ಬೇಸನ್‌ ಪನೀರ್‌ ಗ್ರೇವಿ

ಮೂಲ ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಚಿಟಕಿ ಅರಿಶಿನ, ಒಗ್ಗರಣೆಗೆ ಎಣ್ಣೆ, ಜೀರಿಗೆ, ಹಸಿ ಮೆಣಸು.

ಗ್ರೇವಿಗಾಗಿ ಸಾಮಗ್ರಿ : ಅರ್ಧ ಕಪ್‌ ಈರುಳ್ಳಿ ಪೇಸ್ಟ್, 1-1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾ ಪುಡಿ, ಕಾಶ್ಮೀರಿ ಮಿರ್ಚ್‌ ಮಸಾಲ, ಗರಂ ಮಸಾಲ, ಅರ್ಧ ಕಪ್‌ ಟೊಮೇಟೊ ಪೇಸ್ಟ್, ಅರ್ಧ ಸೌಟು ರೀಫೈಂಡ್‌ ಎಣ್ಣೆ, ತುಸು ಹೆಚ್ಚಿದ ಕೊ.ಸೊಪ್ಪು, ಉದ್ದಕ್ಕೆ ಸೀಳಿದ ಹಸಿ ಮೆಣಸು.

ವಿಧಾನ : ಮೊದಲು ಬೇಸನ್ನಿಗೆ ಕಡಲೆಹಿಟ್ಟು ಹಾಕಿಕೊಂಡು ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಅರಿಶಿನ, ಜೀರಿಗೆ, ತುಸು ಬಿಸಿ ನೀರು ಬೆರೆಸಿಕೊಳ್ಳುತ್ತಾ ಇಡ್ಲಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿಕೊಳ್ಳಿ. ಇದನ್ನು ಅರ್ಧ ಗಂಟೆ ಕಾಲ ನೆನೆಯಲು ಬಿಡಿ. ನಂತರ ಇದರಿಂದ ದಪ್ಪ ಗಾತ್ರದ ದೋಸೆ ತಯಾರಿಸಿ. ನಂತರ ಉದ್ದದ ತುಂಡುಗಳಾಗಿ ಕತ್ತರಿಸಿ ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಈ ತುಂಡುಗಳನ್ನೆಲ್ಲ ಹಾಕಿ ಒಮ್ಮೆ ಬಾಡಿಸಿ ತೆಗೆದಿಡಿ. ಅದೇ ಬಾಣಲೆಯಲ್ಲಿ ಇನ್ನಷ್ಟು ಎಣ್ಣೆ ಬಿಸಿ ಮಾಡಿ. ಇದಕ್ಕೆ ಮೊದಲು ಒಗ್ಗರಣೆ ಕೊಟ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಂತರ ಈರುಳ್ಳಿ ಪೇಸ್ಟ್, ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ಅನಂತರ ಒಂದೊಂದಾಗಿ ಎಲ್ಲಾ ಮಸಾಲೆ ಸೇರಿಸಿ ಕೆದಕಬೇಕು. ಅಗತ್ಯ ಎನಿಸಿದರೆ ಅರ್ಧ ಕಪ್‌ ನೀರು ಬೆರೆಸಿ ಕುದಿಸಿರಿ. ಕೊನೆಯಲ್ಲಿ ಬಾಡಿಸಿದ ಕಡಲೆ ತುಂಡು ಹಾಕಿ ಎಲ್ಲವನ್ನೂ ಚೆನ್ನಾಗಿ ಕುದಿಸಬೇಕು. ಕೆಳಗಿಳಿಸಿ ಕೊ.ಸೊಪ್ಪು, ಹಸಿಮೆಣಸು ತೇಲಿ ಬಿಟ್ಟು ಬಿಸಿ ಬಿಸಿಯಾಗಿ ಚಪಾತಿ, ಅನ್ನದ ಜೊತೆ ಸವಿಯಲು ಕೊಡಿ.

ಬ್ರೆಡ್‌ ಪನೀರ್‌ ಬಜ್ಜಿ

ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, 2-3 ಆಲೂ (ಬೇಯಿಸಿ ಮಸೆದಿಡಿ), 10-12 ಬ್ರೆಡ್‌ ಸ್ಲೈಸ್‌, ಅಷ್ಟೇ ಪ್ರಮಾಣದ ಪನೀರ್‌ ಸ್ಲೈಸ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪುಡಿಮೆಣಸು, ಓಮ, ಚಾಟ್‌ಮಸಾಲ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಒಂದು ಬಟ್ಟಲಿಗೆ ಕಡಲೆಹಿಟ್ಟು, ಉಪ್ಪು, ಖಾರ, ಓಮ, ತುಸು ಇಂಗು ಎಲ್ಲಾ ಸೇರಿಸಿ ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಇನ್ನೊಂದು ಬಟ್ಟಲಲ್ಲಿ ಮಸೆದ ಆಲೂವಿಗೆ ಪುಡಿಮೆಣಸು, ಉಪ್ಪು, ಚಾಟ್‌ಮಸಾಲ, 2 ಬಗೆ ಪೇಸ್ಟ್ ಹಾಕಿ ಮಿಶ್ರಣ ಕಲಸಿಡಿ. ಬ್ರೆಡ್‌ ಸ್ಲೈಸ್‌ನ್ನು ತ್ರಿಕೋನಾಕಾರಾಗಿ ಕತ್ತರಿಸಿ ಬೆಣ್ಣೆ ಹಚ್ಚಿರಿ. ತೆಳುವಾದ ಪನೀರ್‌ ಸ್ಲೈಸ್‌ ಅಂಟಿಸಿ. ಇವೆರಡರ ಮಧ್ಯೆ ಆಲೂ ಮಿಶ್ರಣ ಸ್ಯಾಂಡ್‌ವಿಚ್‌ ಆಗಲಿ. ಈಗ ಈ ಜೋಡಿ ಸ್ಲೈಸ್‌ನ್ನು ಕಡಲೆಹಿಟ್ಟಲ್ಲಿ ಅದ್ದಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಚಿತ್ರದಲ್ಲಿರುಂತೆ ನೀಟಾಗಿ ಕತ್ತರಿಸಿ ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ