ಅಂಜೂರದ ಪುಡಿಂಗ್
ಸಾಮಗ್ರಿ : 4-5 ರಸಭರಿತ ಅಂಜೂರ, 150 ಗ್ರಾಂ ಖೋವಾ, 1 ಕಪ್ ಗಟ್ಟಿ ಹಾಲು, ಅಗತ್ಯವಿದ್ದಷ್ಠು ಸಕ್ಕರೆ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ತುಪ್ಪದಲ್ಲಿ ಹುರಿದದ್ದು), ಏಲಕ್ಕಿ ಪುಡಿ, ಪುದೀನಾ ಎಲೆ.
ವಿಧಾನ : ಅಂಜೂರ ಶುಚಿಗೊಳಿಸಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಡಿ. ದಪ್ಪ ತಳದ ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ, ಮಂದ ಉರಿಯಲ್ಲಿ ಕುದಿಸಿ. ಇದಕ್ಕೆ ಖೋವಾ ಬೆರೆಸಿ ಸತತ ಕೈಯಾಡಿಸಿ. 2 ನಿಮಿಷ ಬಿಟ್ಟು ಸಕ್ಕರೆ, ಏಲಕ್ಕಿ ಸೇರಿಸಿ ಕೆದಕಿ ಕೆಳಗಿಳಿಸಿ. ಇದು ಚೆನ್ನಾಗಿ ಆರಿದ ನಂತರ ಮತ್ತೆ ಮಿಕ್ಸಿಗೆ ಹಾಕಿ ತಿರುವಿಕೊಳ್ಳಿ. ಇದನ್ನು 1-2 ತಾಸು ಫ್ರಿಜ್‌ನಲ್ಲಿರಿಸಿ, ನಂತರ ಗ್ಲಾಸುಗಳಿಗೆ ಸುರಿದು ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ತೇಲಿಬಿಟ್ಟು, ಪುದೀನಾದಿಂದ ಅಲಂಕರಿಸಿ ತಣ್ಣಗೆ ಸವಿಯಿರಿ.
ಫಿಗ್ ಏಪ್ರಿಕಾಟ್ ಸ್ಮೂದಿ
ಸಾಮಗ್ರಿ : 8-10 ಅಂಜೂರ (ಫಿಗ್), 2-3 ಏಪ್ರಿಕಾಟ್ (ಸಕ್ಕರೆ ಬಾದಾಮಿ), 100 ಗ್ರಾಂ ಖೋವಾ, ಅರ್ಧ ಲೀ. ಕೋಲ್ಡ್ ಮಿಲ್ಕ್, 2-3 ಚಮಚ ಸಕ್ಕರೆ, 5-6 ಇಡಿಯಾದ ಬಾದಾಮಿ, ತುಸು ಏಲಕ್ಕಿ ಪುಡಿ, ಅರ್ಧ ಕಪ್ ಪುಡಿ ಐಸ್, ತುಸು ಪುದೀನಾ ಎಲೆ.
ವಿಧಾನ : ಮಿಕ್ಸಿಗೆ ಬೀಜ ತೆಗೆದ ಏಪ್ರಿಕಾಟ್, ಹಾಲಲ್ಲಿ ನೆನೆಸಿದ ಬಾದಾಮಿ, ಅಂಜೂರ ಸೇರಿಸಿ ಪೇಸ್ಟ್ ಮಾಡಿ. ಆಮೇಲೆ ಬಾಣಲೆಯಲ್ಲಿ ಖೋವಾ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಅಂಜೂರದ ಪೇಸ್ಟ್, ಸಕ್ಕರೆ ಸೇರಿಸಿ ಕೆದಕಬೇಕು. ನಂತರ ಇದನ್ನು ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ತಣ್ಣಗಾದ ನಂತರ ಇದನ್ನು ಮಿಕ್ಸಿಗೆ ಹಾಕಿ. ಜೊತೆಗೆ ಏಲಕ್ಕಿ ಪುಡಿ, ಪುಡಿ ಐಸ್ ಹಾಕಿ ಮತ್ತೆ ಚಲಾಯಿಸಿ. ನಂತರ ಈ ಸ್ಮೂದಿಯನ್ನು ಗ್ಲಾಸುಗಳಿಗೆ ಬಗ್ಗಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ಸವಿಯಲು ಕೊಡಿ.
ಅಂಜೂರದ ಲಡ್ಡು
ಸಾಮಗ್ರಿ : 10 ಒಣ ಅಂಜೂರ (3-4 ಗಂಟೆ ನೀರಲ್ಲಿ ನೆನೆಸಿ), 2 ಲೀ. ಫುಲ್ ಕ್ರೀಂ ಹಾಲು, 250 ಗ್ರಾಂ ಪುಡಿ ಸಕ್ಕರೆ, ಅರ್ಧ ಸೌಟು ತುಪ್ಪ, ಒಂದಿಷ್ಟು ಬಾದಾಮಿ ಚೂರು.
ವಿಧಾನ : ಮೊದಲು ನೆನೆಸಿದ ಅಂಜೂರ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ದಪ್ಪ ತಳದ ಪಾತ್ರೆಯಲ್ಲಿ ಹಾಲು ಕಾಯಿಸಿ, ಮಂದ ಉರಿಯಲ್ಲಿ ಅದನ್ನು ಕಾಯಿಸುತ್ತಾ ಮುಕ್ಕಾಲು ಭಾಗ ಹಿಂಗಿಸಿ. ನಂತರ ಇದಕ್ಕೆ ಅಂಜೂರದ ಪೇಸ್ಟ್, ಸಕ್ಕರೆ ಹಾಕಿ ಅದು ಗಟ್ಟಿ ಆಗುವವರೆಗೂ ಕೆದಕಬೇಕು. ಮಧ್ಯೆ ಮಧ್ಯೆ ತುಪ್ಪ ಬೆರೆಸುತ್ತಾ ಗಂಟಿಲ್ಲದಂತೆ ಮಾಡಿ. ಕೆಳಗಿಳಿಸಿದ ಮೇಲೆ ಚೆನ್ನಾಗಿ ಆರಿದ ನಂತರ, ಮತ್ತೆ ತುಪ್ಪ ಬೆರೆಸಿ, ಉಂಡೆ ಕಟ್ಟಿ. ಚಿತ್ರದಲ್ಲಿರುವಂತೆ ಇದನ್ನು ಬಾದಾಮಿಯಿಂದ ಅಲಂಕರಿಸಿ ಸವಿಯಲು ಕೊಡಿ.
ಅಂಜೂರದ ಹಲ್ವಾ
ಸಾಮಗ್ರಿ : 7-8 ತಾಜಾ ಅಂಜೂರ, ಅರ್ಧ ಕಪ್ ಗೋಧಿಹಿಟ್ಟು, 4-5 ಚಮಚ ತುಪ್ಪ, ಅರ್ಧ ಕಪ್ ಹಾಲು, 5-6 ಚಮಚ ಪುಡಿ ಸಕ್ಕರೆ, ತುಸು ಏಲಕ್ಕಿ ಪುಡಿ, ಗೋಡಂಬಿ, ಪಿಸ್ತಾ ಚೂರು.