಿಸೇಹಣ್ಣು, ಉಪ್ಪು, ಸೈಂಧವ ಲವಣ, ತೆಂಗು, ಇಂಗು, ಬೆಲ್ಲ, ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ ಇತ್ಯಾದಿಗಳನ್ನು ಒರಳು ಅಥವಾ ಒರಳುಕಲ್ಲಿನ ಮೇಲೆ ತಿರುವಿ, ಅರೆದು ಜಾಡಿ, ಪಿಂಗಾಣಿ ಅಥವಾ ಕಪ್ಪು ಮಡಕೆಗಳಲ್ಲಿ ತುಂಬಿರಿಸುತ್ತಿದ್ದ ಕಾಲ ಹಳೆಯದಾಯಿತು. ಅಲ್ಲಿಂದ ಅದು ತಟ್ಟೆ, ಬಾಳೆಲೆ, ಊಟದ ಎಲೆಗಳಿಗೆ ಬಂದು ಬೀಳುತ್ತಿತ್ತು. ಇದೆಲ್ಲ ತಾಜಾ ರುಬ್ಬಿದ ಪದಾರ್ಥ, ಫ್ರೆಶ್‌ ಆಗಿ ಸವಿಯುತ್ತಿದ್ದ ಕಾಲ. ಈಗಿನ  ಕಾಲದಲ್ಲಿ.... ಫ್ರಿಜ್‌ನಲ್ಲಿ ಎತ್ತಿರಿಸಿ ಯಾವಾಗಲೋ ತಿನ್ನುವುದು.ಚೆನ್ನಾಗಿ ಮಾಗಿದ ಹುಣಿಸೆ ಕಿವುಚಿ, ಅದಕ್ಕೆ ಬೆಲ್ಲ, ಬ್ಲ್ಯಾಕ್‌ಸಾಲ್ಟ್, ಅಚ್ಚಖಾರ, ಹುರಿದ ಜೀರಿಗೆ, ಸಣ್ಣಗೆ ಹೆಚ್ಚಿದ ಒಣದ್ರಾಕ್ಷಿ, ಹಸಿ ಖರ್ಜೂರ ಇತ್ಯಾದಿಗಳ ಚಟ್ನಿಯ ರುಚಿ ಈಗಲೂ ಬಾಯಲ್ಲಿ ನೀರೂರಿಸುತ್ತದೆ. ಇದಕ್ಕೆ ದಾಳಿಂಬೆ ಹರಳು, ದ್ರಾಕ್ಷಿ, ಬಾಳೆಹಣ್ಣಿನ ತುಂಡು ಬೆರೆಸಿದರೆ ಇನ್ನೂ ರುಚಿ ಹೆಚ್ಚು. ಸಮೋಸಾ, ಬೋಂಡ, ಬಜ್ಜಿ, ವಡೆ, ಪಕೋಡ, ಆಲೂ ಟಿಕ್ಕಿ..... ಇತ್ಯಾದಿಗಳನ್ನು ಇದರಲ್ಲಿ ಮುಳುಗಿಸಿ ಸವಿಯುತ್ತಿದ್ದರೆ ಅದರ ರುಚಿಯ ಮುಂದೆ ಇಂದಿನ ಸಾಸ್‌ಗಳೇನು? ಇಂಥ ಹುಳಿ ಸಿಹಿ ಚಟ್ನಿಗಳನ್ನು ಒಂದಿಷ್ಟು ತೆಳ್ಳಗೆ ಮಾಡಿ ಪಾನಿಪೂರಿ, ಭೇಲ್‌ಪೂರಿ ಇತ್ಯಾದಿಗಳಿಗೆ ಬೆರೆಸಿದರೆ ಅದರ ರುಚಿಯೇ ರುಚಿ!

ಹಳೆಯ ಗ್ರಂಧಿಗೆ ಅಂಗಡಿಗಳಿಂದ ಒಂದಿಷ್ಟು ಮೆಂತ್ಯ, ಸೋಂಪು, ಜೀರಿಗೆ, ಬೆಲ್ಲ, ಒಣ ಮೆಣಸು, ಧನಿಯಾ, ಜಾಯಿಕಾಯಿ, ಲವಂಗ, ಜಾಪತ್ರೆ, ಏಲಕ್ಕಿ, ಹುಣಿಸೆ..... ಇತ್ಯಾದಿ ತಂದು ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಬೆಲ್ಲ, ಅರಿಶಿನ  ಬೆರೆಸಿ ಇಡೀ ರಾತ್ರಿ ನೆನೆಸಿ ಮಾರನೇ ದಿನ ಕಚೋರಿ, ಸಮೋಸಾ ತಯಾರಿಸಿದರೆ ತಿಂಡಿ ಬೇಡ ಎನ್ನುವವರೂ ಬಾಯಿ ಚಪ್ಪರಿಸಿ ಲೊಟ್ಟೆ ಹೊಡೆಯುತ್ತಾರೆ.

ಅದೇ ತರಹ ತೆಂಗು, ಶುಂಠಿ, ಹುರಿದ ಕ/ಉ ಬೇಳೆ, ಶೇಂಗಾ, ಎಳ್ಳು, ಕರಿಬೇವು, ಹಸಿಮಣಸು, ಮೊಸರು, ನಿಂಬೆ ಇತ್ಯಾದಿ ಬೆರೆಸಿ ರುಬ್ಬಿಕೊಂಡರೆ ಬಿಳಿ ಚಟ್ನಿ ರೆಡಿ!

ನೀಟಾಗಿ ಹೆಚ್ಚಿ ಬಾಡಿಸಿದ ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ, ಒಣ ಮೆಣಸು, ಅದಕ್ಕೆ ಹುರಿಗಡಲೆ, ಕೊಬ್ಬರಿ, ಉಪ್ಪು, ಬೆಲ್ಲ ಸೇರಿಸಿದರೆ ಕೆಂಪು ಚಟ್ನಿ ರೆಡಿ! ನಂತರ ಇಂಗು, ಸಾಸುವೆ, ಜೀರಿಗೆ, ಕರಿಬೇವಿನ ಒಗ್ಗರಣೆ ಕೊಟ್ಟರೆ ಇಡೀ ಬೀದಿಗೆಲ್ಲ ಘಂ ಎಂಬ ಸುವಾಸನೆ!

ಶುಂಠಿ, ಎಳ್ಳು, ರಸಭರಿತ ಟೊಮೇಟೊಗಳ ಹಾಟ್‌ಹೈದರಾಬಾದಿ ಚಟ್ನಿಗಂತೂ ಒಗ್ಗರಣೆ ತಗುಲಿದರೆ ಸೊಗಸು...!

ಅದೇ ತರಹ ಮಹಾರಾಷ್ಟ್ರದಲ್ಲಿ ಹಸಿಮೆಣಸು, ಈರುಳ್ಳಿ, ಬೆಳ್ಳುಳ್ಳಿ ಸೇರಿಸಿ ರುಬ್ಬಿದ ಚಟ್ನಿ ರೆಡಿಯಾದಾಗ ಅನ್ನ, ಹಾಗಲ ಪಲ್ಯಕ್ಕೆ ಸೊಗಸಾಗಿರುತ್ತದೆ. ಕೊಬ್ಬರಿ ತುರಿ, ಮೆಂತ್ಯ, ಬೆಳ್ಳುಳ್ಳಿ, ಕರಿಮೆಣಸು, ಕೋಕಂ ಬೆರೆಸಿ ರುಬ್ಬಿದರೆ ಖಾರದ ಕೊಬ್ಬರಿ ಚಟ್ನಿ ರೆಡಿ. ಗುಜರಾತ್‌ ಕಡೆಯಂತೂ ಕ್ಯಾರೆಟ್‌, ಎಲೆಕೋಸು, ಸೌತೇಕಾಯಿ, ಹುರಿಗಡಲೆ, ಕೊಬ್ಬರಿ, ಉಪ್ಪು, ಮೊಸರು ಬೆರೆತರೆ ಖಾರದ ಚಟ್ನಿ, ಹುಳಿ ಮಾವು ಬೆಲ್ಲ ಸೇರಿದರೆ ಹುಳಿ ಸಿಹಿ ಚಟ್ನಿ ರೆಡಿ. ಕಡಲೆಹಿಟ್ಟಿಗೆ ಮೊಸರು, ಉಪ್ಪು ಖಾರ ಹಾಕಿ ಕುದಿಸಿದರೆ ಗುಜರಾತಿ ಪಳಿದ್ಯ (ಕಡೀ) ರೆಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ