ನೀವು ನಿಮ್ಮ ಮುಟ್ಟಿನ ಬಗ್ಗೆ ಕೂಲಂಕಶವಾಗಿ ಗಮನಹರಿಸಿದರೆ ನೀವು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು.

ಮುಟ್ಟು ಅಂದರೇನು?

ನಮ್ಮ ದೇಹ ನೈಸರ್ಗಿಕ ನಿಯಮಗಳು ಹಾಗೂ ಅದರ ಕ್ರಿಯಾಕಲಾಪಗಳನ್ನು ಅನುಸರಿಸುತ್ತದೆ. ಪ್ರತಿಯೊಬ್ಬ ಹುಡುಗಿ ಅಥವಾ ಮಹಿಳೆಯ ಮುಟ್ಟು 21-35 ದಿನಗಳೊಳಗೆ ಮುಗಿಯುತ್ತದೆ. ಒಂದು ಕ್ಯಾಲೆಂಡರ್‌ ತಿಂಗಳಲ್ಲಿ 2 ಸಲ ಮುಟ್ಟು ಆಗಬಹುದು ಎನ್ನುವುದನ್ನು ಇದು ಬಿಂಬಿಸುತ್ತದೆ. ಪ್ರತಿಯೊಂದು ಚಕ್ರವನ್ನು ಎರಡು ಹಂತಗಳಲ್ಲಿ ವಿಂಗಡಿಸಬಹುದು. ಫಾಲಿಕ್ಯೂಲರ್‌ ಫೇಸ್ ಮತ್ತು ಲ್ಯೂಟಿಯಲ್ ಫೇಸ್‌. ನಿಮ್ಮ ಮುಟ್ಟಿನ ಮೊದಲ ದಿನ ಫಾಲಿಕ್ಯೂಲರ್‌ ಫೇಸ್‌ನ ಆರಂಭವನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಮೆದುಳಿನಲ್ಲಿ ಉತ್ತೇಜನ ಹಾರ್ಮೋನ್‌ ಎಫ್‌ಎಸ್‌ಎಚ್‌, ಇದು ಫೀಮೇಲ್ ಸೆಕ್ಸ್ ಹಾರ್ಮೋನ್‌ ಆಗಿದೆ. ಇದು ಮೆದುಳಿನಲ್ಲಿ ಉಗಮಗೊಂಡು ಅಂಡಾಣು ಬಿಡುಗಡೆಗೊಳ್ಳಲು ಉತ್ತೇಜಿಸುತ್ತದೆ. ಗರ್ಭಾಶಯದ ಮಟ್ಟನ್ನು ಉತ್ತೇಜಿತಗೊಳಿಸಲು ಈಸ್ಟ್ರೋಜನ್‌ ಬಿಡುಗಡೆಗೊಳಿಸಲು ಫಾಲಿಕ್‌ ನೆರವಾಗುತ್ತದೆ.

ಎರಡನೇ ಹಂತದ ಆರಂಭ ಅಂಡಾಣು ಬಿಡುಗಡೆಯ ಜೊತೆಗೆ ಆಗುತ್ತದೆ. ಅದು ನ್ಯೂಟ್ರಿಯಲ್ ಫೇಸ್‌ ನ ಆರಂಭವನ್ನು ಸೂಚಿಸುತ್ತದೆ. ಈ ಹಂತದಲ್ಲಿ  ಅಂಡಕೋಶ ಗರ್ಭಕೋಶದ ಪದರವನ್ನು ಪರಿಪಕ್ವಗೊಳಿಸಲು ಪ್ರೊಜೆಸ್ಟ್ರಾನ್‌ ಹಾರ್ಮೋನ್‌ ನ್ನು ಬಿಡುಗಡೆಗೊಳಿಸುತ್ತದೆ. ಅದನ್ನು ಭ್ರೂಣದ ಬೆಳವಣಿಗೆ ಪ್ರಕ್ರಿಯೆಗೆ ಸಿದ್ಧಗೊಳಿಸುತ್ತದೆ. ಒಂದು ವೇಳೆ ಗರ್ಭ ಪ್ರಕ್ರಿಯೆ ನಿಲ್ಲದೆ ಹೋದರೆ, ಪ್ರೊಜೆಸ್ಟ್ರಾನ್‌ ಮಟ್ಟ ಕುಸಿಯುತ್ತದೆ ಹಾಗೂ ರಕ್ತಸ್ರಾವ 14 ದಿನಗಳೊಳಗೆ ಆಗುತ್ತದೆ ಹಾಗೂ ಲ್ಯೂಟಿಯಲ್ ಫೇಸ್ ಅಂತ್ಯಗೊಳ್ಳುತ್ತದೆ.

21-35 ದಿನಗಳ ಸಾಮಾನ್ಯ ಮುಟ್ಟು ಅಂಡಾಣು ಬಿಡುಗಡೆ ಪ್ರಕ್ರಿಯೆ ನೆರವೇರಿತು ಹಾಗೂ ಎಲ್ಲ ಲೈಂಗಿಕ ಹಾರ್ಮೋನುಗಳು ನೈಸರ್ಗಿಕವಾಗಿ ಗರ್ಭ ಧರಿಸಲು ಸಮತೋಲನ ಹೊಂದಿವೆ ಎಂಬುದನ್ನು ತೋರಿಸುತ್ತದೆ. 3-5 ದಿನಗಳು ಅಥವಾ ಅದಕ್ಕೂ ಹೆಚ್ಚಿನ ದಿನಗಳವರೆಗೆ ಮುಂದುವರಿದ ಮುಟ್ಟಿನಿಂದ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಅದೇನೆಂದರೆ ಅಂಡಾಣು ಬಿಡುಗಡೆ ನಿಯಮಿತವಾಗಿಲ್ಲ ಅಥವಾ ಅಸ್ತಿತ್ವದಲ್ಲಿ ಇಲ್ಲ. ಇದು ಯಾವಾಗ ಆಗುತ್ತದೆಂದರೆ, ಒಂದು ಫಾಲಿಕ್‌ ಪರಿಪಕ್ವ ಆಗಿರುವುದಿಲ್ಲ ಹಾಗೂ ಅಂಡಾಕಾರ ಆಗಿರುವುದಿಲ್ಲ. ಪ್ರೊಜೆಸ್ಟ್ರಾನ್‌ ನ್ನು ಬಿಡುಗಡೆಗೊಳಿಸಲು ಅನುಮತಿ ನೀಡುವುದಿಲ್ಲ.

ಗರ್ಭಕೋಶದ ಪದರ ಈಸ್ಟ್ರೋಜನ್‌ ನ ಕಾರಣದಿಂದ ನಿರ್ಮಾಣ ಪ್ರಕ್ರಿಯೆಯನ್ನು ಮುಂದುವರಿಸಿರುತ್ತದೆ. ಆ ಪದರ ಎಷ್ಟೊಂದು ದಪ್ಪಗಾಗಿ ಬಿಡುತ್ತದೆ ಎಂದರೆ, ಅದೇ ಕಾರಣದಿಂದ ಅತಿ ರಕ್ತಸ್ರಾವ ಆಗುತ್ತದೆ.

ಒಂದು ಕಡಿಮೆ ಮುಟ್ಟಿನ ಅವಧಿ 21 ದಿನಗಳು ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ. ಇದು ಅಂಡಾಣು ಬಿಡುಗಡೆ ಪ್ರಕ್ರಿಯೆ ಅಸ್ತಿತ್ವದಲ್ಲಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅದರ ಜೊತೆ ಜೊತೆಗೆ ನಿಮ್ಮ ಅಂಡಕೋಶದಲ್ಲಿ ಸಾಮಾನ್ಯಕ್ಕಿಂತ ಅತಿ ಕಡಿಮೆ ಸಂಖ್ಯೆಯಲ್ಲಿ ಅಂಡಾಣುಗಳು ಉತ್ಪತ್ತಿಯಾಗುತ್ತವೆ. ನಿಮ್ಮ ಮುಟ್ಟು ನಿಲ್ಲುವ ದಿನಗಳು ಸಮೀಪಿಸಿವೆ ಎನ್ನುವುದನ್ನು ಇದು ತೋರಿಸುತ್ತದೆ. ಅಂಡಕೋಶದಲ್ಲಿ ಅಂಡಾಣುಗಳು ಕುಗ್ಗುತ್ತಿರುವ ಸಂಖ್ಯೆಯ ಜೊತೆಗೆ ಮೆದುಳು ಒಂದು ಫಾಲಿಕ್‌ ಅಭಿವೃದ್ಧಿಗೊಳಿಸಲು ಅಂಡಕೋಶವನ್ನು ಉತ್ತೇಜಿತಗೊಳಿಸಲು ಹೆಚ್ಚು ಎಫ್‌ಎಸ್‌ಎಚ್‌ ನ್ನು ಬಿಡುಗಡೆಗೊಳಿಸುತ್ತದೆ. ಇದರ ಪರಿಣಾಮ ಎಂಬಂತೆ ಅವಧಿಗೆ ಮುನ್ನ ಫಾಲಿಕ್‌ ಮತ್ತು ಅಂಡಾಣು ಬೆಳವಣಿಗೆಯಾಗುತ್ತದೆ. ಒಮ್ಮೊಮ್ಮೆ ರಕ್ತ ಸ್ರಾವ ಆಗಲು ಇದೂ ಕಾರಣವಾಗಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ