ಸುಖೀ ದಾಂಪತ್ಯ ನಿಮ್ಮದಾಗಿ, ಸುಮಧುರ ಸಮಾಗಮ ಬಯಸುವಿರಾದರೆ, ಅದರಲ್ಲಿ ಫೋರ್ ಪ್ಲೇ ಎಂಥ ಮುಖ್ಯ ಪಾತ್ರ ವಹಿಸುತ್ತದೆ ಎಂದು ಗಮನಿಸಿ.....!
ಸಾಮಾನ್ಯವಾಗಿ ಜನ ಸೆಕ್ಸ್ ಎಂದೊಡನೆ ಸಮಾಗಮ ಒಂದೇ ಎಂದು ಭಾವಿಸುತ್ತಾರೆ. ನಮ್ಮ ದೇಶದಲ್ಲಿ 50%ಗೂ ಹೆಚ್ಚು ಮಂದಿ, ಸೆಕ್ಶುಯೆಲ್ ಇಂಟರ್ ಕೋರ್ಸ್ ಎಂದೊಡನೆ, ಅದೊಂದನ್ನು ಮುಗಿಸಿ ಮುಖ ತಿರುಗಿಸಿ ಮಲಗಿಬಿಡುವುದು ಎಂದಷ್ಟೇ ಭಾವಿಸುತ್ತಾರೆ. ಹಾಗೂ ಹೀಗೂ 48% ಮಂದಿಗೆ ಫೋರ್ ಪ್ಲೇ ಎಂದರೆ ಚುಂಬನ, ಸ್ತನ ಮರ್ದನ, ಸಂಭೋಗ.... ಅಲ್ಲಿಗೆ ಮುಗಿಯಿತು. (ಸಮಾಗಮದಲ್ಲಿ ಸ್ತನ ಸ್ಪರ್ಶಕ್ಕೆ ಅತಿ ಪ್ರಾಮುಖ್ಯತೆ ಇದೆ, ಇದು ಹಿಂಸಕ ಆಗದೆ, ಚೇತೋಹಾರಿ ಪ್ರೇಮ ಪ್ರಕಿಯೆ ಆಗಿರಬೇಕು) ಇದು ಕ್ರಮೇಣ ಯಾಂತ್ರಿಕ ಕ್ರಿಯೆ ಆಗಿ ಆಗಿ, ಮುಂದೆ ಇಬ್ಬರಿಗೂ ಇದರಲ್ಲಿ ಯಾವ ಸ್ವಾರಸ್ಯ ಇಲ್ಲದೇ ಹೋಗುತ್ತದೆ.
ನಮ್ಮ ದೇಶದ 98% ಹೆಂಗಸರು ಸೆಕ್ಸ್ ನಂತರ ಸಂತೃಪ್ತಿ ಕಾಣುವುದೇ ಇಲ್ಲ ಎಂದರೆ ಯಾರಿಗಾದರೂ ಆಶ್ಚರ್ಯವಾದೀತು, ಅಂದ್ರೆ ಅವರು ಆರ್ಗಝಂ (ಕಾಮ ಪರಾಕಾಷ್ಠೆ)ವರೆಗೂ ತಲುಪುದೇ ಇಲ್ಲ. ಯಾರೋ 100ರಲ್ಲಿ ಒಂದಿಬ್ಬರಿಗೆ ಈ ಯೋಗ ಲಭಿಸಿರಬಹುದು, ಗಂಡಿಗಿಂತ ಮೊದಲ್ ಹೆಣ್ಣಿಗೆ ಸಂತೃಪ್ತಿ ಎಂಬುದು ಅತಿ ಅಪರೂಪ. ಇಲ್ಲಿ ಸಂತೃಪ್ತಿಯ ವೈದ್ಯಕೀಯ ವಿವರಣೆ ಎಂದರೆ ಆರ್ಗಝಂ ಎಂದೇ ತಿಳಿಯಬೇಕು.
ಆರ್ಗಝಂ ಎಂದರೇನು?
ಇದರ ಅರ್ಥವೇನೆಂದು ವಿವರವಾಗಿ ತಿಳಿಯುವ ಮೊದಲು, ಹೆಣ್ಣಿನ ದೇಹದಲ್ಲಿ ಕಾಮಸಂತೃಪ್ತಿ ಹೊಂದಲು 7 ಸೂಕ್ಷ್ಮಾಂಗಗಳಿವೆ ಎಂಬುದನ್ನು ಅರಿಯಬೇಕಿದೆ. ತುಟಿ, ಮೊಲೆ ತೊಟ್ಟು, ಕುತ್ತಿಗೆಯ ಹಿಂಭಾಗ, ತೊಡೆ, ಯೋನಿಯ ಮೇಲ್ಭಾಗ/ಅದರ ಆಂತರಿಕ ಭಾಗ ಹಾಗೂ ನಿತಂಬಗಳು.
ಹೆಣ್ಣನ್ನು ತೃಪ್ತಿಪಡಿಸುವಲ್ಲಿ ಗಂಡಿನ ಪಾತ್ರ 99% ಇರುತ್ತದೆ. ಆದರೆ 98% ದಂಪತಿಗೆ ಸೆತ್ಸ್ ನ ವಿಧಾನವೇ ಗೊತ್ತಿರುವುದಿಲ್ಲ. ಸೆಕ್ಸ್ ಗೆ ಮೊದಲು ಕನಿಷ್ಠ 30 ನಿಮಿಷಗಳಾದರೂ ಫೋರ್ ಪ್ಲೇ (ಅಂಗ ಮರ್ದನ, ತಾಡನ, ಸ್ಪರ್ಶ, ಚುಂಬನ) ಅತಿ ಅಗತ್ಯ. ಏಕೆಂದರೆ ಹೆಣ್ಣು ಈ ಪರಾಕಾಷ್ಠೆಗೆ ಸಿದ್ಧಳಾಗಲು ತಡವಾಗುತ್ತದೆ. ಒಂದು ವರದಿಯ ಪ್ರಕಾರ, ಹೆಣ್ಣು ಮಾನಸಿಕವಾಗಿ ಸೆಕ್ಸ್ ಗೆ ತಯಾರಾಗುವಷ್ಟರಲ್ಲಿ ಗಂಡು ಸ್ಖಲಿಸಿ ಸುಸ್ತಾಗಿರುತ್ತಾನೆ. ಫೋರ್ ಪ್ಲೇ ರಹಿತ ಸೆಕ್ಸ್ ನಲ್ಲಿ ಗಂಡು ವಿಸರ್ಜಿಸಿಕೊಳ್ಳುವಷ್ಟರಲ್ಲಿ ಹೆಣ್ಣು ಸುಸ್ತಾಗಿಬಿಡುತ್ತಾಳೆ. ಹೆಣ್ಣಿನ ಯೋನಿಭಾಗದಲ್ಲಿ ಲ್ಯೂಬ್ರಿಕೇಶನ್ ಶುರು ಆಗುವಷ್ಟರಲ್ಲಿ ಗಂಡು ಸ್ಖಲಿಸಿ ಸೈಡಿಗೆ ಒರಗಿಬಿಡುತ್ತಾನೆ. ಈ ಕಾರಣದಿಂದಾಗಿ ಹೆಣ್ಣಿಗೆ ಆರ್ಗಝಂ ತೃಪ್ತಿ ಸಿಗುವುದೇ ಇಲ್ಲ. ಈ ಕಾರಣದಿಂದಲೇ ಹೆಣ್ಣಿಗೆ ಡಿಪ್ರೆಶನ್ ಕಾಡತೊಡಗುತ್ತದೆ, ಇವರು ಚಿಂತೆಯ ಜೊತೆ ಇದೂ ಸೇರಿಕೊಂಡು, ಖಿನ್ನತೆ ತೀವ್ರವಾಗುತ್ತದೆ.
ಗಂಡು ಏನು ಮಾಡಬೇಕು?
ಇಬ್ಬರಿಗೂ ಸೆಕ್ಸ್ ಬೇಕು ಎನ್ನುವ ಮಾನಸಿಕ ತಯಾರಿ ಮೊದಲಾಗಬೇಕು. ಅದಕ್ಕಾಗಿ ಸೂಕ್ತ ವಾತಾವರಣ, ಮೂಡ್, ಸಮಯ, ಸಂದರ್ಭ ಪೂರಕ ಆಗಿರಬೇಕು. ನಂತರ ಗಂಡು ಹೆಣ್ಣಿನ ಮುಖ ಸವರುತ್ತಾ, ಕೂದಲಲ್ಲಿ ನಿಧಾನವಾಗಿ ಕೈಯಾಡಿಸಬೇಕು. ಅವಳ ತುಟಿ ಸ್ಪರ್ಶಿಸುತ್ತಾ ಮುದ್ದಿಸಬೇಕು. ಕುತ್ತಿಗೆಯ ಹಿಂಭಾಗವನ್ನು ಪ್ರೀತಿಯಿಂದ ಸವರುತ್ತಾ, ಚುಂಬಿಸಬೇಕು. ಆಗ ಹೆಣ್ಣಿನ ಮೂಡ್ ತಂತಾನೇ ಸರಿಹೋಗುತ್ತದೆ. ಆಗ ಆಕೆ ತುಂಬುಮನದಿಂದ ಪ್ರತಿಕ್ರಿಯಿಸುತ್ತಾ ಇದನ್ನು ಸ್ವಾಗತಿಸಿದರೆ, ನಿಧಾನವಾಗಿ ಮೈ ಬಳಸಿ ಮುಂದುರಿಯುವುದು. ಹೀಗೆ ಕ್ರಮೇಣ ಚುಂಬನದ ಪ್ರಕ್ರಿಯೆ ಮುಂದುವರಿಸಿ, ಇಬ್ಬರೂ ಸಂತೋಷದಲ್ಲಿ ತೇಲುವುದಾಗಿದೆ.





