ಬ್ಲೂಬೆರಿ ಕೇಕ್

ಸಾಮಗ್ರಿ : ಒಂದಿಷ್ಟು ವೆನಿಲಾ ಸ್ಪಂಜ್‌ ಕೇಕ್‌, 500 ಗ್ರಾಂ ವಿಪ್ಡ್ ಕ್ರೀಂ, ಅರ್ಧ ಕಪ್‌ ಬ್ಲೂಬೆರಿ ಟಾಪಿಂಗ್‌, ಕೇಕ್‌ ತುಂಡುಗಳನ್ನು ಡಿಪ್‌ ಮಾಡಲು ತುಸು ಶುಗರ್‌ ಸಿರಪ್‌, ಡೆಕೋರೇಶನ್‌ಗಾಗಿ ಬ್ಲೂಬೆರಿ ಗ್ಲೇಸ್‌.

ವಿಧಾನ : ಕೇಕ್‌ ತುಂಡುಗಳನ್ನು 3 ಸಮಭಾಗಗಳಲ್ಲಿ ಕತ್ತರಿಸಿ ಸಕ್ಕರೆ ಪಾಕದಲ್ಲಿ ಅದ್ದಿಡಿ. ನಂತರ ಪ್ರತಿ ತುಂಡಿಗೂ ಕ್ರೀಂ ಹಚ್ಚಿ ಅದರ ಮೇಲೆ ಬ್ಲೂಬೆರಿಯ ಟಾಪಿಂಗ್‌ ಮಾಡಿ. ಉಳಿದ ಕ್ರೀಮನ್ನು ಕೇಕ್‌ ಮೇಲೆ ಹಾಕಿ ಬ್ಲೂಬೆರಿಯಿಂದ ಅಲಂಕರಿಸಿ, ಸರ್ವ್ ‌ಮಾಡಿ.

 

ಡ್ರೈ ಫ್ರೂಟ್ಸ್ ಕೇಕ್

ಸಾಮಗ್ರಿ : 2 ಕಪ್‌ ಮೈದಾ, 1 ಕಪ್‌ ಕರಗಿದ ಬೆಣ್ಣೆ, ಅರ್ಧರ್ಧ ಕಪ್‌ ಬೂರಾ ಸಕ್ಕರೆ, ಬಾದಾಮಿ ಪುಡಿ, ಟೂಟೀಫ್ರೂಟಿ, 1 ಕಪ್ ಸಣ್ಣಗೆ ಹೆಚ್ಚಿದ ಡ್ರೈ ಫ್ರೂಟ್ಸ್ (ಗೋಡಂಬಿ, ದ್ರಾಕ್ಷಿ, ಖರ್ಜೂರ, ಪಿಸ್ತಾ, ಅಖ್ರೋಟ್‌), 2-2 ಸಣ್ಣ ಚಮಚ ವೆನಿಲಾ ಎಸೆನ್ಸ್ ಬೇಕಿಂಗ್ ಪೌಡರ್‌, ಅರ್ಧ ಕಪ್‌ ಹಾಲು, ಅಲಂಕರಿಸಲು ಬಾದಾಮಿ ಚೂರು, ಟೂಟಿಫ್ರೂಟಿ.

ವಿಧಾನ : ಕೇಕ್‌ ಟಿನ್‌ ಒಳಭಾಗಕ್ಕೆ ತುಪ್ಪ ಸವರಿ, ತುಸು ಮೈದಾ ಉದುರಿಸಿ. ಒಂದು ಸಣ್ಣ ಬಟ್ಟಲಿಗೆ  ಡ್ರೈಫ್ರೂಟ್ಸ್ ಹಾಕಿಟ್ಟು, ಅದರ ಮೇಲೆ ತುಸು ಮೈದಾ ಉದುರಿಸಿ. ಆಮೇಲೆ 2 ಕಪ್‌ ಮೈದಾ ಜರಡಿಯಾಡಿಕೊಂಡು ಅದಕ್ಕೆ ಬೇಕಿಂಗ್‌ ಪೌಡರ್‌ ಉಪ್ಪು, ಬಾದಾಮಿ ಪುಡಿ ಸೇರಿಸಿ. ಒಂದು ಬೇಸನ್ನಿಗೆ ಬೂರಾ ಸಕ್ಕರೆ, ಬೆಣ್ಣೆ ಬೆರೆಸಿ ಚೆನ್ನಾಗಿ ನೊರೆ ಬರುವಂತೆ ಗೊಟಾಯಿಸಿ. ಆಮೇಲೆ ಇದಕ್ಕೆ ವೆನಿಲಾ ಎಸೆನ್ಸ್, ಬೀಟ್‌ ಮಾಡಿದ ಮೊಟ್ಟೆ ಹಾಕಿ ಮತ್ತೆ ಗೊಟಾಯಿಸಿ. ಆಮೇಲೆ ಮೈದಾ, ಹಾಲಿನ ಮೂರನೇ ಒಂದು ಭಾಗ ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಅನಂತರ ಉಳಿದ ಮೈದಾ, ಹಾಲಿನ ಅರ್ಧರ್ಧ ಭಾಗ ಬೆರೆಸಿ ಕಲಸಬೇಕು. ಕೊನೆಯಲ್ಲಿ ಉಳಿದೆಲ್ಲ ಹಾಲು, ಮೈದಾ ಬೆರೆಸಿ ಕಲಸಿ, ಚೆನ್ನಾಗಿ ನಾದಬೇಕು. ಆಮೇಲೆ ಇದಕ್ಕೆ ಡ್ರೈಫ್ರೂಟ್ಸ್, ಟೂಟಿಫ್ರೂಟಿ ಸೇರಿಸಿ. ಈ ಮಿಶ್ರಣವನ್ನು ಕೇಕ್‌ ಟಿನ್ನಿಗೆ ಹಾಕಿಟ್ಟು, ಅದರ ಮೇಲೆ ಇನ್ನಷ್ಟು ಬಾದಾಮಿ, ಟೂಟಿಫ್ರೂಟಿ ಉದುರಿಸಿ. ಇದನ್ನು ಮೊದಲೇ ಪ್ರೀ ಹೀಟ್‌ ಮಾಡಿದ ಓವನ್ನಿನಲ್ಲಿ ಸುಮಾರು 170 ಡಿಗ್ರಿ ಶಾಖದಲ್ಲಿ 1 ಗಂಟೆ ಕಾಲ ಹದನಾಗಿ ಬೇಕ್‌ ಮಾಡಿ. ಕೂಲ್ ‌ಆದ ನಂತರ ಹೊರತೆಗೆದು ಚಿತ್ರದಲ್ಲಿರುವಂತೆ ಕತ್ತರಿಸಿ, ಸವಿಯಲು ಕೊಡಿ.

ಚಾಕಲೇಟ್‌ ಕಪ್‌ ಕೇಕ್‌

ಸಾಮಗ್ರಿ : 1-1 ಕಪ್‌ ಮೈದಾ ಕೆಸ್ಟರ್‌ ಶುಗರ್‌, ಅರ್ಧರ್ಧ ಕಪ್‌ ಹಾಲು, ಆಲಿವ್ ‌ಎಣ್ಣೆ, ಅದರಲ್ಲಿ ಅರ್ಧ ಕೋಕೋ ಪುಡಿ, ಅರ್ಧರ್ಧ ಚಮಚ ಬೇಕಿಂಗ್‌ ಪೌಡರ್‌, ಬೇಕಿಂಗ್‌ ಸೋಡ, ವೆನಿಲಾ ಎಸೆನ್ಸ್, 1 ಮೊಟ್ಟೆ, ತುಸು ಬಿಸಿ ನೀರು, ಉಪ್ಪು.

ವಿಧಾನ : ಮೊದಲು 160 ಡಿಗ್ರಿ ಶಾಖದಲ್ಲಿ ಓವನ್‌ ಪ್ರೀಹೀಟ್‌ ಮಾಡಿ. ನಂತರ  ಮಫಿನ್‌ ಪ್ಯಾನ್‌ನಲ್ಲಿ ಬಟರ್‌ ಹರಡಿ ಒಂದು ಬದಿಗಿಡಿ. ಒಂದು ಬೇಸನ್ನಿಗೆ ಮೈದಾ, ಕೋಕೋ ಪುಡಿ, ಬೇಕಿಂಗ್‌ ಪೌಡರ್‌, ಸೋಡ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿಕೊಂಡು ಒಂದು ಬದಿಗಿರಿಸಿ. ಮತ್ತೊಂದು ಬಟ್ಟಲಲ್ಲಿ ಒಡೆದ ಮೊಟ್ಟೆ, ಹಾಲು, ಎಣ್ಣೆ, ವೆನಿಲಾ ಎಸೆನ್ಸ್, ಉಪ್ಪು ಸೇರಿಸಿ ಚೆನ್ನಾಗಿ ಗೊಟಾಯಿಸಿ. ಈ ಬ್ಯಾಟರ್‌ಗೆ ಸಕ್ಕರೆ, ಉಳಿದ ಡ್ರೈ ಸಾಮಗ್ರಿ ಸೇರಿಸಿ. ನಂತರ ಇದನ್ನು ಮಿಕ್ಸಿಗೆ ಹಾಕಿ ನೊರೆ ನೊರೆ ಉಕ್ಕುವಂತೆ ಸ್ಮೂಥ್‌ ಮಾಡಿ. ತುಸು ಬಿಸಿ ನೀರು ಬೆರೆಸಿ ಮತ್ತೊಮ್ಮೆ ಚಲಾಯಿಸಿ. ಈ ರೀತಿ ತಯಾರಾದ ಬ್ಯಾಟರ್‌ನ್ನು 15 ನಿಮಿಷ ಒಂದೆಡೆ ಮುಚ್ಚಿರಿಸಿ. ಆಮೇಲೆ ಚೆನ್ನಾಗಿ ನಾದಬೇಕು. ನಂತರ ಕಪ್‌ ಕೇಕ್‌ ಕಂಟೇನರ್‌ನಲ್ಲಿ ಮುಕ್ಕಾಲು ಭಾಗ ಮಿಶ್ರಣ ತುಂಬಿಸಿ. ಬಿಸಿಯಾಗಿರುವ ಓವನ್ನಿನಲ್ಲಿ 20 ನಿಮಿಷ ಬೇಕ್‌ ಮಾಡಿ. ನಂತರ ಇವನ್ನು ಹೊರತೆಗೆದು ಕೂಲ್ ಮಾಡಿ, ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ