ಟ್ರೆಂಡ್‌ ಬದಲಾಗುತ್ತಿರುವ ಆಧುನಿಕ ಕಾಲಮಾನಕ್ಕೆ ತಕ್ಕಂತೆ ಜನರ ಪ್ಯಾಶನ್‌ ಲೈಫ್‌ ಸ್ಟೈಲ್ ‌ನಲ್ಲೂ ಸಹ ಬದಲಾವಣೆಗಳು ಮೂಡತೊಡಗಿವೆ. ಈ ಪರಿವರ್ತನೆಯನ್ನು ಇದೀಗ ಲವ್ ರಿಲೇಶನ್‌ ಶಿಪ್‌ ನಲ್ಲೂ ಗಮನಿಸಬಹುದಾಗಿದೆ. ನಮ್ಮ ಇಂದಿನ ಯುವಜನತೆ ಎಲ್ಲಾ ನಿಟ್ಟಿನಿಂದಲೂ ಬಲು ಮುಂದಿದ್ದಾರೆ. ಅವರ ಯೋಚನಾಧಾಟಿ, ಸ್ಟೈಲ್, ಡ್ರೆಸ್‌, ರೀತಿನೀತಿ ಎಲ್ಲದರಲ್ಲೂ ಲೇಟೆಸ್ಟ್ ಆಧುನಿಕತೆ ಇಣುಕುತ್ತಿದೆ. ವಿಷಾದದ ಸಂಗತಿ ಎಂದರೆ ಅವರು ತಮ್ಮ ಪ್ರೀತಿಪ್ರೇಮದ ರಿಲೇಶನ್‌ ಶಿಪ್‌ ನಲ್ಲೂ ಅತಿಯಾದ ಬದಲಾವಣೆ ಬಯಸುತ್ತಿದ್ದಾರೆ.

10-20 ವರ್ಷಗಳ ಹಿಂದಿನವರೆಗೂ ಆಧುನಿಕ ಜನತೆ ಮಧ್ಯೆ ಪ್ರೀತಿ ಪ್ರೇಮದ ವ್ಯಾಖ್ಯಾನ ಬೇರೆ ರೀತಿಯಲ್ಲಿತ್ತು. ಸಂಬಂಧದ ಆರಂಭ ಸಂಭಾಷಣೆಯಿಂದ ಮೊದಲಿಡುತ್ತಿತ್ತು. ಅದಾದ ನಂತರ ಸ್ನೇಹ, ಪರಸ್ಪರರತ್ತ ಆಕರ್ಷಣೆ, ಭಾವನೆಗಳ ಕೊಡುಕೊಳ್ಳುವಿಕೆ, ಡೇಟಿಂಗ್‌, ನಂತರ ಪ್ರೇಮಲೋಕದಲ್ಲಿ ಮುಳುಗುವುದು.... ಅದು ಮದುವೆಯಲ್ಲಿ ಮುಗಿಯುವುದು ಮಾಮೂಲಾಗಿತ್ತು. ಇದೆಲ್ಲ ಬಲು ಸಹಜವಾಗಿ, ಭಾವನಾತ್ಮಕವಾಗಿ ನಡೆಯುತ್ತಿತ್ತು. ಮದುವೆಗೆ ಮುಂಚೆ ಮಾಡಿದ ವಾಗ್ದಾನಗಳನ್ನು ಎಷ್ಟೇ ಕಷ್ಟ ಬಂದರೂ, ಯಾರದ್ದೇ ವಿರೋಧವಿದ್ದರೂ ಜೀವನವಿಡೀ ನಿಭಾಯಿಸುತ್ತಿದ್ದುದು. ಪ್ರೇಮಿಯನ್ನು ತಮ್ಮ ಹೆತ್ತವರಿಗೆ ಪರಿಚಯಿಸಿ, ಅವರ ಆಶೀರ್ವಾದದಿಂದಲೇ ಮುಂದೆ ಮದುವೆಯ ತಯಾರಿ ನಡೆಯುತ್ತಿತ್ತು. ಕೆಲವೊಮ್ಮೆ ಅವರನ್ನು ಎದುರು ಹಾಕಿಕೊಂಡರೂ, ಮುಂದೆ ಮೊಮ್ಮಕ್ಕಳಾದ ಮೇಲೆ ಎಲ್ಲವೂ ಸುಖಾಂತದಲ್ಲಿ ಮುಗಿಯುತ್ತಿತ್ತು.

ಆದರೆ ಇಂದಿನ ಅತ್ಯಾಧುನಿಕ ಡಿಜಿಟಲ್ ಯುಗದಲ್ಲಿ ಎಲ್ಲವೂ ಅತಿ ವೇಗವಾಗಿ ಬದಲಾಗುತ್ತಿದೆ. ಈ ಅತಿಯಾದ ಸ್ಪೀಡ್‌ ನಮ್ಮ ಮಾಡ್‌ ಯಂಗ್‌ ಸ್ಟರ್ಸ್‌ ನ್ನು ಪ್ರತಿ ವಿಷಯನ್ನೂ ಮನಬಂದಂತೆ ಬದಲಾಯಿಸಲು ಪ್ರೇರೇಪಿಸುತ್ತಿದೆ. ಅತಿಯಾದ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯೇ ಇದಕ್ಕೆ ಪ್ರಬಲ ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಪ್ರತಿಯೊಂದರಲ್ಲೂ ಜೆಟ್‌ ಫಾಸ್ಟ್, ಎಲ್ಲವೂ ಹೊಚ್ಚ ಹೊಸದೇ ಆಗಿರಬೇಕು ಎಂಬ ಹಂಬಲ. ಇಂದು ಬಲು ಉತ್ಸಾಹದಿಂದ ಹೊಸದಾಗಿ ಖರೀದಿಸಿದ ಮೊಬೈಲ್ ‌ಒಂದೇ ವರ್ಷದಲ್ಲಿ ಮಾಸಲು, ಹಳತು ಎಂದು ರೋಸಿಹೋಗುತ್ತದೆ. ಇದನ್ನು ಬದಿಗೆಸೆದು ಮಾಡ್‌ ಫೀಚರ್ಸ್‌ ಇರುವ ಮತ್ತೊಂದು ಹೊಸ ಮೊಬೈಲ್ ‌ಗೆ ಧಾವಿಸುತ್ತಾರೆ.

ಇದು ಕೇವಲ ಭೌತಿಕ ವಸ್ತುಗಳಿಗಷ್ಟೇ ಸೀಮಿತವಲ್ಲ, ಮಾನವ ಸಂಬಂಧಗಳೂ ಇವರ ದೃಷ್ಟಿಯಲ್ಲಿ ಬಲು ಬೇಗ ಹಳಸತೊಡಗುತ್ತದೆ. ಒಂದೇ ಸಂಬಂಧವನ್ನು ಇಡೀ ಜೀವನಪೂರ್ತಿ ಯಾರು ಭರಿಸುತ್ತಾರೆ..... ಎಂಬಂಥ ನಿರ್ಲಕ್ಷ್ಯ ಮಾಮೂಲಿ ಆಗಿಹೋಗಿದೆ. `ಅಮೆರಿಕಾ... ಅಮೆರಿಕಾ' ಕನ್ನಡ ಚಿತ್ರದಲ್ಲಿ ವಿದೇಶಿ ಮಹಿಳೆಯೊಬ್ಬಳ ಮಾತು `ಒನ್‌ ಹಸ್‌ ಬೆಂಡ್‌ ಫಾರ್‌ ದಿ ಹೋಲ್ ಲೈಫ್‌.... ಸೋ ಬೋರಿಂಗ್‌!' ಎಂಬುದು ಇಲ್ಲಿ ಬಲು ಪ್ರಸ್ತುತ. 3 ದಶಕಗಳ ಹಿಂದೆ ಈ ಚಿತ್ರ ಬಂದಿತ್ತು.

ಆ ನಿಟ್ಟಿನಲ್ಲಿ ಇಂಥ ಮಾಡರ್ನ್‌ ಸಂಬಂಧದಲ್ಲಿ ಏನೆಲ್ಲ ಬದಲಾವಣೆ ಆಗಿರಬಹುದು ಎಂದು ನೀವೇ ಊಹಿಸಿ. ಈ ಸಂಗಾತಿಯನ್ನು ಮೆಚ್ಚಿ ವರ್ಷದ ಮೇಲಾಯಿತು, ಮುಂದಿನ ದಿನಗಳಲ್ಲಿ ಮತ್ತಷ್ಟು ಆಕರ್ಷಕವಾದ ಆಸಕ್ತಿದಾಯಕ ಸಂಗಾತಿ ದೊರಕಿದರೆ ಯಾಕೆ ಟ್ರೈ ಮಾಡಬಾರದು? ಇದು ಇಂದಿನ ಆಧುನಿಕ ಗಂಡು/ಹೆಣ್ಣು ಇಬ್ಬರಿಗೂ ಸಮಾನವಾಗಿ ಅನ್ವಯಿಸುತ್ತದೆ. ಮೋರ್‌ ಕೂಲ್‌, ಮೋರ್ ರಿಚ್‌ಸ್ಮಾರ್ಟ್‌/ಸೆಕ್ಸೀ ಆಗಿರುವವರು ಸಿಕ್ಕರೆ ಏಕೆ ಬೇಡ? ಇಂಥ ಅತಿ ಆಸೆಗಳ ಗುಂಗಿನಲ್ಲಿ ಇವರುಗಳು ಯಾವ ಸಂಬಂಧದಲ್ಲೂ ಕಮಿಟ್‌ ಮೆಂಟ್‌ ಉಳಿಸಿಕೊಳ್ಳಲು ಬಯಸುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ