ಪ್ರೀತಿ.... ಪ್ರೇಮ.... ಪ್ರಣಯ..... ಯೌವನಕಾಲದ ಸುಂದರ ಸೋಪಾನಗಳು. ಪ್ರತಿ ವ್ಯಕ್ತಿಯೂ ಈ ಹಂತವನ್ನು ದಾಟದೆ ಮುಂದುವರಿಯಲಾರ, ಕೆಲವರಿಗೆ ಅದು ಜೀವನದ ಸುಖ ಸೋಪಾನಾಗಳಾಗಿ ಮದುವೆಯಲ್ಲಿ ಮುಗಿದರೆ, ಹಲವರಿಗೆ ನಡು ದಾರಿಯಲ್ಲೇ ಮೊಟಕಾಗಿ ನಿರಾಸೆಗೆ ದೂಡುತ್ತವೆ, ಕೆಲವಂತೂ ಬೆಳವಣಿಗೆಯ ಮೊದಲ ಹಂತದಲ್ಲೇ ಚಿವುಟಿ ಹೋಗುತ್ತದೆ. ಏನೇ ಇರಲಿ, ಇದರ ಉದ್ದೇಶ ಸುಖಾಂತ್ಯದ ಮದುವೆ!

`ಪ್ರೇಮ ವಿವಾಹ' ಎಂದಾಗ ಈಗಲೂ ಕೆಲವು ಕಡೆ ಕಿರಿಕಿರಿ ತಪ್ಪಿದ್ದಲ್ಲ. ಅದನ್ನು ಯಶಸ್ವಿಯಾಗಿ ಮಾಡಿಕೊಳ್ಳುವುದು, ಜೀವನವಿಡೀ ಸಂಗಾತಿ ಪರಸ್ಪರ ಒತ್ತಾಸೆಯಾಗಿ ವೈವಾಹಿಕ ಜೀವನ ಉಳಿಸಿಕೊಳ್ಳುವುದು ಅವರವರ ಕೈಯಲ್ಲೇ ಇದೆ. ಈಗಿನ ಫಾಸ್ಟ್ ಲೈಫ್ ಬಯಸುವ ಯುವಜನತೆ, ಹಿಂದಿನವರಂತೆ ಕಷ್ಟಸಹಿಷ್ಣುಗಳೂ, ಸಹನೆಯುಳ್ಳವರೂ ಅಲ್ಲ. ಹೀಗಾಗಿ ಪ್ರೇಮ ವಿವಾಹದ ಅನೇಕ ವೈಫಲ್ಯಗಳು ಕಾಣಬರುತ್ತವೆ. ಹೀಗಾಗದೆ ಅದು ಸುಂದರ ಸುಖೀ ವಿವಾಹದಲ್ಲಿ ಕೊನೆಯಾಗಲು ವಹಿಸಬೇಕಾದ ಮುನ್ನೆಚ್ಚರಿಕೆಗಳು ಏನು?

ಸಹಕಾರದೊಂದಿಗೆ ಚಾಲೆಂಜ್ಸ್ವೀಕಾರ

ಮದುವೆ ಆಗಿಹೋದ ಮಾತ್ರಕ್ಕೆ ಎಲ್ಲವೂ ಶುಭಂ, ಸಂತಸಮಯಂ ಆಗಿಹೋಗುವುದಿಲ್ಲ. ಮದುವೆ ಎಂದರೆ ಯಾಂತ್ರಿಕ ಜೀವನ ನಡೆಸಲು ಜೊತೆಗೆ ಇದ್ದುಬಿಟ್ಟರೆ ಆಗಿಹೋಗಲಿಲ್ಲ. ಅದರಲ್ಲೂ ಈ ಮಧ್ಯಮ ವರ್ಗದ ಕೌಟುಂಬಿಕ ಜೀವನ ಮಹಾ ಅತಂತ್ರ. ಇಲ್ಲಿ 108 ಸವಾಲುಗಳನ್ನು ಇಬ್ಬರೂ ಎದುರಿಸ ಬೇಕಾಗುತ್ತದೆ. ಇವು ಕೌಟುಂಬಿಕ, ಆರ್ಥಿಕ, ಆರೋಗ್ಯ ಕುರಿತಾದ, ಮಾನಸಿಕ ಇತ್ಯಾದಿ ಯಾವುದೇ ಬಗೆ ಇರಬಹುದು. ಹೀಗಾಗಿ ಸಂಗಾತಿಯ ಸಹಕಾರವಿಲ್ಲದೇ ಒಬ್ಬರೇ ಇದನ್ನು ನಿಭಾಯಿಸಲಾಗದು. ಕೋಪತಾಪ ಬದಿಗಿಟ್ಟು ಇಬ್ಬರೂ ಇದನ್ನು ಚರ್ಚಿಸಿ ಈ ಸವಾಲುಗಳನ್ನು ಎದುರಿಸಬೇಕು.

ಎಷ್ಟೋ ದಂಪತಿಗಳಲ್ಲಿ ಒಬ್ಬ ವ್ಯಕ್ತಿ ಜವಾಬ್ದಾರಿಗಳಿಂದ ಓಡಿಹೋಗುತ್ತಾರೆ. ಮದುವೆಗೆ ಮೊದಲು ಇಂತಹ ಜಂಜಾಟಗಳ ಬಗ್ಗೆ ತಿಳಿದೇ ಇರಲಿಲ್ಲವಲ್ಲ ಎಂದು ಗೊಂದಲಕ್ಕೆ ಈಡಾಗುತ್ತಾರೆ. ಈಗಿಂಥ ಹೊರಲಾಗದ ಈ ಹೊರೆ ಯಾರಿಗೆ ಬೇಕು ಎಂದು ಸಂಬಂಧವನ್ನೇ ಕಡಿದುಕೊಳ್ಳುತ್ತಾರೆ. ಹೀಗಾಗಿ ಇಂದಿಗೂ ಪ್ರೇಮವಿವಾಹ ವಿಫಲಗೊಳ್ಳುವುದೇ ಹೆಚ್ಚು. ಇಲ್ಲಿ ಎರಡೂ ಕಡೆ ಹಿರಿಯರ ಸಹಕಾರ, ಮಾರ್ಗದರ್ಶನ ಇರುವುದಿಲ್ಲ. ಇದು ಇವರೇ ಮಾಡಿಕೊಂಡ ಸಂಬಂಧ, ಹೀಗಾಗಿ ಪ್ರೇಮಿಗಳು ತಾವೇ ಅದನ್ನು ಕೊನೆಯವರೆಗೂ ನಿರ್ವಹಿಸಬೇಕು.

ಎಂಥ ವಿವಾಹವೇ ಇರಲಿ, ಎಲ್ಲರ ಜೀವನ ಒಂದೇ ಸರಳರೇಖೆಯಂತೆ ನೇರ್ಪಾಗಿ ಇರುವುದಿಲ್ಲ. ಇಂದು ನಿಮ್ಮ ಸಂಗಾತಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಾಳೆ ನೀವು ಬೇರೊಂದು ವಿಧದಲ್ಲಿ ಎದುರಿಸ ಬೇಕಾಗಬಹುದು ಹೀಗಾಗಿ ಸಮಸ್ಯೆಗಳಿಂದ ತಕ್ಷಣ ಓಡಿಹೋಗುವ ಬದಲು, ಇಬ್ಬರೂ ಕೂಡಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಿ.

ಕೌಟುಂಬಿಕ ಕಲಹಗಳು

ಇದು ಯಾರ ಜೀವನದಲ್ಲಿ ತಾನೇ ಇಲ್ಲ? ಅರೇಂಜ್/ಲವ್ ಮ್ಯಾರೇಜ್‌ ಯಾವುದೇ ಇರಲಿ, ಈ ಕಲಹಗಳು ತಪ್ಪಿದ್ದಲ್ಲ, ಅವುಗಳ ಪರಿಹಾರ ಸಂಗಾತಿಗಳ ಐಕ್ಯತೆಯಲ್ಲಿದೆ. ಇದು ಇವರಿಬ್ಬರ ಜಗಳ ಮಾತ್ರವಾಗದೆ, ಇವರಿಬ್ಬರ ಕುಟುಂಬಗಳ ತಿಕ್ಕಾಟಕ್ಕೂ ಕಾರಣವಾಗುತ್ತದೆ. ಆದರೆ ಮದುವೆಯಾದ ನಂತರ ಈ ಇಬ್ಬರ ಕುಟುಂಬಗಳೂ, ಇವರ ದೈನಂದಿನ ಆಗುಹೋಗುಗಳಲ್ಲಿ ಹೆಚ್ಚಾಗಿ ಮೂಗು ತೂರಿಸುತ್ತಿದ್ದರೆ, ಇವರಿಬ್ಬರ ಸಂಬಂಧ ಕಿತ್ತು ಹೋಗುವ ಹಂತ ತಲುಪಿದರೂ ಆಶ್ಚರ್ಯವಿಲ್ಲ. ಹೀಗಾಗಿ ಮದುವೆಗೆ ಮೊದಲೇ ಈ ಕುರಿತು, ಇಬ್ಬರ ಕುಟುಂಬದವರೂ ದಿನೇ ದಿನೇ ಬಂದು ಮೂಗು ತೂರಿಸಬಾರದೆಂದು ಇಬ್ಬರೂ ಮಾತನಾಡಿಕೊಳ್ಳಿ. ಜೊತೆಗೆ ನಿಮ್ಮಿಬ್ಬರಲ್ಲಿ ನಡೆಯುವ ಪ್ರತಿ ಸಣ್ಣಪುಟ್ಟ ವಿಷಯಗಳ ವರದಿಗಳನ್ನೂ ಎರಡೂ ಮನೆಗಳಿಗೆ ತಲುಪಿಸಬೇಕಾದ ಅಗತ್ಯವಿಲ್ಲ ಎಂದು ನೆನಪಿಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ